ಆಲಂಕಾರು: ಬುಡೇರಿಯಾ ಶ್ರೀ ಉಳ್ಳಾಲ್ತಿ, ಉಳ್ಳಾಕ್ಲು ದೈವಗಳಿಗೆ ವಿಶೇಷ ಪೂಜೆ , ಧಾರ್ಮಿಕ ಉಪನ್ಯಾಸ

Puttur_Advt_NewsUnder_1
Puttur_Advt_NewsUnder_1

ಆಲಂಕಾರು :  ಶ್ರೀ ಉಳ್ಳಾಲ್ತಿ, ಉಳ್ಳಾಕ್ಲು ದೈವಗಳ ಕ್ಷೇತ್ರ ಬುಡೇರಿಯಾದಲ್ಲಿ  ಜ.19ರಂದು ಬ್ರಹ್ಮಶ್ರೀ ವೇದಮೂರ್ತಿ ತಂತ್ರಿ ಸುಬ್ರಹ್ಮಣ್ಯ ಬಳ್ಳಕ್ಕುರಾಯ ಇವರ ನೇತ್ರತ್ವದಲ್ಲಿ ಬೆಳಿಗ್ಗೆ ಸ್ವಸ್ತಿ ಪುಣ್ಯಾಹವಾಚನ, ಗಣಪತಿ ಹೋಮ, ನವಗ್ರಹ ಶಾಂತಿ ಸಹಿತ ಶನಿಶಾಂತಿ ಹೋಮ, ಶನೈಶ್ವರ ಕಲ್ಪೋಕ್ತ ಪೂಜೆ, ನಾಗದೇವರಿಗೆ ನವ ಕಲಶಾಭಿಷೇಕ, ನಾಗರಾಜ ಕಲ್ಪೋಕ್ತ ಪೂಜೆ, ಶ್ರೀ ದೇವಿ ಉಳ್ಳಾಲ್ತಿ, ಉಳ್ಳಾಕ್ಲು, ರುದ್ರ ಚಾಮುಂಡಿ, ಅಣ್ಣಪ್ಪ, ವಾರಾಹಿ, ದಂಡನಾಯಕ ಕಲ್ಕುಡ, ಹಾಗೂ ಗುಳಿಗ ದೈವಗಳಿಗೆ ಕಲಶ ಪ್ರದಾನ ಹೋಮ, ಕಲಶಾಭಿಷೇಕ, ತಂಬಿಲ ನಡೆದು ನಂತರ ಶನಿ ಶಾಂತಿಯ ಪೂರ್ಣಾಹುತಿ ಶನಿ ಕಲ್ಪೋಕ್ತ ಪೂಜೆ ,ದೈವಗಳಿಗೆ ಪೂಜೆ ನಡೆದು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ನಂತರ ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆ ಆಲಂಕಾರಿನ ಮಕ್ಕಳಿಂದ ವೀರಮಣಿ ಕಾಳಗ ಯಕ್ಷಗಾನ ನಡೆಯಿತು. ಸಂಜೆ ಗಂಟೆ   ವಿಶೇಷವಾಗಿ ಅಷ್ಟಾವದಾನ ಸೇವೆ ಸಹಿತ ಶಿವಪಾರ್ವತಿ ಪೂಜೆ ,ನಂತರ ನಾಗ ದೇವರಿಗೆ ಆಶ್ಲೇಷ ಬಲಿ ನಡೆದು ನಂತರ ಶಿವ ಪಾರ್ವತಿ ಪೂಜೆಯ ಮಹಾಮಂಗಳಾರತಿ ಮತ್ತು ಮಹಾಪೂಜೆ, ದೇವಿ ಉಳ್ಳಾಲ್ತಿ ಉಳ್ಳಾಕ್ಲು ದೈವಗಳಿಗೆ ಅಲಂಕಾರ ಪೂಜೆ ನಡೆಯಿತು.
