Breaking News

ಜ.25: ಕಬಕದಲ್ಲಿ ಅಲ್ ಇಸ್ಲಾಹ್ ವಾರ್ಷಿಕೋತ್ಸವ – ನೂತನವಾದಿಗಳಿಗೆ ದಿಟ್ಟ ಉತ್ತರ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1

20160122_103543ಪುತ್ತೂರು: ಕಬಕ ವಿದ್ಯಾಪುರದಲ್ಲಿನ ಅಲ್ ಇಸ್ಲಾಹ್ ಸಾಹಿತ್ಯ ಸಮಾಜದ ವಾರ್ಷಿಕೋತ್ಸವವು ಜ.25ರಂದು ಸಂಜೆ ಕಬಕ ಜಂಕ್ಷನ್‌ನಲ್ಲಿ ನಡೆಯಲಿದ್ದು, ಇದರ ಅಂಗವಾಗಿ ನೂತನವಾದಿಗಳಿಗೆ ದಿಟ್ಟ ಉತ್ತರ ಕೊಡುವ ಕಾರ್ಯಕ್ರಮವು ಜರುಗಲಿದೆ ಎಂದು ಅಲ್ ಇಸ್ಲಾಹ್ ಸಾಹಿತ್ಯ ಸಮಾಜದ ಅಧ್ಯಕ್ಷ ಜಮೀರುದ್ದೀನ್‌ರವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಪಾನೂರು ಜುಮಾಲಿಯ ಅರೆಬಿಕ್ ಕಾಲೇಜಿನ ಪ್ರೊ. ಸಲೀಂ ಫೈಝಿ ಇರ್ಫಾನಿ ಅಲ್ ಅಝ್‌ಹರಿಯವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ನೂತನವಾದಿಗಳಿಗೆ ದಿಟ್ಟ ಉತ್ತರ ನೀಡಲಿದ್ದಾರೆ. ಸಾಲ್ಮರ ಜುಮಾ ಮಸ್ಜಿದ್‌ನ ಖತೀಬ ಅಲ್‌ಹಾಜ್ ಪಿ.ಎಂ ಉಮರ್ ದಾರಿಮಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಬಕ ವಿದ್ಯಾಪುರ ಅಲ್ ಇಸ್ಲಾಹ್ ಸಾಹಿತ್ಯ ಸಮಾಜದ ಗೌರವಾಧ್ಯಕ್ಷ ಸಯ್ಯಿದ್ ಅಲ್ ಹಾದಿ ಯಹ್ಯಾ ತಂಙಳ್ ಪೋಳ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಕಬಕ ಮಸ್ಜಿದ್ ಮುದರ್ರಿಸ್ ಬಿ.ಎನ್.ಹಾಜಿ ಮುಹಮ್ಮದ್ ಮದನಿ ದುವಾ ನೆರವೇರಿಸಲಿದ್ದಾರೆ. ಹಲವಾರು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದ ಅವರು ಸ್ತ್ರೀಯರಿಗೆ ಪ್ರತ್ಯೇಕ ಸ್ಥಳಾವಕಾಶವಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಅಲ್ ಇಸ್ಲಾಹ್ ಸಾಹಿತ್ಯ ಸಮಾಜದ ಉಪಾಧ್ಯಕ್ಷ ಶಕೀರ್ ಎಸ್.ಆರ್, ಕಾರ್‍ಯದರ್ಶಿ ಉಬೈದುಲ್ಲಾ, ಜೊತೆಕಾರ್‍ಯದರ್ಶಿ ಮೊಹಮ್ಮದ್ ಅನ್ಸಾರ್, ಶೇಖ್ ಹನೀಫ್, ಮೀನಾಝ್, ಸಿರಾಜ್ ಉಪಸ್ಥಿತರಿದ್ದರು.

ಸಂಶಯ ನಿವಾರಣೆಗೆ ಅವಕಾಶ:
ಧಾರ್ಮಿಕ ಗ್ರಂಥಗಳ ಆಧಾರ ಸಹಿತ ಸಲೀಂ ಫೈಝಿ ಇರ್ಫಾನಿ ಅಲ್ ಅಝಹರಿಯವರು ಮುಖ್ಯ ಪ್ರಭಾಷಣ ಮಾಡಿ. ವಿಡಿಯೋ ಕ್ಲಿಪ್ಪಿಂಗ್ ಸಹಿತ ನೂತನವಾದಿಗಳಿಗೆ ದಿಟ್ಟ ಉತ್ತರ ನೀಡಲಿದ್ದಾರೆ. ಇದರಿಂದ ಯಾರಿಗಾದರೂ ಸಂಶಯವಿದ್ದಲ್ಲಿ ಪರಿಹರಿಸಬಹುದು ಎಂದು ಜಮೀರುದ್ದಿನ್ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.