ಜ.21ರಿಂದ 25ರ ತನಕ ರಾಮಕುಂಜೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನದಲ್ಲಿ ಜ.21ರಿಂದ 25ರ ತನಕ ವಾರ್ಷಿಕ ಜಾತ್ರೋತ್ಸವ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ಜ.೨೧ರಂದು ಸಂಜೆ ಧ್ವಜಾರೋಹಣ, ಬಲಿ ಹೊರಟು ಉತ್ಸವ, ಕಾಜರುಕ್ಕು ಬದಿಯ ಕಟ್ಟೆಗಳಲ್ಲಿ ಕಟ್ಟೆಪೂಜೆ ನಡೆಯಲಿದೆ. ಜ.22ರಂದು ಬೆಳಿಗ್ಗೆ ರಾಮಕುಂಜ ಶಾಲಾ ಮಕ್ಕಳಿಂದ ಹಾಗೂ ಸಾರ್ವಜನಿಕರಿಂದ ಹಸಿರು ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ. ಬಳಿಕ ಬಲಿ ಹೊರಟು ಉತ್ಸವ ನಡೆಯಲಿದೆ. ರಾತ್ರಿ ಶ್ರೀ ದೇವರ ಬಲಿ ಹೊರಟು ಉತ್ಸವ, ಕೆರೆಕರೆ, ಇರ್ಕಿಮಠ, ಕುಕ್ಕೇರಿಕಟ್ಟೆ, ಸಂಪ್ಯಾಡಿ, ಶಾರದಾನಗರ, ಕೆದಿಲ ದಾರಿಯಲ್ಲಿ ಬರುವ ಕಟ್ಟೆಗಳಲ್ಲಿ ಕಟ್ಟೆಪೂಜೆ ನಡೆಯಲಿದೆ. ಜ.23ರಂದು ಬೆಳಿಗ್ಗೆ ನಂದಾದೀಪೋತ್ಸವ ನಡೆಯಲಿದೆ. ಬಳಿಕ ಯಕ್ಷನಂದನ ಗೋಕುಲನಗರ ಇವರಿಂದ ತಾಳಮದ್ದಳೆ ನಡೆಯಲಿದೆ. ಮಧ್ಯಾಹ್ನ ದರ್ಶನ ಬಲಿ ನಡೆಯಲಿದೆ. ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಬಲಿ ಹೊರಟು ಇರ್ಕಿಮಠದ ದಂಡತೀರ್ಥದಲ್ಲಿ ಕೆರೆ ಉತ್ಸವ, ದೇವರ ಗುಡ್ಡೆ, ತಾವೂರು ಕಟ್ಟೆಗಳಲ್ಲಿ ಕಟ್ಟೆಪೂಜೆ ನಡೆಯಲಿದೆ. ಬಳಿಕ ಶ್ರೀ ರಾಮ ಸಂದೇಶನೋತ್ಸವ, ಶಾಲಾ ಕಾಲೇಜು ಬಳಿಯ ಎಲ್ಲಾ ಕಟ್ಟೆಗಳಲ್ಲಿ ಕಟ್ಟೆಪೂಜೆ, ದೈವಗಳ ಭಂಡಾರ ಹಿಡಿಯುವುದು, ವಸಂತ ಕಟ್ಟೆಗಳು, ಉತ್ಸವ ನಡೆಯಲಿದೆ. ರಾತ್ರಿ ಶ್ರೀ ರಾಮಕುಂಜೇಶ್ವರ ಮಿತ್ರವೃಂದ ರಾಮಕುಂಜ ಇವರಿಂದ ೨೪ನೇ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ‘ಪಿಂಗಾರ ಕಲಾವಿದೆರ್ ಬೆದ್ರ’ಇವರಿಂದ “ಏರೆನ್ ಎಂಚ ನಂಬುನು…?” ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.

.೨೪: ಮಹಾರಥೋತ್ಸವ: ಜ.24ರಂದು ಬೆಳಿಗ್ಗೆ ಬಲಿ ಹೊರಟು ಉತ್ಸವ, ನಂತರ ಶ್ರೀ ಮಹಾಗಣಪತಿ ದೇವರಿಗೆ ೪೮ ತೆಂಗಿನಕಾಯಿಗಳ ಗಣಪತಿ ಹೋಮ ನಡೆಯಲಿದೆ. ರಾತ್ರಿ ಬಲಿ ಹೊರಡುವುದು ಬಳಿಕ ಮಹಾರಥೋತ್ಸವ ನಡೆದು ಉತ್ಸವಾದಿಗಳು, ಶ್ರೀ ಭೂತಬಲಿ ನಡೆಯಲಿದೆ. ರಾತ್ರಿ ಸಸಿಹಿತ್ಲು ಶ್ರೀ ಭಗವತಿ ದಶಾವತಾರ ಯಕ್ಷಗಾನ ಮಂಡಳಿಯವರಿಂದ “ಕಂಚಿಲ್ದ ಪರಕೆ” ಎಂಬ ತುಳು ಯಕ್ಷಗಾನ ಬಯಲಾಟ ನಡೆಯಲಿದೆ. ಜ.೨೫ರಂದು ಬೆಳಿಗ್ಗೆ ಕವಾಟೋದ್ಘಾಟನೆ, ಅಭಿಷೇಕ, ಸಂಜೆ ಅವಭೃತ ಸವಾರಿ, ರಾಮಕುಂಜದಿಂದ ಕೆ.ಸಿ.ಫಾರ್ಮ್, ಕೊಲ ಸದಾಶಿವ ದೇವಸ್ಥಾನ, ಹೊಳೆಬದಿಯವರೆಗಿನ ಎಲ್ಲಾ ಕಟ್ಟೆಗಳಲ್ಲಿ ಕಟ್ಟೆಪೂಜೆ ನಡೆಯಲಿದೆ. ರಾತ್ರಿ ಧ್ವಜಾವರೋಹಣ,ಮಹಾಪೂಜೆ, ಮಂತ್ರಾಕ್ಷತೆ ನಡೆಯಲಿದೆ.

.೨೬:ದೈವಗಳ ನೇಮ: ಜ.೨೬ರಂದು ಬೆಳಿಗ್ಗೆ ಸಂಪ್ರೋಕ್ಷಣೆ, ನಾಗಾರಾಧನೆ ನಡೆಯಲಿದೆ. ರಾತ್ರಿ ಕಲೆಂಬಿತ್ತಾಯ, ಕಲ್ಲುರ್ಟಿ, ಅಂಗಣ ಪಂಜುರ್ಲಿ ದೈವಗಳ ನೇಮ ನಡೆಯಲಿದೆ. ಜ.೨೭ರಂದು ಬೆಳಿಗ್ಗೆ ಶಿರಾಡಿ, ರುದ್ರಚಾಮುಂಡಿ, ಗಿಳಿರಾಮ, ಗುಳಿಗ ದೈವಗಳ ನೇಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.