ಜ.23ರಂದು ಮಿತ್ತೂರಿನಲ್ಲಿ ‘ಬದ್ಕೆರೆ ಕಲ್ಪಿ’ 64ನೇ ಪ್ರದರ್ಶನ

 ಪುತ್ತೂರು: ‘ಸಂಸಾರ ಕಲಾವಿದೆರ್’ ಬಲ್ನಾಡು ಪುತ್ತೂರು ಇವರ ಅಭಿನಯದ ಸುಪರ್‌ಹಿಟ್ ತುಳುಹಾಸ್ಯ ನಾಟಕ ‘ಬದ್ಕೆರೆ ಕಲ್ಪಿ’ ಇದರ 64ನೇ ಪ್ರದರ್ಶನವು ಮಿತ್ತೂರಿನ ಶ್ರೀ ಸೀತಾರಾಮಾಂಜನೇಯ ಭಜನಾ ಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಸಂದರ್ಭದಲ್ಲಿ ಜ.23ರಂದು ರಾತ್ರಿ ೮ಗಂಟೆಗೆ ಪ್ರದರ್ಶನಗೊಳ್ಳಲಿದೆ.

ಬಲೇ ತೆಲಿಪುಲೆ ಖ್ಯಾತಿಯ ಚಲನಚಿತ್ರ ನಟ ಅರುಣಚಂದ್ರ ಬಿಸಿರೋಡ್ ನಾಟಕವನ್ನು ರಚಿಸಿದ್ದು, ನಾಗೇಶ್ ಬಲ್ನಾಡ್ ನಿರ್ದೇಶಿಸಿದ್ದಾರೆ. ಬಿ.ಎಸ್.ಕಾರಂತ್ ಇಂಚರ ರಾಮಕುಂಜ ಸಂಗೀತ  ನೀಡಲಿದ್ದು, ವೇದಸ್ಯ ಕುಲಾಲ್ ರಾಮಕುಂಜ ವರ್ಣಾಲಂಕಾರ, ಸಂಸಾರ ಆರ್ಟ್ಸ್ ರಂಗಾಲಂಕಾರ, ಕೃಷ್ಣ ಮುಂಡ್ಯ ಧ್ವನಿ ಮತ್ತು ಬೆಳಕು ನೀಡಲಿದ್ದಾರೆ.

ವೇದಸ್ಯ ಕುಲಾಲ್ ರಾಮಕುಂಜ, ಶ್ರೀಧರ ಪ್ರಭು ಮಂಗಳೂರು, ದಿನಶ್ ಸಂಪ್ಯ, ಪ್ರೀತಿ ರಮೇಶ್ ಕಲ್ಲಡ್ಕ, ಕೆ.ಟಿ. ಆನಂದ ವಿಟ್ಲ, ಶೇಖರ ಪೂಜಾರಿ ಬೆಳ್ಳಿಪ್ಪಾಡಿ, ರಾಜೇಶ್ ಶಾಂತಿನಗರ, ರಂಗಯ್ಯ ಬಲ್ಲಾಳ್ ಕೆದಂಬಾಡಿಬೀಡು, ರಾಜಶೇಖರ್ ಶಾಂತಿನಗರ, ಪ್ರಶಾಂತ್ ಮಿತ್ತೂರು, ಸುಬ್ಬು ಸಂಟ್ಯಾರ್, ಯಶವಂತ್ ಪುರುಷರಕಟ್ಟೆ, ಕೃತಿಕಾ ಮತ್ತು ನಾಗೇಶ್ ಬಲ್ನಾಡ್ ಅಭಿನಯಿಸಲಿದ್ದಾರೆ ಎಂದು ತಂಡದ ಸಾರಥ್ಯ ವಹಿಸಿಕೊಂಡಿರುವ ಶೇಖರ ಪೂಜಾರಿ ಬೆಳ್ಳಿಪ್ಪಾಡಿ, ತಿಳಿಸಿದ್ದಾರೆ. ತಂಡದ ಮುಂದಿನ ಪ್ರದರ್ಶನವು ಜ.೨೬ರಂದು ಬೆಳ್ತಂಗಡಿ ನಾಳದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಶೇಖರ ಪೂಜಾರಿ ಬೆಳ್ಳಿಪ್ಪಾಡಿ ತಿಳಿಸಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.