ನೆಟ್ಟಣಿಗೆ:ಕೆರೆಗೆ ಬಿದ್ದ ಕಾರು, ಚಾಲಕ ಸುಪ್ರೀತ್ ರೈ ಮೃತ್ಯು

Puttur_Advt_NewsUnder_1
Puttur_Advt_NewsUnder_1

20160122010030ಪುತ್ತೂರು:ಮನೆಯಂಗಲದಲ್ಲಿ ನಿಲ್ಲಿಸಿದ್ದ ಕಾರನ್ನು ಹಿಂದಕ್ಕೆ ತೆಗೆಯುವ ಸಂದರ್ಭದಲ್ಲಿ ಕಾರು ಕೆರೆಗೆ ಬಿದ್ದು ಚಾಲಕ ಮೃತಪಟ್ಟ ಘಟನೆ ಜ.22ರಂದು ಆದೂರು ಪೊಲೀಸ್ ಠಾಣಾ ವ್ಯಾಪ್ತಿಯ ನೆಟ್ಟಣಿಗೆ ಬಜದಗುತ್ತು ಎಂಬಲ್ಲಿ ನಡೆದಿದೆ.

ನೆಟ್ಣಿಣಿಗೆ ಬಜದಗುತ್ತು ಅಮರನಾಥ ರೈಯವರ ಪುತ್ರ ಸುಪ್ರೀತ್ ರೈ(35.ವ) ಮೃತಪಟ್ಟವರು. ಶಿವಮೊಗ್ಗದಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಸುಪ್ರೀತ್‌ರವರು ಮನೆಯಲ್ಲಿ ನಡೆಯಲಿರುವ ದೈವಗಳ ಪ್ರತಿಷ್ಠಾ ಕಾರ್ಯಕ್ರಮಕ್ಕೆ ರಜೆಯಲ್ಲಿ ಬಂದಿದ್ದರು. ಬೆಳಿಗ್ಗೆ ಸುಳ್ಯಕ್ಕೆ ಸಹೋದರ ಗುರುಪ್ರಸಾದ್‌ರವರ ಜೊತೆಗೆ ಮಾರುತಿ ಆಲ್ಟೋ 800 ಕಾರಿನಲ್ಲಿ ಹೊರಟಿದ್ದರು. ಮನೆ ಮುಂಬಾಗದಲ್ಲಿ ನಿಲ್ಲಿಸಿದ್ದ ಕಾರನ್ನು ಹಿಂದಕ್ಕೆ ತೆಗೆಯುವ ಸಂದರ್ಭದಲ್ಲಿ ಕಾರು ಮನೆ ಮುಂಬಾಗದಲ್ಲಿದ್ದ ಕೆರೆಗೆ ಬಿದ್ದಿದೆ. ಈ ಸಂದರ್ಭದಲ್ಲಿ ಗುರುಪ್ರಸಾದ್‌ರವರು ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೆರೆಗೆ ಬಿದ್ದ ಕಾರು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಹೋಗಿದ್ದ ಈ ಸಂದರ್ಭದಲ್ಲಿ ಕಾರಿನ ಸೆಂಟ್ರಲ್ ಲಾಕ್‌ನಲ್ಲಿ ಉಂಟಾದ ತೊಂದರೆಯಿಂದಾಗಿ ಚಾಲಕ ಸುಪ್ರೀತ್‌ರವರು ಕಾರಿನಿಂದ ಹೊರ ಬರಲಾರದೆ ಉಸಿರುಗಟ್ಟಿ ಜೀವನ್ಮರಣ ಹೋರಾಡುತ್ತಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು ಸೇರಿಕೊಂಡು ಸುಪ್ರೀತ್‌ರವರನ್ನು ಮೇಲಕೆತ್ತಿ ಪುತ್ತೂರಿನ ಆಸ್ಪತ್ರೆಗೆ ಸಾಗಿಸುತ್ತಿರುವ ಸಂದರ್ಭದಲ್ಲಿ ದಾರಿಮಧ್ಯೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಮೃತರು ತಂದೆ ಅಮರನಾಥ ರೈ, ತಾಯಿ ಜಯಂತಿ, ಪತ್ನಿ ಉಡುಪಿ ಜಿಲ್ಲಾ ನ್ಯಾಯಾಲಯದ ಸಿಬಂದಿ ಶೋಧ, ಇಬ್ಬರು ಗಂಡು ಮಕ್ಕಳು ಮತ್ತು ಸಹೋದರರಾದ ಗುರುಪ್ರಸಾದ್ ರೈ ಹಾಗೂ ಸಾಗರ್ ರೈಯವರನ್ನು ಅಗಲಿದ್ದಾರೆ. ಆದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ರಹ್ಮಕಲಶದ ತಯಾರಿಯಲ್ಲಿದ್ದರು
ಮೃತರ ತರವಾಡು ಮನೆ ಬಜದಗುತ್ತ ಕುಟುಂಬ ದೈವಗಳ ಪ್ರತಿಷ್ಠಾ ಬ್ರಹ್ಮಕಲಶ ಹಾಗೂ ನೇಮೋತ್ಸವವು ಜ.23ರಿಂದ ನಡೆಯಲಿತ್ತು. ಈ ಕಾರ್ಯಾಕ್ರಮ ನಿಮಿತ್ತ ರಜೆಯಲ್ಲಿ ಮನೆಗೆ ಬಂದಿದ್ದ ಸುಪ್ರೀತ್ ಕಾರ್ಯಕ್ರಮದ ತಯಾರಿಯಲ್ಲಿದ್ದರು. ಇದೀಗ ಆಕಸ್ಮಿಕವಾದ ಅನಾಹುತದಿಂದ ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿರಬೇಕಾದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

20160122010029

20160122010032

20160122010033

20160122010034

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.