Breaking News

ಮದುವೆ ಪ್ರಯುಕ್ತ ಬೀಟಿಗೆ ಸಿದ್ದಿಕ್ ಅವರಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣುಹಂಪಲು ವಿತರಣೆ

Puttur_Advt_NewsUnder_1
Puttur_Advt_NewsUnder_1

hannu vitharaneಪುತ್ತೂರು: ದಾಂಪತ್ಯ ಜೀವನಕ್ಕೆ ಕಾಲಿಸುತ್ತಿರುವ ಬೀಟಿಗೆಯ ಸಿದ್ದಿಕ್ ಎಂಬವರು ತಮ್ಮ ಮದುವೆಯ ಪ್ರಯುಕ್ತ ಜ.20ರಂದು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಆದರ್ಶ ಮರೆದಿದ್ದಾರೆ. ಈ ಸಂದರ್ಭದಲ್ಲಿ ಪುತ್ತೂರು ಬದ್ರಿಯಾ ಜುಮಾ ಮಸೀದಿಯ ಖತೀಬ್ ಎಸ್.ಬಿ ಮುಹಮ್ಮದ್ ದಾರಿಮಿ, ಎಸ್‌ಕೆಎಸ್‌ಎಸ್‌ಎಫ್ ಪುತ್ತೂರು ತಾಲೂಕು ಮಾಜಿ ಅಧ್ಯಕ್ಷ ಶರಫುದ್ದೀನ್ ತಂಙಳ್ ಸಾಲ್ಮರ, ಬೀಟಿಗೆ ಮಸೀದಿ ಕಾರ್ಯದರ್ಶಿ ಇಬ್ರಾಹಿಂ ಕಡವ, ಕೋಶಾಧಿಕಾರಿ ಅಝೀಝ್ ಬೀಟಿಗೆ, ಎಸ್‌ಕೆಎಸ್‌ಎಸ್‌ಎಫ್ ಕಲ್ಲೇಗ ಶಾಖಾಧ್ಯಕ್ಷ ಹನೀಫ್ ಕಲ್ಲೇಗ, ಎಸ್‌ಡಿಪಿಐ ನಗರ ಅಧ್ಯಕ್ಷ ಅಶ್ರಫ್ ಬಾವು, ಮುರ ಮಿಸ್ಬಾಹುಲ್ ಹುದಾ ಯಂಗ್‌ಮೆನ್ಸ್ ಉಪಾಧ್ಯಕ್ಷ ರಶೀದ್ ಮುರ, ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿ ಹಂಝ ಅಫ್ನಾನ್, ಪುತ್ತೂರು ಸಿಟಿ ಫ್ರೆಂಡ್ಸ್ ಅಧ್ಯಕ್ಷ ರಝಾಕ್ ಬಪ್ಪಳಿಗೆ, ಕಾರ್ಯದರ್ಶಿ ಇಬ್ರಾಹಿಂ ಬಪ್ಪಳಿಗೆ, ಇಬ್ರಾಹಿಂ ಜೆ.ಬಿ, ಬಪ್ಪಳಿಗೆ ಗ್ಲೋಬಲ್ ಫ್ರೆಂಡ್ಸ್ ಅಧ್ಯಕ್ಷ ಇಕ್ಬಾಲ್ ಯು.ಕೆ ಜೊತೆಗಿದ್ದರು. ಸರ್ಕಾರಿ ಆಸ್ಪತ್ರೆಯ ವೈಧ್ಯ ಪ್ರದೀಪ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.