Breaking News

ಕಡಮಜಲು ಗೇರು ತೋಟಕ್ಕೆ ಅಮೇರಿಕಾದ ನ್ಯೂಯಾರ್ಕ್‌ನ ಕೃಷಿ ತಜ್ಞರ ಭೇಟಿ

Puttur_Advt_NewsUnder_1
Puttur_Advt_NewsUnder_1

kadamajal

 ಪುತ್ತೂರು: ವೈಜ್ಞಾನಿಕವಾಗಿ ಬೆಳೆಸಲಾದ ಕಡಮಜಲು ಸ್ವೇದ ಬಿಂದು ಗೇರು ತೋಟ ವೀಕ್ಷಣೆಗಾಗಿ ಜ.೧೬ರಂದು ಅಮೇರಿಕಾದ ನ್ಯೂಯಾರ್ಕ್‌ನ ಬೈನ್ & ಕಂಪೆನಿಯ ಹಿರಿಯ ಸಹಾಯಕ ಸಲಹೆಗಾರರಾದ ಕೃಷಿ ತಜ್ಞ ಡೇನಿಯಲ್ ಡೈಜ್ (Daniel Diaz) (Bain & Companyರವರು ಅಧ್ಯಯನ ಪ್ರವಾಸದ ನಿಮಿತ್ತ ಭೇಟಿ ನೀಡಿದರು. ಇವರೊಂದಿಗೆ ಮಹಾರಾಷ್ಟ್ರದ ಮುಂಬೈಯಿಂದ ಟೆಟ್‌ನೊಂ ಸರ್ವ (Technoserve) ಸಂಸ್ಥೆಯ ಮುಖ್ಯಸ್ಥರಾದ ದರ್ಶಿತ್ ಶಾ (Darshit Shah)ರವರು ಮತ್ತು ಪುತ್ತೂರು ಗೇರು ಸಂಶೋಧನಾ ನಿರ್ದೇಶನಾಲಯದ ನಿವೃತ್ತ ಹಿರಿಯ ವಿಜ್ಞಾನಿ ಡಾ| ಯದು ಕುಮಾರ್ ಜೊತೆಗಿದ್ದರು.

ಕಡಮಜಲು ಗೇರು ತೋಟದ ನಿರ್ವಹಣೆ, ಕೀಟ ಸಂರಕ್ಷಣೆ, ಸಾಕಾಣಿಕೆ, ಸ್ಪಚ್ಛತೆಗೆ ಡೇನಿಯಲ್ ಡೈಜಾರವರು ಅಚ್ಚರಿಪಟ್ಟು ವಿಶೇಷವಾದ ಪ್ರಶಂಸೆಯನ್ನು ವ್ಯಕ್ತಪಡಿಸಿದರು.

ಭಾರತದಲ್ಲಿ ಸುಮಾರು 4000 ಗೇರು ಸಂಸ್ಕರಣಾ ಘಟಕಗಳಿದ್ದು ಇದಕ್ಕೆ ಬೇಕಾದ ಕಚ್ಛಾ ಗೇರು ಭಾರತದಲ್ಲಿ ಉತ್ಪಾದನೆಯಾಗುತ್ತಿಲ್ಲ. ಸಾಧಾರಣ ೫೦ ಭಾಗ ಪರದೇಶದಿಂದ ಆಮದಾಗುತ್ತಿದೆ. ಇದರ ಬದಲಾಗಿ ಮುಂದಿನ ದಿನ ಗಳಲ್ಲಿ ಭಾರತದಲ್ಲೇ ಬೇಕಾದ ಕಚ್ಛಾ ಗೇರು ಉತ್ಪಾದನೆ ಮಾಡುವ ನಿಟ್ಟಿನಲ್ಲಿ ಭಾರತ ಸರಕಾರ ಮತ್ತು ಅಮೇರಿಕಾ ಸಂಸ್ಥೆಗಳು ಜೊತೆಯಾಗಿ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಆರ್ಥಿಕ ಪ್ರೋತ್ಸಾಹ ನೀಡಿ ಗೇರು ಬೆಳೆ ಬೆಳೆಸಲು ಒಪ್ಪಂದ ಮಾಡಿಕೊಳ್ಳುವ ಸಲುವಾಗಿ ಸದ್ರಿ ಅಧ್ಯಯನ ಪ್ರವಾಸದ ಉದ್ದೇಶವಾಗಿರುತ್ತದೆ. ಅಮೇರಿಕಾದ ಹಲವಾರು ಇಂತಹ ಸಂಸ್ಥೆಗಳು ಭಾರತದಲ್ಲಿ ಗೇರು ಬೆಳೆಯ ಬಗ್ಗೆ ಹೂಡಿಕೆ ಮಾಡಲು ಮುಂದಾಗಿರುವ ವಿಚಾರವನ್ನು ಅಮೇರಿಕಾದ ಕೃಷಿ ತಜ್ಞ ಡೇನಿಯಲ್ ಡೈಜಾರವರು ಕಡಮಜಲು ಸುಭಾಸ್ ರೈರವರಿಗೆ ಸದ್ರಿ ಭೇಟಿಯ ಸಂದರ್ಭ ತಿಳಿಸಿರುತ್ತಾರೆ. ಕಡಮಜಲುರವರು ಗೇರು ಬೆಳೆಯ ಬಗ್ಗೆ ವಿಶೇಷ ಮಾಹಿತಿಯನ್ನು ನೀಡಿ ಸ್ವಾಗತಿಸಿದರು. ಪ್ರೀತಿ ಎಸ್. ರೈ ಕಡಮಜಲು ವಂದಿಸಿದರು. ಕಡಮಜಲುರವರನ್ನು ವಿಶೇಷ ಮಾಹಿತಿದಾರರನ್ನಾಗಿ ಸಂಸ್ಥೆ ಆಯ್ಕೆ ಮಾಡುವ ಬಗ್ಗೆಯೂ ಡೈಜಾರವರು ಆಸಕ್ತಿ ವಹಿಸಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.