ಲೋಕಾಯುಕ್ತರ ಆಗಮನ, ವಿವಾದಿತ ಕಟ್ಟಡ ಪರಿಶೀಲನೆ, ಭೂಮಾಪಕರಿಂದ ಅಳತೆ

Puttur_Advt_NewsUnder_1
Puttur_Advt_NewsUnder_1

ಕಡಬ: ಬಿಳಿನೆಲೆ ಗ್ರಾಮದ ನೆಟ್ಟಣದಲ್ಲಿರುವ ಸುಧೀರ್ ಕುಮಾರ್ ಶೆಟ್ಟಿಯವರಿಗೆ ಸಂಬಂಧಪಟ್ಟ ವಿವಾದಿತ ದುರ್ಗಾಕಾಂಪ್ಲೆಕ್ಸ್ ಕಟ್ಟಡ ಪರಿಶೀಲನೆಗೆ ಮಂಗಳೂರು ಲೋಕಾಯುಕ್ತ ಇನ್ಸ್‌ಪೆಕ್ಟರ್ ಸಿಬ್ಬಂದಿಗಳೊಂದಿಗೆ ಜ. 20 ರಂದು ಆಗಮಿಸಿ ಕಟ್ಟಡ ಜಾಗವನ್ನು ಭೂಮಾಪಕರಿಂದ ದೂರುದಾರರು ಹಾಗೂ ಕಟ್ಟಡ ಮಾಲಕರ ಹಾಗೂ ತಾ.ಪಂ.ಕಾರ್ಯನಿರ್ವಾಹಣಾಧಿಕಾರಿ ಸಮಾಕ್ಷಮ ಅಳತೆ ಮಾಡಿಸಿದರು.
ಬಿಳಿನೆಲೆ ಗ್ರಾಮದ ನೆಟ್ಟಣದಲ್ಲಿ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಸ.ನಂ.4,6ರಲ್ಲಿ ರಸ್ತೆ ಮಾರ್ಜಿನ್‌ನಲ್ಲಿ ಕಟ್ಟಡ ಕಟ್ಟಲಾಗಿದೆ ಎಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ರಮೇಶ್ ವಾಲ್ತಾಜೆ ಎಂಬವರು ಲೋಕಾಯುಕ್ತಕ್ಕೆ ನೀಡಿದ ದೂರಿನಂತೆ ವಾದವಿವಾದವು ಬೆಂಗಳೂರು ಲೋಕಾಯುಕ್ತ ಕೋರ್ಟ್‌ನಲ್ಲಿ ವ್ಯಾಜ್ಯ ನಡೆಯುತ್ತಿದ್ದು ದೂರುದಾರರ ಕೋರಿಕೆಯಂತೆ ಕಟ್ಟಡ ಪರವಾನಿಗೆ ನೀಡುವಲ್ಲಿ ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಯವರು ಸ್ಥಳದ ಸರ್ವೇ ನಡೆಸದೇ ಏಕಾಏಕಿ ಕಟ್ಟಡಕ್ಕೆ ಅನುಮತಿ ನೀಡಿದ್ದು ಕಟ್ಟಡವು ರೋಡ್ ಮಾರ್ಜಿನ್‌ನಲ್ಲಿ ಬರುತ್ತದೆ ಎಂದು ದೂರಿಕೊಂಡಿದ್ದರು. ದೂರನ್ನು ಪರಿಗಣಿಸಿದ ಲೋಕಾಯುಕ್ತ ನ್ಯಾಯಾಲಯ ಮಂಗಳೂರು ಲೋಕಾಯುಕ್ತ ಇನ್ಸ್‌ಪೆಕ್ಟರ್‌ರವರಿಗೆ ಆದೇಶ ನೀಡಿ ಸಂಬಂಧಪಟ್ಟ ಭೂಮಾಪನ ಅಧಿಕಾರಿಗಳಿಂದ ವಿವಾದಿತ ಕಟ್ಟಡ ಸ್ಥಳ ಅಳತೆ ಮಾಡಿಸಿ ವರದಿ ನೀಡುವಂತೆ ಸೂಚಿಸಿದ ಪ್ರಕಾರ ಜ.20ರಂದು ಮಂಗಳೂರು ಲೋಕಾಯುಕ್ತ ಇನ್ಸ್‌ಪೆಕ್ಟರ್ ವಿಜಯಪ್ರಸಾದ್‌ರವರು ತನ್ನ ಸಿಬ್ಬಂದಿಗಳೊಂದಿಗೆ ಆಗಮಿಸಿ ಭೂಮಾಪಕರಿಂದ ಅಳತೆ ಮಾಡಿಸಿದರು. ವಿವಾದಿತ ಕಟ್ಟಡದ ಸುತ್ತಮುತ್ತಲಿನ ಪ್ರದೇಶಗಳನ್ನು ಅಳತೆ ಮಾಡಿ ಗಡಿಗುರುತು ಮಾಡಿದ್ದು ಅಳತೆಯಂತೆ ವಿವಾದಿತ ಕಟ್ಟಡ ಸ್ಥಳವು ರಾಜ್ಯ ಹೆದ್ದಾರಿಯಿಂದ 20ಮೀ ದೂರದಲ್ಲಿರುತ್ತದೆ. ಹಾಗಿದ್ದರೂ ಭೂಗಡಿ ಹಂಚಿನಿಂದ 7ಮೀಟರ್ ಬಿಡಲಾಗಿದೆ ಎಂದು ಇಒ ರವರು ತಿಳಿಸಿದ್ದಂತೆ ಈಗಾಗಲೇ ಸ್ಥಳ ಪರಿಶೀಲಿಸಿದ್ದು ಸಂಪೂರ್ಣ ಅಳತೆ ವರದಿಯನ್ನು ಭೂಮಾಪನಾಧಿಕಾರಿ ಮಹೇಶ್ ರವರು ನೀಡಿದ ಬಳಿಕವಷ್ಟೆ ಮುಂದಿನ ಸವಿವರವಾದ ವರದಿಯನ್ನು ಲೋಕಾಯುಕ್ತ ಇನ್ಸ್‌ಪೆಕ್ಟರ್‌ರವರು ಲೋಕಾಯುಕ್ತ ನ್ಯಾಯಾಲಯಕ್ಕೆ ಸೂಕ್ತ ವರದಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪುತ್ತೂರು ತಾ.ಪಂ.ಕಾರ್ಯನಿರ್ವಾಹಣಾಧಿಕಾರಿ ಜಗದೀಶ್, ದೂರುದಾರ ರಮೇಶ್ ವಾಲ್ತಾಜೆ, ವಿವಾದಿತ ಕಟ್ಟಡ ಮಾಲಕ ಸುಧೀರ್ ಕುಮಾರ್ ಶೆಟ್ಟಿ, ಬಿಳಿನೆಲೆ ಗ್ರಾ.ಪಂ.ಅಧ್ಯಕ್ಷೆ ಶಾರದಾ ದಿನೇಶ್, ಉಪಾಧ್ಯಕ್ಷೆ ಮೇಫಿ ಚೆರಿಯನ್, ಸದಸ್ಯ ಮನೋಜ್ ಕುಮಾರ್ ಉಪಸ್ಥಿತರಿದ್ದರು.
ಭೂಮಾಪಕರಾದ ಮಹೇಶ್ ರವರು ವಿವಾದಿತ ಸ್ಥಳವನ್ನು ಸಂಪೂರ್ಣ ಅಳತೆ ಮಾಡಿ ಗಡಿಯಂಚು ನಮೂದಿಸಿಕೊಂಡರು.

nettana 2

nettana 1..

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.