ರಾಜ್ಯ ಸಂಸ್ಕಾರ ಭಾರತಿ ಲೋಕಾ ಕಲಾ ವಿಧ ಪ್ರಮುಖ್ ತುಳುವ ಬೊಳ್ಳಿ ದಯಾನಂದ ಜಿ., ಕತ್ತಲ್‌ಸಾರ್ ಧಾರ್ಮಿಕ ಉಪನ್ಯಾಸ ನೀಡಿ ಅವರು ಮಾತನಾಡುತ್ತಾ ನಾವು ಪ್ರಕೃತಿಯ ಆರಾಧಕರು ಮೂಲನಂಭಿಕೆಯಿಂದ ಮೂಢನಂಭಿಕೆಯತ್ತ ವಾಲುತ್ತಿದ್ದೇವೆ.ಹಿಂದೆ ಹಿರಿಯರು ಪ್ರಾಕೃತಿಕವಾಗಿ ನಾಗದೇವರಿಗೆ ನಾಗ ಬನ, ದೈವಗಳಿಗೆ ದೈವಬನ ಇರುತ್ತಿದ್ದವು. ಅಲ್ಲಿ ನೂರೆಂಟು ಕಾಯಿಲೆಗಳಿಗೆ ಸಾವಿರದೆಂಟು ಔಷದೀಯ ಸಸ್ಯಗಳು ಇರುತ್ತಿದ್ದವು ನಮ್ಮ ಹಿರಿಯರು ಆ ಔಷದೀಯಾ ಸಸ್ಯಗಳನ್ನು ಬಳಸಿ ಬಹಳ ಆರೋಗ್ಯವಂತರಾಗಿದ್ದರು, ಆದರೆ ಅದೆಲ್ಲಾ ಇಂದು ನಶಿಸಿ ಕಾಂಕ್ರೀಟಿಕರಣಗೊಳ್ಳುತ್ತಿದೆ ಎಂದು ವಾಸ್ತವಾಂಶವನ್ನು ತಿಳಿಸಿದರು. ಹಾಗೂ ದುಶ್ಚಟ ಮುಕ್ತರಾಗಿ ಸಂಸ್ಕಾರ ಸಂಸ್ಕೃತಿಯ ಜೀವನ ನಡೆಸಿ ಇತರರಿಗೆ ಮಾದರಿಯಾಗಿ ಬಾಳಬೇಕು ಎಂದರು ಆಡಳಿತ ಪ್ರಮುಖರಾದ ಈಶ್ವರ ಗೌಡ ಪಜ್ಜಡ್ಕ ಪ್ರಸ್ತಾವಿಕ, ಸ್ವಾಗತ, ಧನ್ಯವಾದ ಸಮರ್ಪಿಸಿದರು. ಆನಂದ ಗೌಡ ಪಜ್ಜಡ್ಕ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಆಡಳಿತ ಪ್ರಮುಖರಾದ ಸೂರಪ್ಪ ಪೂಜಾರಿ ಹೊಸಮಜಲು, ಸಂಕಪ್ಪ ಗೌಡ ಗೌಡತ್ತಿಗೆ ಉಪಸ್ಥಿತರಿದ್ದರು. ಪೂಜಾ ಕೈಂಕರ್ಯದಲ್ಲಿ ಅರ್ಚಕರಾದ ಶ್ರೀ ಟಿ.ಅನಂತರಾಮ ಭಟ್ ಸಹಕರಿಸಿದರು. ನಂತರ ಅನ್ನಸಂತರ್ಪಣೆ ನಡೆದ ಬಳಿಕ ಸ್ಥಳೀಯ ಮಕ್ಕಳಿಂದ ನೃತ್ಯ ಪ್ರದರ್ಶನ ನಡೆದು, ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆ ಆಲಂಕಾರಿನ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಗಂಗಾರಾಮ್ ಸಾಮಾಜಿಕ ತುಳು ನಾಟಕ ನಡೆಯಿತು. ಬಂದಂತಹ ಸಾವಿರಾರು ಭಕ್ತರು ಪೂಜಾ ಕೈಂಕರ್ಯದಲ್ಲಿ ಪಾಲ್ಗೋಂಡು ಶ್ರೀ ದೈವದೇವರ ಪ್ರಸಾದ ಸ್ವೀಕರಿಸಿ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು.

buderiya.jpg2 buderiya

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.