Breaking News

ಜ.23: ಸ್ವರ ಮಾಧುರ್ಯದಿಂದ ಅಭಿನಂದನಾ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸ್ವರಮಾಧುರ್ಯ ಕಲಾ ಮತ್ತು ಸೇವಾ ಟ್ರಸ್ಟ್ ಪುತ್ತೂರು, ಬಿರುಮಲೆ ಬೆಟ್ಟ ಅಭಿಮಾನಿ ಬಳಗ, ವಸತಿ ನಿಲಯ ಬಿರುಮಲೆ ಸಂಯುಕ್ತಾಶ್ರಯದಲ್ಲಿ ಅಭಿನಂದನಾ ಕಾರ‍್ಯಕ್ರಮ ಜ.23ರಂದು ಬಿರುಮಲೆ ವಸತಿ ನಿಲಯದ ವಠಾರದಲ್ಲಿ ನಡೆಯಲಿದೆ. ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ರೆ|ಡಾ|ಆಂಟನಿ ಪ್ರಕಾಶ್ ಮೊಂತೆರೋ ಅಧ್ಯಕ್ಷತೆ ವಹಿಸಲಿದ್ದಾರೆ. ಕೋಣಾಜೆ ಮಂಗಳ ಗಂಗೋತ್ರಿ ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ವಿಭಾಗ ಸಂಯೋಜಕ ಡಾ|ಮೋಹನ್ ಎಸ್. ಸಿಂಘೇ ಉದ್ಘಾಟಿಸಲಿದ್ದಾರೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಿವೃತ್ತ ತಹಶೀಲ್ದಾರ್ ಸಿ.ಎಚ್ ಕೋಚಣ್ಣ ರೈ, ನಿಯೋಜಿತ ಜಿಲ್ಲಾ ಹಾಗೂ ಸತ್ರ ನ್ಯಾಯಾದೀಶ ಪರಮೇಶ್ವರ ಪ್ರಸನ್ನ ಬಿ. ಇವರನ್ನು ವಕೀಲ ಶ್ರೀಗಿರೀಶ್ ಮಳಿ ಅಭಿನಂದಿಸಲಿದ್ದಾರೆ. ವಕೀಲ ಮಹೇಶ್ ಕಜೆ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಅತಿಥಿಗಳಾಗಿ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಕುಂಬ್ರ ದುರ್ಗಾ ಪ್ರಸಾದ್ ರೈ, ಚಿದಾನಂದ ಕಾಮತ್ ಕಾಸರಗೋಡು ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟಕರಾದ ತಾರನಾಥ ಮತ್ತು ನ್ಯಾಯವಾದಿ ಜನಾರ್ದನ ಬೆಟ್ಟಂಪಾಡಿ ತಿಳಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.