ಅಗರ್ತಬೈಲು ಲಕ್ಷ್ಮೀವೆಂಕಟ್ರಮಣ ದೇವರ ಮಠದ ಬ್ರಹ್ಮಕಲಶ- ಧಾರ್ಮಿಕ ಸಭೆ

Puttur_Advt_NewsUnder_1
Puttur_Advt_NewsUnder_1

agarthaagartha1 ಪುತ್ತೂರು: ಕರ್ತವ್ಯ ಸಕಾರಗೊಳ್ಳಲು ಮತ್ತು ಬದುಕು ಚೆನ್ನಾಗಿರಬೇಕಾದರೆ  ಧರ್ಮದ ಪ್ರಜ್ಞೆ ಬೇಕು ಎಂದು ಶ್ರೀ ಕ್ಷೇತ್ರ ಒಡಿಯೂರು ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು. ಬೆಳಿಯೂರುಕಟ್ಟೆ ಅಗರ್ತಬೈಲು ಶ್ರೀ ಲಕ್ಷ್ಮೀ ವೆಂಕಟ್ರಮಣ ಮಠದ ಬ್ರಹ್ಮಕಲಶೋತ್ಸವದ ಪ್ರಯುಕ್ತ ನಾಲ್ಕನೇ ದಿನ ಜ.20 ರಂದು ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಧರ್ಮದ ತಿಳುವಳಿಕೆ ಬಂದರೆ ಧಾರ್ಮಿಕ ಕೆಲಸಗಳು ನಡೆಯಲು ಸಾಧ್ಯ ಎಂದು ಸ್ವಾಮೀಜಿ ಹೇಳಿದರು. ವ್ಯಕ್ತಿಗೆ ಸಂಸ್ಕಾರ ಸಿಕ್ಕಿದಾಗ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಎಂದ ಅವರು ಪ್ರಕೃತಿಗೆ ವಿರೋಧವಾದ ಕೆಲಸವನ್ನು ವಿರೋಧಿಸುವುದು ನಮ್ಮ ಕರ್ತವ್ಯ ಎಂದು ಮಾರ್ಗದರ್ಶನ ನೀಡಿದರು.

ಧರ್ಮವನ್ನು ಎತ್ತಿ ಹಿಡಿದರೆ ಅದು ನಮ್ಮನ್ನು ಎತ್ತಿ ಹಿಡಿಯುತ್ತದೆ-ಶಕುಂತಳಾ ಶೆಟ್ಟಿ: ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸಂಸದೀಯ ಕಾರ‍್ಯದರ್ಶಿ, ಶಾಸಕಿ ಶಕುಂತಳಾ ಟಿ. ಶೆಟ್ಟಿಯವರು ಮಾತನಾಡಿ, ಊರಿನಲ್ಲಿ ಅಜೀರ್ಣಾವಸ್ಥೆಯಲ್ಲಿರುವ ದೇವಾಲಯಗಳನ್ನು ಎಲ್ಲರೂ ಸೇರಿ ಅಭಿವೃದ್ಧಿ ಪಡಿಸಿದರೆ ಊರಿಗೆ ಸುಭಿಕ್ಷೆಯಾಗುತ್ತದೆ ಎಂದು ತಾನು ಅರಿತುಕೊಂಡವಳು. ಧರ್ಮವನ್ನು ನಾವು ಎತ್ತಿ ಹಿಡಿದರೆ ಧರ್ಮ ನಮ್ಮನ್ನು ಎತ್ತಿ ಹಿಡಿಯುತ್ತದೆ ಎಂದು ಹೇಳಿದರು.

ಸಂಪ್ರದಾಯ,ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಆಗಬೇಕು-ನಳಿನ್: ಸಂಸದ ನಳಿನ್ ಕುಮಾರ್ ಕಟೀಲು ಅವರು ಮಾತನಾಡಿ, ನಮ್ಮ ಸಂಪ್ರದಾಯ ಮತ್ತು ನಂಬಿಕೆಯನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಆದರೆ ಬ್ರಹ್ಮಕಲಶೋತ್ಸವದಂತಹ ಧಾರ್ಮಿಕ ಕಾರ‍್ಯಕ್ರಮಗಳು ಸಾರ್ಥಕ ಎಂದರು. ಹಿರಿಯರು ನಂಬಿಕೊಂಡು ಬಂದಿದ್ದ ಲಕ್ಷ್ಮೀ ವೆಂಕಟ್ರಮಣ ದೇವರಿಗೆ ನೂತನ ಮಠವನ್ನು ನಿರ್ಮಿಸುವ ಮೂಲಕ ಅಗರ್ತಬೈಲಿನ ಮೂರು ಕುಟುಂಬದವರು ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡಿದ್ದಾರೆ ಎಂದು ಹೇಳಿ ಅಭಿನಂದನೆ ಸಲ್ಲಿಸಿದರು.

