ಸಂಪೂರ್ಣ ಸ್ವದೇಶಿ ಉತ್ಪನ್ನಗಳ ನಿರಾಮಯ ದೇಸೀಯ ಮಳಿಗೆ

Puttur_Advt_NewsUnder_1
Puttur_Advt_NewsUnder_1

swadeshi1 swadeshi

ಪುತ್ತೂರು: ಬೊಳುವಾರು ಹಿರಣ್ಯ ಕಾಂಪ್ಲೆಕ್ಸ್‌ನಲ್ಲಿ ಸಂಪೂರ್ಣ ಸ್ವದೇಶಿ ಉತ್ಪನ್ನಗಳನ್ನು ಹೊಂದಿದ ನಿರಾಮಯ ದೇಶಿಯ ಮಳಿಗೆ ಇತ್ತೀಚೆಗೆ ಪ್ರಾರಂಭಗೊಂಡಿತು.

ಮಳಿಗೆಯಲ್ಲಿ ಸ್ವದೇಶಿ ಹಸುವಿನ ಮೂರು ತಿಂಗಳವರೆಗೆ ಕೆಡದ ಗೌಮೃತ ಹಾಲು, ಗೋವಿನ ಹಾಲು ಗೋಮೂತ್ರ ಗೋಮಯ ಬಳಸಿಕೊಂಡು ಮಾಡಿದ ಉತ್ಪನ್ನಗಳು, ಸಾವಯವ ದವಸಧಾನ್ಯಗಳು, ಸಾವಯವ ಹಣ್ಣಿನ ಪಾನೀಯಗಳು, ಗ್ರೀನ್ ಟೀಗಳು, ಸಾವಯವ ಶಿಶು ಆಹಾರಗಳು, ಕಿರುಧಾನ್ಯ ಮಿಶ್ರಣಗಳ ಆರೋಗ್ಯವರ್ಧಕ ಪೇಯಗಳು, ಡಯಾಬಿಟಿಸ್‌ನವರಿಗೆ ವಿಶೇಷ ಜ್ಯೂಸ್‌ಗಳು, ನೈಸರ್ಗಿಕ ಹಾಲಿನ ಪಾನೀಯಗಳು, ಆಯುರ್ವೇದ ಕಷಾಯ ಹುಡಿಗಳು, ಗವ್ಯ ಉತ್ಪನ್ನಗಳು, ಆಯುರ್ವೇದ ಸೌಂದರ್ಯ ವರ್ಧಕಗಳು, ಸಾವಯವ ಹಾಗೂ ಆಯುರ್ವೇದ ಎಲ್ಲಾ ಉತ್ಪನ್ನಗಳು, ಅಲ್ಲದೆ ವಿಶೇಷವಾದ ಹಿರಿಯರು ಬಳಸುತ್ತಿದ್ದ ಮಣ್ಣಿನ ಕುಕ್ಕರ್‌ಗಳು, ರಾಜಸ್ಥಾನಿ ಹೂಜಿಗಳು, ಮಣ್ಣಿನ ಡಿನ್ನರ್ ಸೆಟ್‌ಗಳು, ಮುಂತಾದ ದೇಸೀಯ ಉತ್ಪನ್ನಗಳ ಸಂಗ್ರಹವಿರುತ್ತದೆ. ಸ್ವದೇಶಿ ಚಿಂತನೆಯನ್ನು ಬಳಸಿಕೊಂಡು ಮಾಡಿದ ಪ್ರಯತ್ನ ಇದಾಗಿದೆ. ಸಂಪೂರ್ಣ ಸ್ವದೇಶಿ ಉತ್ಪನ್ನಗಳ ಸಂಸ್ಥೆ ನಿರಾಮಯ ಸ್ವದೇಶಿ ಮಳಿಗೆಯನ್ನು ಗ್ರಾಹಕರು ಭೇಟಿ ನೀಡಿ ಪ್ರೋತ್ಸಾಹಿಸಿ ಎಂದು ಮಾಲಕ ವೆಂಕಟೇಶ್ವರರವರು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.