ಡಿ.ಸಿ.ಯವರಿಂದ ಮಿನಿವಿಧಾನ ಸೌಧದಲ್ಲಿ ಅಹವಾಲು ಸ್ವೀಕಾರ ಕುಮ್ಕಿ ಹಕ್ಕಿನ ಮೂಲ ಉದ್ದೇಶ ದುರುಪಯೋಗ-ಅಗತ್ಯ ಕಂಡರೆ ವಿರಹಿತಗೊಳಿಸುವ ಹಕ್ಕಿದೆ-ಇಬ್ರಾಹಿಂ

Puttur_Advt_NewsUnder_1
Puttur_Advt_NewsUnder_1

1ಪುತ್ತೂರು : ರೈತರಿಗೆ ಸವಲತ್ತು ರೂಪದಲ್ಲಿ ನೀಡಿದ ಕುಮ್ಕಿ ಜಮೀನನ್ನು ಒಮ್ಮೆಲೇ ಸಾಮೂಹಿಕವಾಗಿ ಸರಕಾರ ಸ್ವಾಧೀನಪಡಿಸುವುದಿಲ್ಲ. ಕುಮ್ಕಿ ಹಕ್ಕಿನ ಮೂಲ ಉದ್ದೇಶವನ್ನು ಉಲ್ಲಂಘಿಸಿ ರೈತರು ದುರುಪಯೋಗ ಪಡಿಸಿಕೊಳ್ಳುತ್ತಿದ್ದು, ಸಾರ್ವಜನಿಕ ಉದ್ದೇಶಗಳಿಗೆ ಅಗತ್ಯವೆನಿಸಿದಲ್ಲಿ ನೋಟೀಸು ಜಾರಿಗೊಳಿಸಿ ಕುಮ್ಕಿ ಹಕ್ಕನ್ನು ವಿರಹಿತಗೊಳಿಸಲಾಗುವುದು. ಕುಮ್ಕಿ ವಿಚಾರದಲ್ಲಿ ಪರಿಹಾರದ ಪ್ರಶ್ನೆಯೇ ಬರುವುದಿಲ್ಲ ಎಂದು ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಹೇಳಿದರು.
ಅವರು ಇಲ್ಲಿನ ಮಿನಿ ವಿಧಾನ ಸೌಧದಲ್ಲಿರುವ ಸಹಾಯಕ ಕಮಿಷನರ್ ಕಚೇರಿಯಲ್ಲಿ ಜ.21ರಂದು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು. ಕುಮ್ಕಿ ಜಮೀನಿಗೆ ಭೂಕಂದಾಯ ವಸೂಲಿ ಮಾಡುವುದನ್ನು ಕೂಡ ಸರಕಾರ ಹಲವು ವರ್ಷಗಳ ಹಿಂದೆಯೇ ನಿಲ್ಲಿಸಿದೆ. ಸಾರ್ವಜನಿಕ ಉದ್ದೇಶಕ್ಕೆ ಅಗತ್ಯವೆಂದು ಕಂಡರೆ ಕುಮ್ಕಿ ವಿರಹಿತಗೊಳಿಸಬಹುದು ಎಂಬ ಪೂರ್ವ ಆದೇಶವೇ ಇದೆ. ಅದನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ ಎಂದ ಅವರು ಹಲವಾರು ಪ್ರಕರಣಗಳಲ್ಲಿ ಶಾಲೆ,ಅಂಗನವಾಡಿ ಮೊದಲಾದ ಸಾರ್ವಜನಿಕ ಉದ್ದೇಶಗಳಿಗಾಗಿ ಈಗಾಗಲೇ ಕುಮ್ಕಿ ಭೂಮಿಯನ್ನು ವಿರಹಿತಗೊಳಿಸಲಾಗಿದೆ. ಮುಂದೆ ನಿವೇಶನ ರಹಿತರಿಗೆ ನಿವೇಶನ ನೀಡಲು ಕೂಡ ಕುಮ್ಕಿ ಭೂಮಿಯನ್ನು ಬಳಸುವ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಿದರು.
ಕುಮ್ಕಿ ಸವಲತ್ತನ್ನು ಕೃಷಿಯ ಸೌಲಭ್ಯವಾಗಿ ಪರಿಗಣಿಸದೆ ಕೃಷಿ ಭೂಮಿಯಾಗಿ ಪರಿವರ್ತಿಸಲಾಗಿದೆ. ಕುಮ್ಕಿಯಲ್ಲೇ ಮನೆ ಕಟ್ಟಡ , ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಯಾವ ಉದ್ದೇಶಕ್ಕಾಗಿ ಕುಮ್ಕಿ ಭೂಮಿ ಇರಬೇಕಾಗಿತ್ತೋ ಆ ಉದ್ದೇಶವೇ ಬದಲಾಗಿ ರಬ್ಬರ್ ,ಗೇರು ತೋಟಗಳೇ ಇದ್ದರೆ ಸೊಪ್ಪು ಯಾಕೆ ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ನದಿ ಸೇತುವೆ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಿಷೇಧ
ನೇತ್ರಾವತಿ, ಕುಮಾರಧಾರಾ, ಪಲ್ಗುಣಿ ಮತ್ತು ಪಯಸ್ವಿನಿ ನದಿ ಸೇತುವೆಗಳ ವಠಾರದ ೫೦೦ ಮೀಟರ್ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಿಷೇಧಿಸಿ ಆದೇಶ ಹೊರಡಿಸಲಾಗಿದ್ದು, ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಇಬ್ರಾಹಿಂ ಅವರು ತಿಳಿಸಿದರು.
