ಪೆರಾಬೆ ಅಗತ್ತಾಡಿ ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ-ಹೊರೆಕಾಣಿಕೆ

Puttur_Advt_NewsUnder_1
Puttur_Advt_NewsUnder_1

kddddddddd1.jpg2 kddddddddd1ಪೆರಾಬೆ: ಇಲ್ಲಿನ ಅಗತ್ತಾಡಿ ಶ್ರೀ ನಾಗದೇವರು,ಇಷ್ಟದೇವತೆ, ಚಕ್ರವರ್ತಿ ಕೊಡಮಣಿತ್ತಾಯ, ಮಹಿಸಂದಾಯ, ಪರಿವಾರ ದೈವಗಳು, ಶ್ರೀ ನಾಗಬ್ರಹ್ಮ ಹಾಗೂ ಶ್ರೀ ಬ್ರಹ್ಮಬೈದರ್ಕಳ ನೇತ್ರಾವತಿ ಪೆರ್ಮುಂಡ ಗರಡಿಯಲ್ಲಿ  ಜ.23ರಂದು ಶ್ರೀ ಬ್ರಹ್ಮ ಬೈದರ್ಕಳ ನೇಮೋತ್ಸವ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಜ.೨೧ರಂದು ಸಂಜೆ ಭಕ್ತಾದಿಗಳಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಿತು.

ಕುಂತೂರು ಶಾರದಾ ಭಜನಾ ಮಂದಿರದಿಂದ ಆರಂಭಗೊಂಡ ಹೊರೆಕಾಣಿಕೆ ಮೆರವಣಿಗೆಗೆ ಮಂಡಳಿ ಅಧ್ಯಕ್ಷ ಈಶ್ವರ ಗೌಡ ಕುಂತೂರು ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು. ಚೆಂಡೆ ವಾದ್ಯದೊಂದಿಗೆ ನಡೆದ ಮೆರವಣಿಗೆಯಲ್ಲಿ ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಅಗತ್ತಾಡಿ ಗರಡಿಯ ಯಜಮಾನ ಎ.ಸಂಕಪ್ಪ ಪೂಜಾರಿ, ಆಲಂಕಾರು ಬಿಲ್ಲವ ಸಂಘದ ಅಧ್ಯಕ್ಷ ಸದಾನಂದ ಮಡ್ಯೊಟ್ಟು, ದಯಾನಂದ ಮಡ್ಯೊಟ್ಟು ಆಲಂಕಾರು, ಆಲಂಕಾರು ಗ್ರಾ.ಪಂ.ಉಪಾಧ್ಯಕ್ಷ ಸುಧಾಕರ ಪೂಜಾರಿ, ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಜಯಂತ ಪೂಜಾರಿ, ಆಲಂಕಾರು ಕೋಟಿ ಚೆನ್ನಯ ಮಿತ್ರವೃಂದದ ಅಧ್ಯಕ್ಷ ದಿನೇಶ್ ನೆಕ್ಕಿಲಾಡಿ, ನಾಗಪ್ಪ ಗೌಡ ಪಾಲೆಚ್ಚಾರು, ಅಗತ್ತಾಡಿ ಗರಡಿ ಉಪಾಧ್ಯಕ್ಷ ಯಶವಂತ ಪೂಜಾರಿ, ಆನಂದ ಪೂಜಾರಿ, ಕೋಟಿ ಚೆನ್ನಯ ಮಿತ್ರವೃಂದ ಆಲಂಕಾರು, ಬಿಲ್ಲವ ಸಂಘ ಆಲಂಕಾರು, ಕೋಟಿ ಚೆನ್ನಯ ಯುವ ವೇದಿಕೆ ಅಗತ್ತಾಡಿ, ಅಗತ್ತಾಡಿ ದೋಳ ಬಾರಿಕೆ ಕುಟುಂಬಸ್ಥರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.