ವಿಟ್ಲ: ವಗೆನಾಡು ಶ್ರೀ ಸುಬ್ರಾಯ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿ ಸಂಪೂರ್ಣ, ಜ.24 ರಿಂದ ಬ್ರಹ್ಮಕಲಶ ಪ್ರಕ್ರಿಯೆ ಆರಂಭ

Puttur_Advt_NewsUnder_1
Puttur_Advt_NewsUnder_1

22vtl2 vagenadu4875ವಿಟ್ಲ: ವಗೆನಾಡು ಶ್ರೀ ಸುಬ್ರಾಯ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿ ಪೂರ್ಣಗೊಂಡಿದ್ದು ಬ್ರಹ್ಮಕಲಶಕ್ಕೆ ಸಿದ್ಧತೆಯೂ ಅಂತಿಮ ಹಂತಕ್ಕೆ ತಲುಪಿದೆ. ಜ.24ರಂದು ಬ್ರಹ್ಮಕಲಶ ಪ್ರಕ್ರಿಯೆ ಆರಂಭಗೊಳ್ಳಲಿದ್ದು ಫೆ.1 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಳ್ಳಲಿದೆ.
ವಿಟ್ಲ ಸೀಮೆ ವ್ಯಾಪ್ತಿಗೆ ಸೇರಿದ ಕರೋಪಾಡಿ ಗ್ರಾಮದಲ್ಲಿರುವ ವಗೆನಾಡು ಶ್ರೀ ಸುಬ್ರಾಯ ದೇವಸ್ಥಾನಕ್ಕೆ ಸುಮಾರು 750 ವರ್ಷಗಳ ಇತಿಹಾಸವನ್ನು ಹೊಂದಿದೆ. ಆಳುಪ ವಂಶದ ರಾಜನು ಡೊಂಬ ಹೆಗಡೆ ಸಹಿತವಾಗಿ ಇಲ್ಲಿ ಸಭೆ ನಡೆಸಿದ ಉಲ್ಲೇಖವಿರುವ ಶಿಲಾ ಶಾಸನಾಧಾರವಿದೆ. ಇದಕ್ಕೂ ಮೊದಲು ದೇವಾಲಯ ಅಸ್ತಿತ್ವದಲ್ಲಿತ್ತು ಎಂದು ಹಿರಿಯರು ಹೇಳುತ್ತಾರೆ. ವಿವಾಹ, ಸಂತಾನ ಭಾಗ್ಯ, ಆರೋಗ್ಯ ವೃದ್ಧಿಗಾಗಿ, ನಾಗದೋಷ ನಿವಾರಣೆಗೆ, ಚರ್ಮರೋಗಗಳಿಗೆ ಸುಬ್ರಹ್ಮಣ್ಯನನ್ನು ಪ್ರಾರ್ಥಿಸಿದರೆ ಗುಣಮುಖರಾಗುತ್ತಾರೆ ಎಂದು ಭಕ್ತರ ನಂಬಿಕೆಯಿದೆ.
ಅತ್ಯಂತ ಜೀರ್ಣಾವಸ್ಥೆಯಲ್ಲಿದ್ದ ದೇವಸ್ಥಾನವನ್ನು 1991ರಲ್ಲಿ ಅಸ್ತಿತ್ವಕ್ಕೆ ಬಂದ ಸೇವಾ ಸಮಿತಿಯ ಮುಂದಾಳತ್ವದ ಭಕ್ತ ವೃಂದವು 12 ಲಕ್ಷ ರೂ.ಗಳ ವೆಚ್ಚದಲ್ಲಿ ಶಿಲಾಮಯ ಗರ್ಭಗುಡಿ, ಸುತ್ತುಗೋಪುರಗಳನ್ನು ನಿರ್ಮಿಸಿ, 1993ರಲ್ಲಿ ಪುನಃ ಪ್ರತಿಷ್ಠಾ ಬ್ರಹ್ಮಕಲಶವನ್ನು ನೇರವೇರಿಸಲಾಗಿತ್ತು. ಅಲ್ಲದೇ ಪುನಃ 3ಲಕ್ಷ ರೂ.ಗಳನ್ನು ಸಂಗ್ರಹಿಸಿ, ಬಾಕಿಯುಳಿದ ಅಭಿವೃದ್ಧಿ ಕಾಮಗಾರಿಗಳನ್ನು ಪೂರೈಸಿದೆ. ಇದೇ ಸಂದರ್ಭ ಕುಡ್ಪಲ್ತಡ್ಕದಿಂದ ದೇವಸ್ಥಾನದವರೆಗೆ ಸುಮಾರು ಒಂದೂವರೆ ಕಿಮೀ ದೂರದ ರಸ್ತೆಯನ್ನು ಇಲ್ಲಿನ ಭಕ್ತ ವೃಂದದ ಶ್ರಮದಾನದ ಮೂಲಕ ನಿರ್ಮಿಸಿದ್ದು ಅತ್ಯಂತ ಉಪಯುಕ್ತವಾಗಿದೆ.