 ಚಲನಚಿತ್ರ ನಿರ್ದೇಶಕ ಸುಧಾಕರ ಭಂಡಾರಿ ಸಾಜ, ಉಳ್ಳಾಲ ಎಸ್.ಕೆ. ಹಾಸ್ಪಿಟಲ್‌ನ ಡಾ. ಸದಾಶಿವ ಪೋಳ್ನಾಯ, ಪುತ್ತೂರು ಬಂಟರ ಸಂಘದ ಅಧ್ಯಕ್ಷ ಮನವಳಿಕೆ ಗುತ , ಮಂಗಳೂರು ವಿ.ವಿ. ಸಿಂಡಿಕೇಟ್ ಸದಸ್ಯ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ಸಂದರ್ಭೋಚಿತವಾಗಿ ಮಾತನಾಡಿದರು. ಬೆಳಿಯೂರುಗುತ್ತು ಸೀತಾರಾಮ ರೈ, ಕೆದಂಬಾಡಿ ಮಠ ಸಂಜೀವ ರೈ ಪೈಕ, ಬೆಳ್ಳಿಪ್ಪಾಡಿ ರಂಜನ್ ಕುಮಾರ್ ರೈ, ಮುಗೆರೋಡಿ ಸದಾನಂದ ಮೇಲಾಂಟ, ಕೆಳಗಿನ ಮನೆ ವಿಶ್ವನಾಥ ರೈ, ಗುಂಡ್ಯಡ್ಕ ಡಾ. ಸತ್ಯವತಿ ಆರ್. ಆಳ್ವ, ಕರುಣಾಕರ ರೈ ಗುಂಡ್ಯಡ್ಕ ಗೌರವ ಉಪಸ್ಥಿತರಿದ್ದರು. ಮಠದ ಆಡಳಿತ ಸಮಿತಿಯ ಆಡಳಿತ ಮೊಕ್ತೇಸರ ಬೆಳಿಯೂರು ಬೀಡು ಜತ್ತಪ್ಪ ರೈ, ಮೊಕ್ತೇಸರರಾದ ಗುಂಡ್ಯಡ್ಕ ಕರಿಯಪ್ಪ ರೈ, ಅಗರ್ತಬೈಲು ಸದಾಶಿವ ರೈ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಬೆಳಿಯೂರು ಬೀಡು ಡಾ. ಬಿ. ಸಂಜೀವ ರೈ, ಕಾರ‍್ಯಾಧ್ಯಕ್ಷ ಗುಂಡ್ಯಡ್ಕ ಯನ್.ಜಿ. ಭಾಸ್ಕರ ರೈ ಉಪಸ್ಥಿತರಿದ್ದರು.

ಸನ್ಮಾನ : ಮಠದ ಬ್ರಹ್ಮಕಲಶೋತ್ಸವದ ನೇತೃತ್ವ ವಹಿಸಿದ ವೇ| ಮೂ| ಪುರೋಹಿತ ರತ್ನ ಶ್ರೀ ಗೋಪಾಲಕೃಷ್ಣ ಆಚಾರ್ಯ ಕಾರ್ಕಳ ಮತ್ತು ಗೋಪಾಲಕೃಷ್ಣ ಅಡಿಗ, ಮಂಜುನಾಥ ಶೆಟ್ಟಿ ಕುಟುಂಬ, ಗುಂಡ್ಯಡ್ಕ ಭಾಸ್ಕರ ರೈ ದಂಪತಿ, ಡಿಂಬ್ರಿಗುತ್ತು ಕೊರಗಪ್ಪ ರೈ ಕುಟುಂಬ, ಚಪ್ಪರದ ಕೆಲಸದ ಪರಿಣಿತ ಬಾಲಕೃಷ್ಣ ಗೌಡ ಸರೋಳಿಕಾನ, ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ  ಸಂಪ್ಯ ಠಾಣಾ ಎಸ್,ಐ. ರವಿ ಬಿ.ಎಸ್. ಅವರನ್ನು ಮಠದ ವತಿಯಿಂದ ಸನ್ಮಾನಿಸಲಾಯಿತು. ಒಂದು ಲಕ್ಷ ರೂಪಾಯಿ ಮತ್ತು ಹೆಚ್ಚು ದೇಣಿಗೆ ನೀಡಿದ ದಾನಿಗಳನ್ನು ಮತ್ತು ಅನ್ನದಾನ ಸೇವೆ ಮಾಡಿಸಿದವರಿಗೆ ಸ್ಮರಣಿಕೆ ಮತ್ತು ಶಾಲು ನೀಡಿ ಗೌರವಿಸಲಾಯಿತು.

ಅದಿತಿ ಆಳ್ವ ಅಗರ್ತಬೈಲು ಪ್ರಾರ್ಥಿಸಿದರು. ಎಂ.ಬಿ. ವಿಶ್ವನಾಥ ರೈ ಸ್ವಾಗತಿಸಿದರು. ಡಾ. ಅಶೋಕ ರೈ, ಅಂಬಿಕಾ ರೈ ದಂಪತಿ ಸ್ವಾಮೀಜಿಯವರಿಗೆ ಫಲಪುಷ್ಪ ಸಮರ್ಪಿಸಿದರು. ಸುಮಲತಾ ಜೆ. ರೈ ಅಗರ್ತಬೈಲು, ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಅಗರ್ತಬೈಲು ಡಾ. ದೇವದಾಸ ರೈ, ಎಂ. ಗಂಗಾಧರ ರೈ, ಸುಪ್ರಿಮಾ ಧನಂಜಯ ರೈ, ಅಮೃತ ರೈ ಅಗರ್ತಬೈಲು, ಸುರಕ್ಷಿತ್ ರೈ ಅಗರ್ತಬೈಲು, ನಾರಾಯಣ ಚೌಟ ಬೆಳಿಯೂರುಬೀಡು, ಅಮಿತಾ ದೇವದಾಸ್ ರೈ ಗುಂಡ್ಯಡ್ಕ, ಧನಂಜಯ ರೈ ಅರಂತನಡ್ಕ, ಸದಾಶಿವ ರೈ ಬೀಡು,ಜಯಪ್ರಕಾಶ್ ರೈ ಕಲೆಂಜಿಲ, ಅರುಣ್ ಕುಮಾರ್ ರೈ ಡಿಂಬ್ರಿ ಅವರು  ಅತಿಥಿಗಳಿಗೆ ಶಾಲು ಹಾಕಿ ತಾಂಬೂಲ ನೀಡಿ ಗೌರವಿಸಿದರು. ಕಾರ್ತಿಕ್ ರೈ ಗುಂಡ್ಯಡ್ಕ, ವಿಲಾಸಿನಿ ವಿಠಲ ಶೆಟ್ಟಿ, ಸಂಧ್ಯಾ ಜಯಪ್ರಕಾಶ್ ರೈ, ಸುವಾಸಿನಿ ಪುಟ್ಕಾಜೆ, ಸಂಜೀವ ಪೂಜಾರಿ, ಯೋಗೀಶ್, ಆಶಾ ಜಗನ್ನಾಥ ರೈ ದೇರಾಜೆ, ಶಕಿಲಾ ಅಜಿತ್ ಆಳ್ವ, ಪ್ರೇಮ ರಾಮಣ್ಣ ರೈ, ಸುಭಾಶ್ಚಂದ್ರ ಶೆಟ್ಟಿ ಅಗರ್ತಬೈಲು, ರಾಜೇಶ್ ಬೀಡುರವರು ಅತಿಥಿಗಳಿಗೆ ಸ್ಮರಣಿಕೆ ನೀಡಿದರು.

 ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ‍್ಯದರ್ಶಿ ಗುಂಡ್ಯಡ್ಕ ಎನ್.ಜಿ. ಗೌರಿಶಂಕರ್ ರೈ ವಂದಿಸಿದರು. ವೇದಿಕೆ ಸಮಿತಿ ಸಂಚಾಲಕ ರಾಕೇಶ್ ರೈ ಕೆಡೆಂಜಿ ಕಾರ‍್ಯಕ್ರಮ ನಿರೂಪಿಸಿದರು. ಸಭೆಯ ಬಳಿಕ ಅನ್ನಸಂತರ್ಪಣೆ ಹಾಗೂ ಮಲೆತ್ತಿಕಲ್ಲು ಶ್ರೀ ಪದ್ಮಾವತಿ ದೇವಿ ಸೇವಾ ಸಮಿತಿಯ ಪ್ರಾಯೋಜಕತ್ವದಲ್ಲಿ ಸಂಸಾರ ಕಲಾವಿದರು ಬಲ್ನಾಡು ಇವರು ಅಭಿನಯದಲ್ಲಿ ‘ಬದ್ಕೆರೆ ಕಲ್ಪಿ’ತುಳು ನಾಟಕ ನಡೆಯಿತು.

ಒಂದು ಕೆಲಸವನ್ನು ಕೈಗೆತ್ತಿಕೊಂಡರೆ ಅದನ್ನು ಪೂರ್ಣ ಮಾಡುವ ಗುಣ ಹಾಗೂ ಆಡಳಿತಾತ್ಮಕ ಗುಣ ಬಂಟರಲ್ಲಿದೆ

ಶ್ರೀ ಗುರುದೇವಾನಂದ ಸ್ವಾಮೀಜಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.