ಜ.23 ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಭಜನಾ ಸಂಘದ 33ನೇ ವಾರ್ಷಿಕೋತ್ಸವ ಮತ್ತು ನಗರ ಭಜನಾ ಮಂಗಲೋತ್ಸವ 

Puttur_Advt_NewsUnder_1
Puttur_Advt_NewsUnder_1

ನಿಡ್ಪಳ್ಳಿ: ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಭಜನಾ ಸಂಘದ 33ನೇ ವಾರ್ಷಿಕೋತ್ಸವ ಹಾಗೂ ನಗರ ಭಜನಾ ಮಂಗಲೋತ್ಸವ ಕಾರ್ಯಕ್ರಮ ಬೆಟ್ಟಂಪಾಡಿ ದೇವಾಲಯದಲ್ಲಿ ಜ.23ರಂದು ಸಂಜೆ ನಡೆಯಲಿದೆ.
ಭಜನಾ ಮಂಗಲೋತ್ಸವ ಕಾರ್ಯಕ್ರಮವನ್ನು ಸಂಜೆ ಬೆಟ್ಟಂಪಾಡಿ ದೇವಾಲಯದ ಅರ್ಚಕರಾದ ಶ್ರೀ ವೇದಮೂರ್ತಿ ವೆಂಕಟ್ರಮಣ ಭಟ್ ಜ್ಯೋತಿ ಬೆಳಗಿಸಿ ಉದ್ಘಾಟಿಸಲಿದ್ದಾರೆ. ನಂತರ ವಿವಿಧ ಭಜನಾ ಮಂಡಳಿಯವರಿಂದ ಭಜನೆ ನಡೆಯಲಿದೆ. ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದ್ದು ರಾತ್ರಿ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಪೂಜಾ ವಿಧಿ ವಿಧಾನವನ್ನು ಮಿತ್ತೂರು ಬೀಡಿನ ಮಜಲು ಶ್ರೀ ಆದಿ ಪರಾಶಕ್ತಿ ದೇವಸ್ಥಾನದ ಅರ್ಚಕ ವೇದಮೂರ್ತಿ ಶ್ರೀ ಕೆ ಸತ್ಯಶಂಕರ ಭಟ್ ನಡೆಸಲಿದ್ದಾರೆ ಎಂದು ಭಜನಾ ಸಂಘದ ಅಧ್ಯಕ್ಷ ರವಿನಾಥ ರೈ ಗುಂಡ್ಯಡ್ಕ ಹಾಗೂ ಸಮಿತಿ ಸದಸ್ಯರು ತಿಳಿಸಿದ್ದಾರೆ .

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.