ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವದ ಪೂರ್ವಭಾವಿ ಸಭೆ, ಉತ್ಸವ ಸಮಿತಿ ರಚನೆ

Puttur_Advt_NewsUnder_1
Puttur_Advt_NewsUnder_1

narimogru

ನರಿಮೊಗರು: ಶ್ರೀ ಮೃತ್ಯುಂಜ ಯೇಶ್ವರ ದೇವಸ್ಥಾನದಲ್ಲಿ ಮಾ.15, 16ರಂದು ನಡೆಯಲಿರುವ ವರ್ಷಾವಧಿ ಜಾತ್ರೋತ್ಸವ, ಸಾರ್ವಜನಿಕ ಶ್ರೀ ಮಹಾಮೃತ್ಯುಂಜಯ ಹೋಮ ಕಾರ್ಯಕ್ರಮಗಳ ಪೂರ್ವ ಸಿದ್ಧತೆ ಕುರಿತು ಜ.17ರಂದು ಶ್ರೀ ದೇವಳದಲ್ಲಿ ಆಡಳಿತಾಧಿಕಾರಿ ಗಣಪತಿ ಭಟ್‌ರವರ ನೇತೃತ್ವದಲ್ಲಿ ಭಕ್ತರ ಸಮಾಲೋಚನಾ ಸಭೆ ನಡೆಯಿತು.

ಜಾತ್ರೋತ್ಸವದ ಯಶಸ್ಸಿಗೆ ಭಕ್ತರ ಸಹಕಾರ ಅತ್ಯಗತ್ಯ ಎಂದು ಆಡಳಿತಾಧಿ ಕಾರಿ ಗಣಪತಿ ಭಟ್‌ರವರು ಹೇಳಿದರು. ಜಾತ್ರೋತ್ಸವದ ನಿರ್ವಹಣೆಗಾಗಿ ಉತ್ಸವ ಸಮಿತಿಯನ್ನು ರಚಿಸಲಾಯಿತು. ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಜಯಂತ ನಡುಬೈಲು, ಮಾಜಿ ಸದಸ್ಯರಾದ ನಾಗೇಶ್ ನಾಕ್, ಸುಂದರ ಗೌಡ ಕೆ. ನಡುಬೈಲು, ಗುರುರಾಜ್ ಪುತ್ತೂರಾಯ, ಕೊರಗಪ್ಪ ನಾಯ್ಕ, ಶ್ರೀ ದೇವಳದ ಅರ್ಚಕ ರಮೇಶ ಬೈಪಾಡಿತ್ತಾಯ, ಗುಮಾಸ್ತ ಕೇಶವ ನಾಯ್ಕ, ಪ್ರಮುಖರಾದ ವಸಂತ ರೈ ಕಾಳಿಂಗಹಿತ್ಲು, ಕೃಷ್ಣಪ್ರಸಾದ್ ಶರ್ಮ ನರಿಮೊಗರು, ಮಾಧವ ಸಾಲ್ಯಾನ್ ಕುರೆಮಜಲು, ಕುತ್ತಿಗದ್ದೆ ಜನಾರ್ದನ ಜೋಯಿಷ, ಶೀನ ಶೆಟ್ಟಿಗಾರ್ ಹಿಂದಾರು, ಬಿ.ಟಿ. ಮಹೇಶ್ಚಂದ್ರ ಸಾಲ್ಯಾನ್ ನಡುಬೈಲು ಗುತ್ತು, ಸುದರ್ಶನ್ ನಾಡಾಜೆ, ವಿಶ್ವನಾಥ ಗೌಡ ಕರೆಮನೆ, ರಾಮಣ್ಣ ರೈ ಮರ್ತಡ್ಕ, ಅಣ್ಣಿ ಪೂಜಾರಿ ಪಂಜಳ, ಕೇಪು ಕಾಳಿಂಗಹಿತ್ಲು, ಗಣೇಶ್ ಸಾಲ್ಯಾನ್ ಪಜಿಮಣ್ಣು ಮತ್ತಿತರರು ಉಪಸ್ಥಿತರಿದ್ದರು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.