Breaking News

ಎಸ್.ಕೆ.ಎಸ್.ಎಸ್.ಎಫ್, ಎಸ್.ಎಸ್.ಎಫ್ ಬಿನ್ನಾಭಿಪ್ರಾಯ ಸಾರ್ವಜನಿಕ ಶಾಂತಿ ಭಂಗ-6 ಮಂದಿ ವಿರುದ್ಧ ಪ್ರಕರಣ ದಾಖಲು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸಾರ್ವಜನಿಕವಾಗಿ ಎರಡು ಪಂಗಡಗಳ ನಡುವೆ ಬಿನ್ನಾಭಿಪ್ರಾಯ ತಂದು ಮಸೀದಿ ವಿಚಾರದಲ್ಲಿ ತಕಾರರು ಮಾಡಿ ಪರಿಸರದಲ್ಲಿ ಅಶಾಂತಿ ಉಂಟು ಮಾಡುವ ಆರೋಪದಲ್ಲಿ 6  ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಎಸ್.ಕೆ.ಎಸ್.ಎಸ್.ಎಫ್ ಮತ್ತು ಎಸ್.ಎಸ್.ಎಫ್ ಸಂಘಟನೆಯ ಶೈದ್ಧಾಂತಿಕ ಬಿನ್ನಾಭಿಪ್ರಾಯವನ್ನು ಮಸೀದಿ ವಿಚಾರದಲ್ಲಿ ತಕರಾರು ತಂದಿರುವ ಹಿನ್ನೆಲೆಯಲ್ಲಿ ಪರಿಸರದಲ್ಲಿ ಶಾಂತಿಭಂಗ ಮಾಡುವ ಆರೋಪದಲ್ಲಿ ಕುಂಞಗದ್ದೆ ದಿ.ಬಾವ ಕುಂಞಿಯವರ ಪುತ್ರ ಪಿ.ಇಬ್ರಾಹಿಂ(೬೫ವ), ಮಣಿಕ್ಕಾರದ ಇಸ್ಮಾಯಿಲ್(೪೩ವ), ಪೆರುವಾಜೆ ಅಲಂತಡ್ಕ ನಿವಾಸಿ ಇರ್ಷಾದ್(೨೬ವ), ಜೋಗಿಮೂಲೆ ನಿವಾಸಿ ಅಬ್ದುಲ್ ರಹಿಮಾನ್(೪೫ವ), ಮಣಿಕ್ಕಾರ ಪಾಲ್ತಾಡು ನಿವಾಸಿ ನಝೀರ್(೩೬ವ), ಪೆರ್ನೆಯ ಅಬ್ಬಾಸ್ (೫೦ವ)ರವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳಿಗೆ ಶಾಂತಿ ಭಂಗ ಮಾಡದಂತೆ ತಿಳುವಳಿಕೆ ನೀಡಿದ್ದರೂ ಹಿಂದಿನಂತೆ ತಕಾರರು ಮುಂದುವರಿಸಿದ್ದರಿಂದ ಸಾರ್ವಜನಿಕ ಶಾಂತಿ ಭಂಗವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕ್ರಿಮಿನಲ್ ತಕ್ಷೀರು ನಡೆಸದಂತೆ ಒಳ್ಳೆಯ ನಡೆತೆಯಲ್ಲಿರುವಂತೆ ಗರಿಷ್ಠ ಅವಧಿಯ ತನಕ ಮುಚ್ಚಳಿಕೆಯನ್ನು ಬರೆಸಿಕೊಳ್ಳಲು ತಾಲೂಕು ದಂಡಾಧಿಕಾರಿಗಳಿಗೆ ವರದಿ ನೀಡಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.