ಈ ನಡುವೆಯೂ ಕೆಲವು ಕಡೆಗಳಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿರುವ ಕುರಿತು ದೂರುಗಳು ಬರುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದ ಅವರು ಕಂದಾಯ ನಿರೀಕ್ಷರಿಂದ ಮೇಲ್ಪಟ್ಟ ಕಂದಾಯ ಅಧಿಕಾರಿಗಳಿಗೆ , ಪಿಡಿಓಗಿಂತ ಮೇಲ್ಪಟ್ಟ ಪಂಚಾಯಿತಿ ರಾಜ್ ಇಲಾಖೆಯ ಅಧಿಕಾರಿಗಳಿಗೆ , ಸಬ್ ಇನ್ಸ್‌ಪೆಕ್ಟರ್‌ಗಿಂತ ಮೇಲ್ಪಟ್ಟ ಪೊಲೀಸ್ ಅಧಿಕಾರಿಗಳಿಗೆ , ಗಣಿ ಮತ್ತು ಭೂವಿeನ ಇಲಾಖೆಯ ಅಧಿಕಾರಿಗಳಿಗೆ , ವಲಯ ಅರಣ್ಯ ಸಂರಕ್ಷಣಾಧಿಕಾರಿಯಿಂದ ಮೇಲ್ಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೇರಿದಂತೆ ಮುನ್ನೂರು ಅಧಿಕಾರಿಗಳಿಗೆ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯನ್ನು ತಡೆಯುವ ಅವಕಾಶವಿದೆ ಎಂದು ಅವರು ತಿಳಿಸಿದರು. ಅನುಮತಿ ಪಡೆದು ಅಂತರ್ ಜಿಲ್ಲೆಗೆ ಮರಳು ಸಾಗಿಸುವ ಅವಕಾಶ ಇದೆ ಎಂದು ಅವರು ಹೇಳಿದರು.

ಸಬ್ ರಿಜಿಸ್ಟ್ರಾರ್ ಕಚೇರಿ ಸ್ಥಳ ಸರಕಾರಿ ಆಸ್ಪತ್ರೆಗೆ:
ಪುತ್ತೂರು ಸಬ್ ರಿಜಿಸ್ಟ್ರಾರ್ ಕಚೇರಿಯನ್ನು ಶೀಘ್ರ ಮಿನಿ ವಿಧಾನ ಸೌಧಕ್ಕೆ ಸ್ಥಳಾಂತರ ಮಾಡಲು ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದು, ಸಬ್ ರಿಜಿಸ್ಟ್ರಾರ್ ಕಚೇರಿಯ ಜಾಗವನ್ನು ವಿರಹಿತಗೊಳಿಸಿ ಪುತ್ತೂರು ಸರಕಾರಿ ಆಸ್ಪತ್ರೆಯ ಅಭಿವೃದ್ಧಿಗಾಗಿ ಹಸ್ತಾಂತರಿಸಲು ಆದೇಶ ನೀಡಿದ್ದಾರೆ. ಸಬ್ ರಿಜಿಸ್ಟ್ರಾರ್ ಕಚೇರಿಗೆ ಜಿಲ್ಲಾಧಿಕಾರಿ ಭೇಟಿ ನೀಡಿ, ಸೂಚಿಸಿದರೂ ಸ್ಥಳಾಂತರಕ್ಕೆ ಮೀನ-ಮೇಷ ಎಣಿಸಲಾಗುತ್ತಿತ್ತು. ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಸಹಾಯಕ ಆಯುಕ್ತರು ಬಳಿಕ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಂಡಿದ್ದರು. ಎಲ್ಲಾ ಇಲಾಖೆಗಳು ಮಿನಿವಿಧಾನಸೌಧಕ್ಕೆ ಸ್ಥಳಾಂತರ ಆಗಬೇಕು ಎಂಬ ಕೂಗಿಗೆ ಫಲ ಸಿಕ್ಕಿದೆ. ಇದೀಗ ಉಪನೋಂದಣಿ ಕಚೇರಿ ಸ್ಥಳಾಂತರಗೊಳ್ಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಉಪನೋಂದಣಿ ಕಚೇರಿಗೆ ಮಿನಿವಿಧಾನಸೌಧದಲ್ಲಿ ಜಾಗ ಮೀಸಲಿರಿಸಲಾಗಿದೆ. ಕಚೇರಿ ಇದ್ದ ಸ್ಥಳ ಉಪನೋಂದಣಿ ಇಲಾಖೆಗೆ ಅಗತ್ಯ ಇರುವುದಿಲ್ಲ. ಆದ್ದರಿಂದ ಈ ಜಾಗವನ್ನು ಕಂದಾಯ ಇಲಾಖೆ ತನ್ನ ಸುಪರ್ಧಿಗೆ ತೆಗೆದುಕೊಂಡು, ಪಕ್ಕದಲ್ಲೇ ಇರುವ ಸರಕಾರಿ ಆಸ್ಪತ್ರೆಯ ಮುಂದಿನ ಅಭಿವೃದ್ಧಿ ಕಾರ್ಯಗಳಿಗೆ ಬಿಟ್ಟುಕೊಡಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಅನಧಿಕೃತ ಕಟ್ಟಡಗಳ ವಿರುದ್ಧ ಕ್ರಮ: ಸಹಾಯಕ ಆಯುಕ್ತ ಡಾ.ರಾಜೇಂದ್ರ ಕೆ.ವಿ. ಮಾತನಾಡಿ, ದೂರದೃಷ್ಟಿ ಇಟ್ಟುಕೊಂಡು ಪುತ್ತೂರಿನ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಈ ಹಿನ್ನೆಲೆಯಲ್ಲಿ ಪುತ್ತೂರಿನ ಅನಧಿಕೃತ ಕಟ್ಟಡಗಳ ಬಗ್ಗೆ ಮಾಹಿತಿ ನೀಡುವಂತೆ ಪುತ್ತೂರು ನಗರಸಭೆ ಹಾಗೂ ಸಂಚಾರಿ ಪೊಲೀಸ್ ಠಾಣೆಗೆ ಸೂಚಿಸಲಾಗಿದೆ. ರಸ್ತೆ ಅಗಲೀಕರಣಕ್ಕೆ ಮುಂದಾದರೆ ಅನುದಾನದ ಕೊರತೆ ಎದುರಾಗುತ್ತದೆ. ಒಂದು ರೀತಿಯಲ್ಲಿ ಜನರ ನಡುವೆ ನಾವೇ ಅನಾನುಕೂಲತೆ ಸೃಷ್ಟಿಸಿಕೊಂಡಂತಾಗುತ್ತದೆ. ಪುಡಾದ ಮಾಸ್ಟರ್ ಪ್ಲಾನನ್ನು ಪುನರ್‌ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಗಡಿ ತಾಲೂಕಲ್ಲಿ ರಿಕ್ಷಾಗಳಿಗೆ ವಿನಾಯಿತಿ:
ವಿಟ್ಲ ಭಾಗದಿಂದ ಪುತ್ತೂರು ಆಸ್ಪತ್ರೆಗೆ ರೋಗಿಗಳನ್ನು ರಿಕ್ಷಾದಲ್ಲಿ ತರಲು ಪರವಾನಗಿ ತೊಡಕಾಗಿದೆ. ಅಳಕೆಮಜಲಿನ ಆ ಭಾಗ ಬಂಟ್ವಾಳ ತಾಲೂಕಿಗೆ ಸೇರಿದ್ದು, ರೋಗಿಗಳನ್ನು ರಾತ್ರಿ ವೇಳೆ ಪುತ್ತೂರಿಗೆ ಕರೆತರುವ ಅಗತ್ಯವಿರುತ್ತದೆ. ರೋಗಿಗಳನ್ನು ತಾರದೇ ವಿಧಿ ಇಲ್ಲ. ರೋಗಿಗಳನ್ನು ಕರೆದುಕೊಂಡು ಬಂದರೆ ಪೊಲೀಸರು ದಂಡ ವಿಧಿಸುತ್ತಾರೆ. ಆದ್ದರಿಂದ ಗಡಿಭಾಗಗಳಲ್ಲಿ ರಿಕ್ಷಾ ಪರವಾನಗಿಯಲ್ಲಿ ಸಡಿಲಿಕೆ ನೀಡುವಂತೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂಗೆ ರಿಕ್ಷಾ ಚಾಲಕರು ಮನವಿ ನೀಡಿದರು. ಎಸಿ ಡಾ.ರಾಜೇಂದ್ರ ಕೆ.ವಿ, ಎಎಸ್ಪಿ ರಿಷ್ಯಂತ್ ಜತೆ ಜಿಲ್ಲಾಧಿಕಾರಿ ಮಾತುಕತೆ ನಡೆಸಿದರು. ತುರ್ತು ಸಂದರ್ಭ ರಿಕ್ಷಾಗಳಿಗೆ ಪರವಾನಗಿಯಲ್ಲಿ ಸಡಿಲಿಕೆ ನೀಡುವುದು ಅನಿವಾರ್ಯ ಎಂದರು. ಉತ್ತರಿಸಿದ ಎಸಿ, ಈ ಬಗ್ಗೆ ಮುಂದಿನ ದಿನಗಳಲ್ಲಿ ಸಭೆ ನಡೆಯಲಿದೆ ಎಂದರು. ತಹಶೀಲ್ದಾರ್ ಸಣ್ಣರಂಗಯ್ಯ ಈ ಸಂದರ್ಭದಲ್ಲಿ ಉಪಸ್ಥಿರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.