ಸುದ್ದಿ ಜನ್ಮಂಗಲ್ ಇಂಗ್ಲೀಷ್ ಭಾಷಾ ತರಬೇತಿ-ಉಚಿತ ಸೆಮಿನಾರ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸುದ್ದಿ ತರಬೇತಿ ಕೇಂದ್ರ, ಪುತ್ತೂರು ಹಾಗೂ ಗುಜರಾತಿನಲ್ಲಿ ಯಶಸ್ವಿಯಾಗಿ ಇಂಗ್ಲೀಷ್ ಭಾಷಾ ತರಬೇತಿ ಕೊಡುತ್ತಿರುವ ಜನ್ಮಂಗಲ್ ಇಂಗ್ಲೀಷ್ ಲಾಂಗ್ವೆಜ್ ಅಕಾಡೆಮಿ, ಇವರ ಸಹಭಾಗಿತ್ವದೊಂದಿಗೆ ಪುತ್ತೂರಿನಲ್ಲಿ ಮೊದಲ ಬಾರಿಗೆ ಒಂದು ವಿಶೇಷವಾದ ಇಂಗ್ಲೀಷ್ ಭಾಷಾ ತರಬೇತಿಗಳು ಆರಂಭವಾಗಲಿವೆ. ಈ ತರಬೇತಿಯ ವಿಧಾನ ಒಂದು ಹೊಸ ರೀತಿಯ ಪ್ರಯೋಗವಾಗಿದ್ದು, ತರಬೇತುದಾರರು ಸ್ವತಃ ಕೇಂಬ್ರಿಡ್ಜ್ ಹಾಗೂ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದವರಾಗಿದ್ದು, ಈ ತರಬೇತಿಯಲ್ಲಿ ಒಳಪಡುವ ಪಠ್ಯಕ್ರಮಗಳು, ವಿಧಾನಗಳು ಹಾಗೂ ಕಲಿಕಾ ವಸ್ತುಗಳು ಸದರಿ ವಿಶ್ವವಿದ್ಯಾಲಯಗಳಿಂದ ಅಂಗೀಕರಿಸಲ್ಪಟ್ಟಿದ್ದಾಗಿವೆ. ಪ್ರತಿಯೊಬ್ಬರಿಗೂ ಅವರವರ ಅವಶ್ಯಕತೆಗಳಿಗನುಗುಣವಾಗಿ ತರಬೇತಿಗಳನ್ನು ಕೊಡುವುದಕ್ಕಾಗಿ ಸುಮಾರು 23 ವಿವಿಧ ತರಬೇತಿಗಳ ಯೋಜನೆಗಳನ್ನು ಮಾಡಲಾಗಿದೆ. ಆಕಾಂಕ್ಷಿಗಳಿಗೆ ಮೊದಲು ಉಚಿತವಾಗಿ ಅವರಿಗಿರುವ ಇಂಗ್ಲೀಷ್ ಭಾಷಾ ಚಾತುರ‍್ಯದ ಬಗ್ಗೆ ಪರೀಕ್ಷೆ ನಡೆಸಲಾಗುವುದು. ಪರೀಕ್ಷೆಯಲ್ಲಿ ಅವರಿಗೆ ಲಭಿಸುವ ಅಂಕಗಳ ಆಧಾರದ ಮೇಲೆ ತರಬೇತಿಯನ್ನು ಸೂಚಿಸಲಾಗುವುದು. ಹಾಗೆಯೇ ಹೊರದೇಶಗಳಿಗೆ ಹೋಗ ಬಯಸುವವರಿಗಾಗಿ IELTS – TOEFL ಪರೀಕ್ಷೆಗಳಿಗೂ ತರಬೇತಿಗಳು ಲಭ್ಯವಿವೆ. ಹಾಗಾಗಿ ಪುತ್ತೂರಿನಲ್ಲಿ ಮೊದಲ ಬಾರಿಗೆ ಅಂತರಾಷ್ಟ್ರೀಯ ಮಟ್ಟದ ಇಂಗ್ಲೀಷ್ ತರಬೇತಿಗಳು ಸುದ್ದಿ ತರಬೇತಿ ಕೇಂದ್ರದಲ್ಲಿ ಆರಂಭವಾಗಲಿವೆ. ಕೆಲಸಕ್ಕಾಗಿ ಹುಡುಕುತ್ತಿರುವವರು, ಗೃಹಿಣಿಯರು, ವಿದ್ಯಾರ್ಥಿಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲಿಚ್ಛಿಸುವವರು ಇವರೆಲ್ಲರನ್ನು ಲಕ್ಷ್ಯವಾಗಿಟ್ಟುಕೊಂಡು ಈ ತರಬೇತಿಗಳು ನಡೆಯಲಿವೆ. ಹಳೆಯ ತರಬೇತಿ ವಿಧಾನಗಳನ್ನು ಬಿಟ್ಟು, ಮಲ್ಟಿಮೀಡಿಯ ಪರಿಕಲ್ಪನೆಗಳೊಂದಿಗೆ ಈ ತರಬೇತಿಗಳು ನಡೆಯಲಿವೆ ಹಾಗೂ ಕ್ಲಾಸ್ ರೂಂನ ಹೊರಗಡೆ ವಿದ್ಯಾರ್ಥಿಗಳಿಗಿರುವ ಬಿಡುವಿನ ಸಮಯದಲ್ಲಿ ವಾಟ್ಸಪ್‌ನಂತಹ ತಂತ್ರಜ್ಞಾನವನ್ನು ಬಳಸಿಕೊಂಡು, ಹಲವಾರು ಆಸಕ್ತಿದಾಯಕ ಚಟುವಟಿಕೆಗಳೊಂದಿಗೆ ಈ ತರಬೇತಿಗಳು ನಡೆಸಲ್ಪಡಲಿವೆ. ಈ ತರಬೇತಿಗಳು ಹಾಗೂ ತರಬೇತುದಾರರನ್ನು ಆಕಾಂಕ್ಷಿಗಳಿಗೆ ಪರಿಚಯಿಸಲೆಂದೇ ಸುಮಾರು 90 ನಿಮಿಷಗಳ ಉಚಿತ ರೋಮಾಂಚಕಾರಿ ಸೆಮಿನಾರೊಂದನ್ನು ಇದೇ ಬರುವ 24ರ ಭಾನುವಾರ ಬೆಳಿಗ್ಗೆ ಗಂಟೆ 10.30ಕ್ಕೆ ಸುದ್ದಿ ತರಬೇತಿ ಕೇಂದ್ರ, ಎಂ.ಟಿ.ರಸ್ತೆ, ಪುತ್ತೂರಿನಲ್ಲಿ ಆಯೋಜಿಸಲಾಗಿದೆ. ಆಸಕ್ತರು ಸುದ್ದಿ ತರಬೇತಿ ಕೇಂದ್ರ ಪುತ್ತೂರಿನಲ್ಲಿ ತಮ್ಮ ಭಾಗವಹಿಸುವಿಕೆಯನ್ನು ಖಾತರಿಪಡಿಸಿಕೊಳ್ಳಬೇಕಾಗಿ ಈ ಮೂಲಕ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಚೇರಿಯನ್ನು 08251-238949 ಅಥವಾ ೭೮೨೯೫೦೩೫೪೧ ದೂರವಾಣಿ ಸಂಖ್ಯೆಗಳಲ್ಲಿ ಸಂಪರ್ಕಿಸಬಹುದು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.