ಮೊಟ್ಟೆತ್ತಡ್ಕದಲ್ಲಿ ಸಂಶುಲ್ ಉಲಮಾ ಅನುಸ್ಮರಣೆ, ಸಮಸ್ತ 90ನೇ ವಾರ್ಷಿಕ ಸಮ್ಮೇಳನ ಸಮಸ್ತದ ಮಹಾ ಪುರುಷರ ಪಾವನ ಜೀವನ ನಮಗೆ ದಾರಿದೀಪ:ರಾಮಂದಲಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪರಂಪರಾಗತ ಅಹ್ಲ್‌ಸುನ್ನತಿ ವಲ್‌ಜಮಾಅತ್‌ನ ತತ್ವ ಆದರ್ಶಗಳನ್ನು ಸಮಸ್ತ ಕಳೆದ ೯೦ ವರ್ಷಗಳಿಂದ ಪ್ರಚುರ ಪಡಿಸಿ ಮಾದರಿ ಸಮಾಜವನ್ನು ಕಟ್ಟಿದೆ. ಇಂತಹ ಸಮಸ್ತದ ಮಹಾಪುರುಷರ ಪಾವನ ಬದುಕು ನಮಗೆ ಮಾದರಿಯಾಗಿದೆ ಎಂದು ಕೇರಳದ ವಾಗ್ಮಿ ಮುಹಮ್ಮದ್ ರಾಮಂದಲಿ ಹೇಳಿದರು. ಅವರು ಎಸ್.ಕೆ.ಎಸ್.ಎಸ್.ಎಫ್ ಕಲ್ಲಗುಡ್ಡೆ ಶಾಖೆ ವತಿಯಿಂದ ಮೊಟ್ಟೆತ್ತಡ್ಕ ಹೆಲಿಪ್ಯಾಡ್‌ನಲ್ಲಿ ನಡೆದ ಸಂಶುಲ್ ಉಲಮಾ ಅನುಸ್ಮರಣೆ ಹಾಗೂ ಸಮಸ್ತ ೯೦ರ ವಾರ್ಷಿಕ ಪ್ರಯುಕ್ತ ಸಮಸ್ತ ಸಮ್ಮೇಳನದಲ್ಲಿ ಮುಖ್ಯ ಪ್ರಭಾಷಣಗಾರರಾಗಿ ಆಗಮಿಸಿ ಮಾತನಾಡುತ್ತಿದ್ದರು. ಸುನ್ನಿ ಹೆಸರಿನಲ್ಲಿ ಪ್ರವಾದಿಯವರ ನಕಲಿ ಕೂದಲು ತಂದು ಮುಗ್ದ ಜನರನ್ನು ಶೋಷಣೆಗೆ ಒಳಪಡಿಸುವ ನಕಲಿಗಳನ್ನು ಹಾಗೂ ಪರಂಪಾರಗತ ತತ್ವ ಆದರ್ಶಗಳನ್ನು ವಿರೋಧಿಸಿ ನಿರಂತರವಾಗಿ ಹಂಗಿಸುವ ನೂತನ ವಾದಿಗಳ ಬಗ್ಗೆ ಮುಸ್ಲಿಮರು ಜಾಗೃತರಾಗಬೇಕು ಎಂದು ಅವರು ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಓಲೆಮುಂಡೋವು ಮುದರ್ರಿಸ್ ಸಯ್ಯದ್ ಅಲವಿ ತಂಙಳ್ ಮಾಸ್ತಿಕುಂಡುರವರು ಮಾತನಾಡಿ, ಸಮಸ್ತ ಎಂಬುವುದು ಕಲ್ಮಶ ರಹಿತ ಶುದ್ದ ಬದುಕು ಕಟ್ಟಿದ ಶೈಖುನಾ ಕಣ್ಣಿಯತ್ ಉಸ್ತಾದ್ ಮತ್ತು ಧರ್ಮ ಹಾಗೂ ಸಮಾಜಕ್ಕಾಗಿ ಅಹರ್ನಿಶಿ ದುಡಿದು ಅಗಲಿದ ಶೈಖುನಾ ಶಂಸಲ್ ಉಲಮಾರಂತಹ ಶ್ರೇಷ್ಠರು ಕಟ್ಟಿದ ಅಧ್ಯಾತ್ಮಿಕ ಸಂಘಟನೆಯಾಗಿದೆ ಎಂದರು. ಅನುಸ್ಮರಣಾ ಭಾಷಣ ಮಾಡಿದ ಅಬ್ದುಲ್ ಲತೀಫ್ ವಾಫಿ ವಯನಾಡ್‌ರವರು ಮಾತನಾಡಿ, ಇಸ್ಲಾಂ ಭಾರತದಲ್ಲಿ ಪ್ರಚಾರಗೊಂಡಿದ್ದು, ಖಡ್ಗ ಬಲದಿಂದ ಅಲ್ಲ. ಬದಲಾಗಿ ಧರ್ಮ ಪ್ರಚಾರಕರ ಸರಳ, ಶುದ್ಧ, ಸೌಮ್ಯ ಮಾದರಿ, ನಡೆ, ನುಡಿಯ ಮೂಲಕ ಆಗಿದೆ. ಇದೇ ಹಾದಿಯಲ್ಲಿ ಆದರ್ಶ ಶುದ್ದಿಯೊಂದಿಗೆ ಸಮಸ್ತ ಉಲಮಾ ಸಂಘಟನೆ ಅದೇ ಹಾದಿಯಲ್ಲಿ ಸಮಸ್ತ ಉಲಮಾ ಸಂಘಟನೆ ಧರ್ಮ ಪ್ರಚಾರದ ಹೊಣೆಗಾರಿಕೆಯನ್ನು ಕಳೆದ ೯೦ ವರ್ಷಗಳಿಂದ ನಡೆಸುತ್ತಾ ಪ್ರಜ್ಞಾವಂತ ಸಮಾಜ ಕಟ್ಟಿದೆ ಎಂದರು. ಕುಂಬ್ರ ಕರ್ನಾಟಕ ಇಸ್ಲಾಮಿಕ್ ಅಕಾಡೆಮಿಯ ಮ್ಯಾನೇಜರ್ ಹುಸೈನ್ ದಾರಿಮಿ ರೆಂಜಲಾಡಿಯವರು ಮಾತನಾಡಿ ಎಸ್.ಕೆ.ಎಸ್.ಎಸ್.ಎಫ್ ಶಾಖೆಯ ವತಿಯಿಂದ ಹಮ್ಮಿಕೊಂಡ ಈ ಬೃಹತ್ ಸಮ್ಮೇಳ ಶ್ಲಾಘನೀಯವಾಗಿದ್ದು, ಈ ಯುವಕ ಸಂಘಟನೆಗೆ ಎಲ್ಲರ ಪ್ರೋತ್ಸಾಹ ಅಗತ್ಯವಿದೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ದ.ಕ. ಜಿಲ್ಲಾ ಮುಸ್ಲಿಂ ಯೂತ್ ಲೀಗ್ ಅಧ್ಯಕ್ಷ ಅಬೂಬಕ್ಕರ್ ಪೋಪಿ ಕನಕಮಜಲು ವಹಿಸಿದ್ದರು. ಸಂಪ್ಯ ಮಸೀದಿಯ ಖತೀಬರಾದ ಹಮೀದ್ ದಾರಿಮಿ, ಕೂರ್ನಡ್ಕ ಮುದರ್ರಿಸ್ ಅಬೂಬಕ್ಕರ್ ಸಿದ್ದೀಕ್ ಜಲಾಲಿ, ಎಸ್.ಕೆ.ಎಸ್.ಎಸ್.ಎಫ್‌ನ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ, ಕಲ್ಲಗುಡ್ಡೆ ಮಸೀದಿಯ ಸದರ್ ಮುಅಲ್ಲಿಂ ಉಮ್ಮರ್ ಮುಸ್ಲಿಯಾರ್, ಸಾಲ್ಮರ ಸಯ್ಯದ್ ಮಲೆ ಸಾಲ್ಮರ ಜುಮಾ ಮಸೀದಿಯ ಖತೀಬರಾದ ಉಮ್ಮರ್ ದಾರಿಮಿ ಸಾಲ್ಮರ, ಎಸ್.ಕೆ.ಎಸ್.ಎಸ್.ಎಫ್ ಪುತ್ತೂರು ವಲಯದ ಅಧ್ಯಕ್ಷ ತಾಜುದ್ದೀನ್ ಫೈಝಿ, ಮುಕ್ವೆ ಮಸೀದಿಯ ಮುದರ್ರಿಸ್ ಶರೀಫ್ ದಾರಿಮಿ, ಅಜ್ಜಿಕಟ್ಟೆಯ ಮಸೀದಿಯ ಖತೀಬ್ ಉಮ್ಮರ್ ಫೈಝಿ, ಪುತ್ತೂರು ಬದ್ರಿಯಾ ಮಸೀದಿಯ ಖತೀಬ್ ಎಸ್.