Breaking News

ಕಿಡ್ಸ್ ಕೋಡಿಂಬಾಳ ಘಟಕ ವಾರ್ಷಿಕೋತ್ಸವ ಮತ್ತು ಸಾವಯವ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟಮೇಳ

Puttur_Advt_NewsUnder_1
Puttur_Advt_NewsUnder_1

kids kodimbalaಕಡಬ: ಕರ್ನಾಟಕ ಇಂಟಗ್ರೇಟೆಡ್ ಡೆವಲಪ್‌ಮೆಂಟ್ ಸೊಸೈಟಿ ಕೋಡಿಂಬಾಳ ಘಟಕದ ವಾರ್ಷಿಕೋತ್ಸವವು ಜ. 14ರಂದು ಕೋಡಿಂಬಾಳ ಸೈಂಟ್ ಜಾರ್ಜ್ ಮಲಂಕರ ಕ್ಯಾಥೋಲಿಕ್ ಚರ್ಚ್ ಸಭಾಂಗಣದಲ್ಲಿ ಜರುಗಿತು. ಪುತ್ತೂರು ಧರ್ಮಪ್ರಾಂತ್ಯದ ಧರ್ಮಾದ್ಯಕ್ಷರಾದ ಅತೀ.ವಂ. ಡಾ/ ಗಿವರ್ಗೀಸ್ ಮಾರ್ ದಿವನ್ನಾಸೀಯೋಸ್ ರವರು ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿ ಸಂಸ್ಥೆಯು ಎಲ್ಲಾ ಜಾತಿಯ ಜನರನ್ನು ಒಗ್ಗೂಡಿಸಿ ಗ್ರಾಮೀಣ ಅಭಿವೃದ್ದಿಗೆ ಪ್ರೇರಣೆ ನೀಡುತ್ತಾ ಅನೇಕ ಜನರು ಆರ್ಥಿಕವಾಗಿ ಸಾಮಾಜಿಕವಾಗಿ ಸಧೃಡರಾಗಿದ್ದು, ಎಲ್ಲರು ಒಗ್ಗಟಿನಿಂದ ಜವಬ್ದಾರಿಯುತವಾಗಿ ಬಾಳುವುದರ ಮೂಲಕ ವೈವಧ್ಯತೆಯಲ್ಲಿ ಏಕತೆ ತರುವುದೆ ಸಂಸ್ಥೆಯ ಉದ್ಧೇಶ ಎಂದು ಶುಭಹಾರೈಸಿದರು.
ಕಾರ್ಯಕ್ರಮವನ್ನು ಕಡಬ ತಹಶಿಲ್ದಾರರಾದ ಬಿ. ಲಿಂಗಯ್ಯ ಉದ್ಘಾಟಿಸಿ ಸಂಸ್ಥೆಯು ನಡೆಸುವ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸರಕಾರದ ಸೌಲಭ್ಯಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಮಾಹಿತಿಯು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಸಂಸ್ಥೆಯು ಪ್ರಮುಖ ಪಾತ್ರ ವಹಿಸುತ್ತಿದೆ. ಸರಕಾರದ ವತಿಯಿಂದ ಬೇಕಾದ ಸಹಕಾರ ನೀಡಲಾಗುವುದು ಎಂದರು.
ಮುಖ್ಯ ಅತೀಥಿಗಳಾಗಿ ಪುತ್ತೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ಜಾರ್ಜ್ ಕಾಲಾಯಿಲ್, ಕಡಬ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಾಬು ಮೊಗೇರ, ಉಪಾಧ್ಯಕ್ಷೆ ಜ್ಯೋತಿ .ಡಿ. ಕೋಲ್ಪೆ, ಸದಸ್ಯರುಗಳಾದ . ಫಝಲ್, ರೇವತಿ, ಕಿಡ್ಸ್ ಕಾರ್ಯನಿರ್ವಾಹಕ ನಿರ್ದೇಶಕರಾದ ಫಾ. ಜೋನ್ ಕುನ್ನತೇತ್. ಕಿಡ್ಸ್ ಘಟಕ ಅಧ್ಯಕ್ಷರಾದ ಸಂತೋಷ್, ಕೋಡಿಂಬಾಳ ಚರ್ಚ್ ಪಾಲನಾ ಸಮಿತಿ ಅಧ್ಯಕ್ಷರಾದ ಜೋಣಿ. ಕೆ.ಟಿ. ಉಪಸ್ಥಿತರಿದ್ದರು.
ಕಿಡ್ಸ್ ಘಟಕ ನಿರ್ದೇಶಕರಾದ ಕೋಡಿಂಬಾಳ ಸೈಂಟ್ ಜಾರ್ಜ್ ಮಲಂಕರ ಕ್ಯಾಥೋಲಿಕ್ ಚರ್ಚ್‌ನ ಧರ್ಮಗುರುಗಳಾದ ಫಾ. ಮಾಥ್ಯೂ ಕುರಿಯನ್ ಸ್ವಾಗತಿಸಿ, ಕಿಡ್ಸ್ ವಲಯಾಧಿಕಾರಿ ಮನೋಜ್ ವಂದಿಸಿದರು. ಕುಮಾರಿ ಝೀನತ್ ಮತ್ತು ರೋಶನ್ ಕಾರ್ಯಕ್ರಮ ನಿರೂಪಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.