ರಾಮಕುಂಜ:ಪಿಡಿಒಗೆ ನಿಂದನೆ ಆರೋಪಿ ರಾಮಕುಂಜ ನಿವಾಸಿ ಸಂಜೀವ ಪೂಜಾರಿ ಪೊಲೀಸ್ ವಶ

ಪುತ್ತೂರು: ರಾಮಕುಂಜ ಗ್ರಾ.ಪಂ.ಕಚೇರಿಗೆ ಬಂದು ಪಿಡಿಒಗೆ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿದ ಆರೋಪದಲ್ಲಿ ರಾಮಕುಂಜ ಗ್ರಾಮದ ಮಾರಂಗ ನಿವಾಸಿ ಸಂಜೀವ ಪೂಜಾರಿ ಎಂಬವರನ್ನು ಕಡಬ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.  ರಾಮಕುಂಜ ಗ್ರಾ.ಪಂ.ಪಿಡಿಒ ರವಿಚಂದ್ರರವರು ಜ.21ರಂದು ಸಂಜೆ ಕರ್ತವ್ಯದಲ್ಲಿದ್ದ ವೇಳೆ ಗ್ರಾಮ ಪಂಚಾಯತ್ ಕಚೇರಿಗೆ ಆಗಮಿಸಿದ ಸಂಜೀವ ಪೂಜಾರಿಯವರು ಮನೆ ಮಂಜೂರಾತಿ ವಿಚಾರಕ್ಕೆ ಸಂಬಂಧಿಸಿದಂತೆ ಪಿಡಿಒರವರಲ್ಲಿ ವಿಚಾರಿಸಿದ್ದಾರೆ. ಈ ಬಗ್ಗೆ ಪಿಡಿಒರವರು ಸ್ಪಷ್ಟನೆ ನೀಡಿದರೂ ಕೇಳದ ಸಂಜೀವ ಪೂಜಾರಿಯವರು ಪಿಡಿಒರವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎನ್ನಲಾಗಿದೆ. ಬಳಿಕ ಈ ಬಗ್ಗೆ ಪಿಡಿಒರವರು ಕಡಬ ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿ ಸಂಜೀವ ಪೂಜಾರಿಯವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

 

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.