ಬಿ ಮುಹಮ್ಮದ್ ದಾರಿಮಿ, ಕೂರ್ನಡ್ಕ ರೇಂಜ್ ಜಂ-ಇಯ್ಯತ್ತುಲ್ ಮುಅಲ್ಲಿಮೀನ್ ಅಧ್ಯಕ್ಷ ಶಕೂರು ದಾರಿಮಿ, ಪರ್ಲಡ್ಕ ಮಸೀದಿಯ ಖತೀಬ್ ಮಹಮ್ಮದಾಲಿ ದಾರಿಮಿ, ಮುಕ್ರಂಪಾಡಿ ಮಸೀದಿಯ ಖತೀಬ್ ಹಸನ್ ಬಾಖವಿ, ಸಹರಾ ಅರ್ಥ್ ಮೂವರ್‍ಸ್‌ನ ಜಮಾಲ್ ಮುಕ್ವೆ, ಪುತ್ತೂರು ಯುವ ಉದ್ಯಮಿ ಅಬ್ದುಲ್ ರಹಿಮಾನ್ ಹಾಜಿ ಬಾಳಾಯ, ಎಸ್.ಕೆ.ಎಸ್.ಎಸ್.ಎಫ್ ಕಡಬ ವಲಯ ಅಧ್ಯಕ್ಷ ಅಶ್ರಫ್ ಶೇಡಿಗುಂಡಿ, ಪುತ್ತೂರು ಸಿಟಿ ಬಜಾರ್‌ನ ಮಾಲಕ ಹಸನ್ ಹಾಜಿ, ನಾಸಿರ್ ಕೆ.ಎಸ್.ಎ, ಎಸ್.ಕೆ.ಎಸ್.ಎಸ್.ಫ್ ಕಲ್ಲೇಗ ಕ್ಲಸ್ಟರ್ ಅಧ್ಯಕ್ಷ ಇಬ್ರಾಹಿಂ ಬಾತಿಷಾ ಪಾಟ್ರಕೋಡಿ, ಪುತ್ತೂರು ನಗರಸಭಾ ವಿಪಕ್ಷ ನಾಯಕ ಮುಹಮ್ಮದ್ ಅಲಿ, ಜೆ.ಎಂ ಮೊಟ್ಟೆತ್ತಡ್ಕದ ಅಧ್ಯಕ್ಷ ಎಲ್.ಟಿ ಹಸೈನಾರ್ ಹಾಜಿ, ಕೂರ್ನಡ್ಕ ರೇಂಜ್ ಜಂ-ಇಯ್ಯತ್ತುಲ್ ಮುಅಲ್ಲಿಮೀನ್‌ನ ಕೋಶಾಧಿಕಾರಿ ಅಶ್ರಫ್ ಮುಕ್ವೆ, ಎಸ್.ಕೆ.ಎಸ್.ಎಸ್.ಎಫ್ ಮುಕ್ವೆ ಶಾಖೆಯ ಅಧ್ಯಕ್ಷ ಯೂಸುಫ್ ಮುಕ್ವೆ, ನಸೀಬ್ ಬೋರ್‌ವೇಲ್ಸ್ ಮ್ಹಾಲಕ ಅಬೂಬಕ್ಕರ್ ಮುಲಾರ್, ಬೆಳ್ತಂಗಡಿ ಜೈ ಭಾರತ್ ಟಿಂಬರ್ ಮರ್ಚಂಟ್‌ನ ಜಿ.ಕೆ ಬಾವಾ, ಎಸ್.ಕೆ.ಎಸ್.ಎಸ್.ಎಫ್ ಬೆಳ್ಳಾರೆ ಕ್ಲಸ್ಟರ್‌ನ ಅಧ್ಯಕ್ಷ ಜಮಾಲ್, ಫಾರೂಕ್ ರೆಂಜಲಾಡಿ ಕೆ.ಎಸ್.ಎ, ಶಂಶುಲ್ ಉಲಮಾ ಸೈಬರ್ ವಿಂಗ್, ಸಿದ್ದೀಕ್ ಸುಲ್ತಾನ್ ಕೂಡುರಸ್ತೆ, ಎಸ್.ಕೆ.ಎಸ್.ಎಸ್.ಎಫ್ ಮಡಾವು ಶಾಖೆಯ ಅಧ್ಯಕ್ಷ ಅಬ್ದುಲ್ ಅಝೀಝ್ ಸಂತೋಷ್, ಅಜ್ಜಿಕಟ್ಟೆ ಜುಮಾ ಮಸೀದಿಯ ಅಧ್ಯಕ್ಷ ಇಬ್ರಾಹಿಂ ಮುಲಾರ್, ಎಸ್.ಕೆ.ಎಸ್.ಎಸ್.