ವಿದ್ಯಾರಶ್ಮಿಯ ಆಡಳಿತಾಧಿಕಾರಿಯಾಗಿ ಅಶ್ವಿನ್

Puttur_Advt_NewsUnder_1
Puttur_Advt_NewsUnder_1

ashvin

ಪುತ್ತೂರು: ಎಸ್.ಎನ್.ಆರ್.ರೂರಲ್ ಎಜ್ಯುಕೇಶನ್ ಟ್ರಸ್ಟ್ ಸವಣೂರು ಇದರ ಆಡಳಿತದ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿಯಾಗಿ ಅಶ್ವಿನ್  ಎಲ್. ಶೆಟ್ಟಿ ಅವರು ನಿಯೋಜನೆಗೊಂಡಿದ್ದಾರೆ. ಅಳಿಕೆ ಸತ್ಯ ಸಾಯಿ ಶಿಕ್ಷಣ ಸಂಸ್ಥೆಯಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪೂರೈಸಿಕೊಂಡು ಮುಂದೆ ಮೈಸೂರಿನ ಜೆ.ಎಸ್.ಎಸ್. ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದರು. ಬಳಿಕ ಆಸ್ಟ್ರೇಲಿಯಾದಲ್ಲಿ ಎಂ.ಎಸ್. ಪದವಿಯನ್ನು ಪಡೆದು ಏರ್ ಬಸ್ ಹೆಲಿಕಾಫ್ಟರ‍್ಸ್‌ನಲ್ಲಿ ಟೆಕ್ನಿಕಲ್ ಮೇನೇಜರ್ ಆಗಿ ಸೇವೆ ಸಲ್ಲಿಸಿದ್ದರು. ಆಸ್ಟ್ರೇಲಿಯಾ ಮತ್ತು ಚೀನಾ ದೇಶಗಳಲ್ಲಿ ಒಟ್ಟು ೮ ವರ್ಷಗಳ ಕಾಲ ಸೇವೆ ಸಲ್ಲಿಸಿದ ಅನುಭವ ಇವರದು. ಇದೀಗ ಆಸ್ಟ್ರೇಲಿಯಾದ ಸದರ್ನ್ ಕ್ವೀನ್ಸ್ ಲ್ಯಾಂಡ್ ವಿಶ್ವ ವಿದ್ಯಾನಿಲಯದಿಂದ ಎಂ.ಬಿ.ಎ. ಪದವಿ ವ್ಯಾಸಂಗ ನಡೆಸುತ್ತಿದ್ದಾರೆ. ಉತ್ತಮ ಕ್ರೀಡಾ ಪಟುವೂ ಆಗಿರುವ ಇವರು ಇದೀಗ ಮಂಗಳೂರಿನಲ್ಲಿ ತನ್ನ ಉದ್ಯಮವನ್ನು ಆರಂಭಿಸುತ್ತಿದ್ದಾರೆ. ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ. ಸೀತಾರಾಮ ರೈ ಅವರ ಪುತ್ರಿ ರಶ್ಮಿ ಅವರನ್ನು ವಿವಾಹವಾಗಿದ್ದು, ಅಥರ್ವ ಎ. ಶೆಟ್ಟಿ ಎಂಬ ಪುತ್ರನನ್ನು ಪಡೆದಿದ್ದಾರೆ.

.28ಕ್ಕೆ ಅಧಿಕಾರ ಸ್ವೀಕಾರ

ನೂತನ ಆಡಳಿತಾಧಿಕಾರಿಯಾಗಿ ನಿಯೋಜನೆಗೊಂಡಿರುವ ಅಶ್ವಿನ್ ಎಲ್. ಶೆಟ್ಟಿಯವರು ಜ.೨೮ ರಂದು ಸಂಸ್ಥೆಯ ಅಧಿಕಾರವನ್ನು ಸ್ವೀಕರಿಸಲಿದ್ದಾರೆ

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.