Breaking News

ಜ.24:ಮಹಾಬಲ-ಲಲಿತಕಲಾ ಸಭಾ ಪುತ್ತೂರು ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದರ್ಬೆಯ ದಂತವೈದ್ಯ ಡಾ| ಶ್ರೀಪ್ರಕಾಶ್ ಬಿ.ರವರ ಮಾತಾಪಿತರಾದ ಬಿ.ಮಹಾಬಲ ಭಟ್ ಮತ್ತು ಲಲಿತಾಂಬಿಕ ಬಿ.ರವರ ಹೆಸರಿನಲ್ಲಿ ಅವರ ನೆನಪಿಗೋಸ್ಕರ ‘ಮಹಾಬಲ-ಲಲಿತಾ ಕಲಾ ಸಭಾ, ಪುತ್ತೂರು’ ಇದರ ಉದ್ಘಾಟನಾ ಸಮಾರಂಭವು ಜ.24ರಂದು ಸಂಜೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ನಟರಾಜ ವೇದಿಕೆಯಲ್ಲಿ ನಡೆಯಲಿದೆ.

ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಶ್ರೇಷ್ಟ ಬಿರುದು ಗಳಿಸಿದ ಸಂಗೀತಕಲಾನಿಧಿ ಪ್ರೊ|. ತೃಚ್ಚಿ ಶಂಕರನ್, ಕೆನಡಾರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕಲಾವಿದ ದಿನೇಶ್ ಹೊಳ್ಳ ಮಂಗಳೂರು ಇವರು ರಚಿಸಿದ ತಂಬೂರಿ, ವೀಣೆ, ಯೋಗದಲ್ಲಿನ ಧ್ಯಾನಾರೂಢ ವ್ಯಕ್ತಿ, ವಾದ್ಯಗಳು, ಪಾದ-ಗೆಜ್ಜೆ, ಯಕ್ಷಗಾನದ ಕಿರೀಟ, ಅಶ್ವತ್ಥ ಎಲೆಯ ಸಂಕೇತವನ್ನೊಳಗೊಂಡಿರುವ ಲಾಂಛನದ ಉದ್ಘಾಟನೆಯನ್ನು ಡೆಲ್ಲಿ ಆಕಾಶವಾಣಿಯ ಮುಖ್ಯ ವಯಲಿನ್ ವಾದಕರಾದ ವಿದ್ವಾನ್ ಡೆಲ್ಲಿ ಪಿ. ಸುಂದರ್‌ರಾಜನ್‌ರವರನ್ನು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾದ ಕಲಾ ವಿಮರ್ಶಕರಾದ ಎ.ಈಶ್ವರಯ್ಯ  ಉಡುಪಿರವರು ಭಾಗವಹಿಸಲಿದ್ದಾರೆ.

ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ: ಬಳಿಕ ನಡೆಯುವ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯಲ್ಲಿ ಹಾಡುಗಾರಿಕೆಯನ್ನು  ಚೆನ್ನೈನ ವಿದ್ವಾನ್ ರಾಮಕೃಷ್ಣಮೂರ್ತಿ, ವಯಲಿನ್‌ನಲ್ಲಿ ಚೆನ್ನೈನ ಡೆಲ್ಲಿ ಪಿ. ಸುಂದರ್‌ರಾಜನ್, ಮೃದಂಗದಲ್ಲಿ ಕೆನಡಾದ ಸಂಗೀತಕಲಾನಿಧಿ ಪ್ರೊ|. ತೃಚ್ಚಿ ಶಂಕರನ್, ಖಂಜಿರದಲ್ಲಿ ಚೆನ್ನೈನ ವಿದ್ವಾನ್ ಕೆ.ವಿ. ಗೋಪಾಲ್ ಕೃಷ್ಣನ್‌ರವರು ಭಾಗವಹಿಸಲಿದ್ದಾರೆ ಮತ್ತು ಶ್ರೇಯಾ ಕೊಳತ್ತಾಯರವರು ಶ್ರುತಿಯಲ್ಲಿ ಹಾಗೂ ಸಾಧನಾ ಸಂಗೀತ ವಿದ್ಯಾಲಯದ ವಿದುಷಿ ಸುಚಿತ್ರಾ ಹೊಳ್ಳರವರ ಶಿಷ್ಯೆ ಮಯೂರಿರವರು ಪ್ರಾರ್ಥನೆಯಲ್ಲಿ ಸಹಕರಿಸಲಿದ್ದಾರೆ ಎಂದು ಮಹಾಬಲ-ಲಲಿತಕಲಾ ಸಭಾದ ಅಧ್ಯಕ್ಷ ಬಿ.ಮಹಾಬಲ ಭಟ್, ಕಾರ್ಯದರ್ಶಿ ಡಾ| ಶ್ರೀಪ್ರಕಾಶ್ ಬಿ, ಸದಸ್ಯರಾದ ಶ್ರೀಮತಿ ಲಲಿತಾಂಬಿಕ ಬಿ, ಶ್ರೀಮತಿ ಅರ್ಚನಾ ಪ್ರಕಾಶ್, ನಿಕ್ಷಿತ್ ಟಿ.ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.