ಎಫ್ ಕಲ್ಲಗುಡ್ಡೆ ಶಾಖೆಯ ಗೌರವಾಧ್ಯಕ್ಷ ಯಾಕೂಬ್ ಮುಲಾರ್, ಯೂಸುಫ್ ಹಾಜಿ ಮೊಟ್ಟೆತ್ತಡ್ಕ, ಉದ್ಯಮಿಗಳಾದ ಅಬ್ದುಲ್ ಅಝೀಝ್ ಹಾಜಿ ಮೊಟ್ಟೆತ್ತಡ್ಕ, ಉಮ್ಮರ್ ಶಾಫಿ ಪಾಪೆತ್ತಡ್ಕ, ಅಜ್ಜಿಕಟ್ಟೆ ಪುನರ್ ನಿರ್ಮಾಣ ಸಮಿತಿಯ ಅಧ್ಯಕ್ಷ ಉಮ್ಮರ್ ಪಟ್ಟೆ, ಕೂಡುರಸ್ತೆ ಜುಮಾ ಮಸೀದಿಯ ಗೌರವಾಧ್ಯಕ್ಷ ಮಾಹಿನ್ ಕುಂಞಿ ಬಾಲಾಯ, ಮುಂಡೂರು ಖುವ್ವತುಲ್ ಇಸ್ಲಾಂ ಮದ್ರಸದ ಅಧ್ಯಕ್ಷ ಮುಹಮ್ಮದ್ ಪುತ್ತು, ಎಸ್.ಕೆ.ಎಸ್.ಎಸ್.ಎಫ್ ಕೂಡು ರಸ್ತೆ ರೆಂಜಲಾಡಿಯ ಅಧ್ಯಕ್ಷ ಅಬ್ದುಲ್ ಅಝೀಝ್ ರೆಂಜಲಾಡಿ, ಸ್ಟಾಫ್ &ಜಾಯ್ ಬೆಂಗಳೂರಿನ ಇಸ್ಹಾಕ್ ರೆಂಜಲಾಡಿ, ಮುಕ್ರಂಪಾಡಿ ನಜಾತುದಾರೈನಿ ಸ್ವಲಾತ್ ಕಮಿಟಿಯ ಕೋಶಾಧಿಕಾರಿ ಮುಹಮ್ಮದ್ ಶರೀಪ್ ಮುಕ್ರಂಪಾಡಿ, ಕೂರ್ನಡ್ಕ ಮ್ಯಾನೇಜ್‌ಮೆಂಟ್ ಕಾರ್‍ಯದರ್ಶಿ ಕರೀಂ ಸವಣೂರು, ಕೂಡು ರಸ್ತೆ ಜುಮಾ ಮಸೀದಿಯ ಕೋಶಾಧಿಕಾರಿ ಮುಹಮ್ಮದ್, ಎಸ್.ಕೆ.ಎಸ್.ಎಸ್.ಎಫ್ ಸಂಪ್ಯ ಶಾಖೆಯ ಅಧ್ಯಕ್ಷ ಅಬ್ದುಲ್ ಅಝೀಝ್‌ರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಸ್ವಾಗತ ಸಮಿತಿಯ ಕನ್ವಿನರ್ ಎ.ನಝೀರ್ ಅರ್ಷದಿ ಸ್ವಾಗತಿಸಿದರು. ಕೆ.ಎಂ.ಎ. ಕೊಡುಂಗಾಯಿ ಕಾರ್ಯಕ್ರಮ ನಿರ್ವಹಿಸಿದರು. ಎಸ್‌ಕೆಎಸ್‌ಎಸ್‌ಎಫ್ ಕಲ್ಲಗುಡ್ಡೆ ಶಾಖೆಯ ಅಧ್ಯಕ್ಷ ಸುಲೈಮಾನ್, ಕಾರ್ಯದರ್ಶಿ ಜೈನುಲ್ ಹಾಬಿದ್, ಪ್ರ.ಕಾರ್ಯದರ್ಶಿ ಎ.ಆರ್. ಇಸ್ಮಾಯಿಲ್ ಮುಸ್ಲಿಯಾರ್ ಸ್ವಾಗತ ಸಮಿತಿಯ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ, ಜೊತೆ ಕನ್ವಿನರ್ ಉಮ್ಮರ್ ಅಝ್‌ಹರಿ ಮೊದಲಾದವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. 9 10 12 11

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.