ರಾಮಕುಂಜ ಹಾಲು ಉತ್ಪಾದಕರ ಸಂಘ ಸುವರ್ಣ ಮಹೋತ್ಸವ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ

Puttur_Advt_NewsUnder_1
Puttur_Advt_NewsUnder_1

rama

ಉಪ್ಪಿನಂಗಡಿ: ರಾಮಕುಂಜ ಹಾಲು ಉತ್ಪಾದಕರ ಸಹಕಾರಿ ಸಂಘದ ಸುವರ್ಣ ಮಹೋತ್ಸವ ಆಚರಣೆ ಸಲುವಾಗಿ ಇದರ ನೆನಪಿಗಾಗಿ ಕಚೇರಿ ಕಟ್ಟಡದ ಮೇಲೆ ೨ನೇ ಅಂತಸ್ತು ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ‍್ಯಕ್ರಮ ಜ. 14 ರಂದು ನೆರವೇರಿಸಲಾಯಿತು.

 ನೂತನ ಕಟ್ಟಡ ಕಾಮಗಾರಿಗೆ ದ.ಕ. ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕಿ ಶ್ರೀಮತಿ ವೀಣಾ ಆರ್. ರೈ ಶಿಲಾನ್ಯಾಸ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಶೀಘ್ರ ಕಟ್ಟಡ ಕಾಮಗಾರಿ ಮುಗಿದು ಕಟ್ಟಡದ ಮೂಲಕ ಉತ್ತಮ ಕಾರ‍್ಯ ಯೋಜನೆ ರೂಪುಗೊಳ್ಳಲಿ ಎಂದು ಶುಭ ಹಾರೈಸಿದರು.

 ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಪಿ. ರಾಮ ಭಟ್ ಮಾತನಾಡಿ 1966 ರಲ್ಲಿ ಜನತಾ ಹಾಲು ಉತ್ಪಾದಕರ ಸಂಘ ಸ್ಥಾಪನೆಗೊಂಡು ಬಳಿಕ 1985 ರಲ್ಲಿ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಲ್ಲಿ ವಿಲೀನವಾಗಿ ಇದೀಗ ಸಂಸ್ಥೆ 2016 ರಲ್ಲಿ ಸುವರ್ಣ ಮಹೋತ್ಸವ ಆಚರಿಸುತ್ತಿದೆ, ಇದರ ಅಂಗವಾಗಿ ಹೈನುಗಾರರಿಗಾಗಿ ವಿವಿಧ ಚಟುವಟಿಕೆ, ಕಾರ‍್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

 ಸಮಾರಂಭದಲ್ಲಿ ದ.ಕ. ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ರಾಮಕೃಷ್ಣ ಭಟ್, ವಿಸ್ತರಣಾಧಿಕಾರಿ ಮಂಜುನಾಥ, ಶೀನಪ್ಪ, ಸಂಘದ ಮಾಜಿ ಅಧ್ಯಕ್ಷರಾದ ಉದಯ ಕಶ್ಯಪ್, ಈಶ್ವರ ಭಟ್ ಬಡಿಲ, ಯಂ. ವಾಸಪ್ಪ ಬಂಗ, ಕಟ್ಟಡದ ಇಂಜಿನಿಯರ್ ಭಾಸ್ಕರ, ಜತ್ತಪ್ಪ ಕುಲಾಲ್ ಉಪಸ್ಥಿತರಿದ್ದರು.

 ಸಂಘದ ಕಾರ‍್ಯದರ್ಶಿ ಚಿತ್ತರಂಜನ್ ರಾವ್ ಸ್ವಾಗತಿಸಿ, ಹರಿ ಭಟ್ ವಂದಿಸಿದರು.

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.