ದಿ ಪುತ್ತೂರು ಕ್ಲಬ್‌ನ ವಾರ್ಷಿಕ ಸಾಮಾನ್ಯ ಮಹಾಸಭೆ

Puttur_Advt_NewsUnder_1
Puttur_Advt_NewsUnder_1

dddddddddd

ವಿಕ್ಟರ್ ಮಾರ್ಟಿಸ್,ವಿಶ್ವಾಸ್ ಶೆಣೈ,ಭುಜಂಗ ಆಚಾರ್ಯ,ಗಂಗಾಧರ್ ರೈ,ಪ್ರಸನ್ನಕುಮಾರ್ ಸೇರ್ಪಡೆ

ಪುತ್ತೂರು: ಮರೀಲಿನಲ್ಲಿರುವ ದಿ ಪುತ್ತೂರು ಕ್ಲಬ್‌ನ ವಾರ್ಷಿಕ ಮಹಾಸಭೆಯು ಜ.16 ರಂದು ಕ್ಲಬ್‌ನ ಅಧ್ಯಕ್ಷ ಡಾ|ದೀಪಕ್ ರೈರವರ ನೇತೃತ್ವದಲ್ಲಿ ಕ್ಲಬ್ ವಠಾರದಲ್ಲಿ ನಡೆಯಿತು.

ಕ್ಲಬ್‌ನ ಪ್ರಗತಿ ಬಗ್ಗೆ ಅಧ್ಯಕ್ಷ ಡಾ|ದೀಪಕ್ ರೈರವರು ವಿವರಿಸುತ್ತಾ ೨೦೧೫-೧೬ನೇ ಸಾಲಿನಲ್ಲಿ ಎರಡು ಹೊಸ ವಾಸ್ತವ್ಯದ ಕೋಣೆ, ಮೇಲ್ಚಾವಣಿ ಸಭಾಗೃಹ ಮತ್ತು ಕಾರ್ಡ್ ರೂಂಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಅಲ್ಲದೆ ಈಗಾಗಲೇ ಉಪಯೋಗದಲ್ಲಿರುವ ಶಟಲ್ ಬ್ಯಾಡ್ಮಿಂಟನ್, ಸ್ನೂಕರ್, ಜಿಮ್ ಮತ್ತು ಟೇಬಲ್ ಟೆನ್ನಿಸ್‌ನ ಉಪಯೋಗ ಮಾಡುವಂತೆ ಸದಸ್ಯರಲ್ಲಿ ಡಾ|ದೀಪಕ್‌ರವರು ವಿನಂತಿಸಿಕೊಂಡರು. ಮುಂದಿನ ದಿನಗಳಲ್ಲಿ ಟೆನ್ನಿಸ್ ಕೋರ್ಟ್, ಹೂದೋಟವಲ್ಲದೆ ಕಾಟೇಜ್, ಈಜುಕೊಳ ಮತ್ತು ಜಾಗಿಂಗ್ ಪಾರ್ಕ್‌ಗಳನ್ನು ಹಂತ ಹಂತವಾಗಿ ಅಭಿವೃದ್ಧಿಗೊಳಿಸಲಾಗುವುದು ಎಂದು ದೀಪಕ್ ರೈರವರು ಹೇಳಿದರು.

ಆಡಳಿತ ಮಂಡಳಿಗೆ ಸೇರ್ಪಡೆ: ಪ್ರಸ್ತುತ ಇರುವ ಆಡಳಿತ ಮಂಡಳಿಯ ಸದಸ್ಯರ ಪೈಕಿ ಗಿರೀಶ್ ಕೆ.ಎನ್‌ರವರು ತನ್ನ ಸದಸ್ಯತನವನ್ನು ಹಿಂತೆಗೆದುಕೊಂಡ ಕಾರಣ ಅವರ ಸ್ಥಾನಕ್ಕೆ ವಿಕ್ಟರ್ ಮಾರ್ಟಿಸ್‌ರವರನ್ನು ಸೇರ್ಪಡೆಗೊಳಿಸಲಾಗಿದೆ  ಅಲ್ಲದೆ ಪ್ರಸ್ತುತ ೧೧ ಮಂದಿ ಸದಸ್ಯರ ಆಡಳಿತ ಮಂಡಳಿಯಿದ್ದು ಇದನ್ನು ೧೫ ಮಂದಿಗೆ ಏರಿಸಲಾಗಿದ್ದು ಇದರಲ್ಲಿ ವಿಶ್ವಾಸ್ ಶೆಣೈ, ಭುಜಂಗ ಆಚಾರ್ಯ, ಗಂಗಾಧರ್ ರೈ, ಪ್ರಸನ್ನಕುಮಾರ್ ರೈರವರನ್ನು ಹೊಸದಾಗಿ ಸೇರ್ಪಡೆಗೊಳಿಸಲಾಯಿತು. ಉಳಿದಂತೆ ಅಧ್ಯಕ್ಷ ಡಾ|ದೀಪಕ್ ರೈ, ಕಾರ್ಯದರ್ಶಿ ಓಸ್ಕರ್ ಆನಂದ್, ಕೋಶಾಧಿಕಾರಿ ದಿವಾಕರ್ ಕೆ.ಪಿ, ಉಪಾಧ್ಯಕ್ಷ ಸಚ್ಚಿದಾನಂದ, ಸಹಕಾರ್ಯದರ್ಶಿ ದೀಪಕ್ ಕೆ.ಪಿ, ಸದಸ್ಯರಾದ ರೂಪೇಶ್ ಶೇಟ್, ಪ್ರಶಾಂತ್ ಶೆಣೈ, ಪ್ರಭಾಕರ್ ಎ.ಎಮ್, ನಿತಿನ್ ಪಕ್ಕಳ, ಗಣೇಶ್ ಕಾಮತ್‌ರವರು ಮುಂದುವರೆಯಲಿರುವರು. ಅಧ್ಯಕ್ಷ ಡಾ|ದೀಪಕ್ ರೈ ಸ್ವಾಗತಿಸಿ, ಕಾರ್ಯದರ್ಶಿ ಓಸ್ಕರ್ ಆನಂದ್ ವರದಿಯನ್ನು ಮಂಡಿಸಿದರು. ಖಜಾಂಚಿ ದಿವಾಕರ್ ಕೆ.ಪಿ ೨೦೧೪-೧೫ನೇ ಲೆಕ್ಕಪತ್ರ ವಾಚಿಸಿ, ಮುಂಗಡ ಆಯವ್ಯಯ ಪತ್ರ ಮಂಡಿಸಿದರು. ೧೨೫ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.