ಇಲ್ಲಿನ ಸುಬ್ರಹ್ಮಣ್ಯೇಶ್ವರ ಕಲಾ ಸಂಘದ ಅಧ್ಯಕ್ಷ ಪಟ್ಲಗುತ್ತು ಮಹಾಬಲ ಶೆಟ್ಟಿ ಅವರ ನೇತೃತ್ವದಲ್ಲಿ ಸಿಂಹ ಸಂಕ್ರಮಣದಲ್ಲಿ 32 ದಿನಗಳ ಕಾಲ ಇಲ್ಲಿ ಅನ್ನಸಂತರ್ಪಣೆ, ಭಜನೆ, ಯಕ್ಷಗಾನ ತಾಳಮದ್ದಳೆ, ಬಯಲಾಟವನ್ನು ಏರ್ಪಡಿಸಲಾಗುತ್ತದೆ. ಕಳೆದ 17 ವರ್ಷಗಳಿಂದ ಈ ಕಾರ್ಯಕ್ರಮವನ್ನು ಆಯೋಜಿಸುತ್ತ ಬರಲಾಗಿದ್ದು ಬಹಳಷ್ಟು ಪ್ರಸಿದ್ಧಿ ಪಡೆದಿದೆ.
ಇದೀಗ ಮತ್ತೆ 2015ರಲ್ಲಿ ಜೀರ್ಣೋದ್ಧಾರ ಸಮಿತಿಯನ್ನು ರಚಿಸಲಾಗಿದ್ದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ಗೌರವಾಧ್ಯಕ್ಷತೆಯಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಂಡು ಗರ್ಭಗುಡಿಯನ್ನು ನವೀಕರಿಸಲಾಗಿದೆ. ನೂತನ ತೀರ್ಥಮಂಟಪ, ಪ್ರತ್ಯೇಕ ಗಣಪತಿ ದೇವರ ಗುಡಿ, ನಾಗನ ಕಟ್ಟೆ ನಿರ್ಮಿಸಲಾಗಿದೆ. ಅಂಗಣಕ್ಕೆ ಕಲ್ಲು ಹಾಸಲಾಗಿದೆ. ಒಟ್ಟು ೨ ಕೋಟಿ ರೂ.ಗಳಿಗೂ ಮಿಕ್ಕಿದ ಧನಸಹಾಯದಲ್ಲಿ ಪುಟ್ಟ ಹಳ್ಳಿಯಲ್ಲಿ ದೇಗುಲವನ್ನು ಸುಂದರವಾಗಿ ಜೀರ್ಣೋದ್ಧಾರ ಮಾಡಲಾಗಿದೆ. ಭಕ್ತರು ಶ್ರಮದಾನದ ಮೂಲಕ ಅನೇಕ ಕಾಮಗಾರಿಗಳನ್ನು ಮಾಡಿದ್ದಾರೆ. ಜನಪ್ರತಿನಿಧಿಗಳು ಸರಕಾರದ ಅನುದಾನವನ್ನು ಬಿಡುಗಡೆಗೊಳಿಸಿದ್ದರಿಂದ ಇದೀಗ ರಸ್ತೆಯೂ ಸುಸಜ್ಜಿತಗೊಂಡಿದೆ.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕಣಿಯೂರು ಶ್ರೀ ಚಾಮುಂಡೇಶ್ವರೀ ಕ್ಷೇತ್ರದ ಮಹಾಬಲ ಸ್ವಾಮೀಜಿ, ಸಾಧ್ವೀ ಶ್ರೀ ಮಾತಾನಂದಮಯೀ, ಆಡಳಿತ ಮೊಕ್ತೇಸರ ಮುಗುಳಿ ತಿರುಮಲೇಶ್ವರ ಭಟ್, ಅಧ್ಯಕ್ಷರಾಗಿ ಒ.ಶ್ಯಾಮ ಭಟ್ ಒಡಿಯೂರು, ಕಾರ್ಯಾಧ್ಯಕ್ಷರಾಗಿ ಟಿ.ಪ್ರದೀಪ ಶೆಟ್ಟಿ ಗುಬ್ಯಗುತ್ತು, ಪ್ರಧಾನ ಕಾರ್ಯದರ್ಶಿಯಾಗಿ ಶಿವಪ್ರಸಾದ ಶೆಟ್ಟಿ ಅನೆಯಾಲಗುತ್ತು, ಕೋಶಾಧಿಕಾರಿಯಾಗಿ ದಿನೇಶ್ ಶೆಟ್ಟಿ ಪಟ್ಲಗುತ್ತು, ಆರ್ಥಿಕ ಸಮಿತಿ ಪ್ರಧಾನರಾಗಿ ಪ್ರಸಿದ್ಧ ಭಾಗವತ ಸತೀಶ ಶೆಟ್ಟಿ ಪಟ್ಲಗುತ್ತು ಅವರು ಕರ್ತವ್ಯ ನಿರ್ವಹಿಸಿದ್ದಾರೆ. ಬ್ರಹ್ಮಕಲಶ ಸಮಿತಿ ಅಧ್ಯಕ್ಷರಾಗಿ ಪಟ್ಲಗುತ್ತು ಮಹಾಬಲ ಶೆಟ್ಟಿ, ಕಾರ್ಯಾಧ್ಯಕ್ಷರಾಗಿ ಟಿ.ತಾರಾನಾಥ ಕೊಟ್ಟಾರಿ, ಪ್ರಧಾನ ಕಾರ್ಯದರ್ಶಿಯಾಗಿ ವಿಘ್ನೇಶ್ವರ ಭಟ್ ಅನೆಯಾಲಕೋಡಿ ಮತ್ತು ಅನೇಕ ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯನಿರ್ವಹಿಸುತ್ತಿದ್ದಾರೆ.
ವಗೆನಾಡು ಶ್ರೀ ಸುಬ್ರಾಯ ದೇವಸ್ಥಾನ ಹೊರೆಕಾಣಿಕೆ ಸಮರ್ಪಣೆ ಮತ್ತು ಉದ್ಘಾಟನ ಸಮಾರಂಭ ಜ.೨೪ರಂದು ನಡೆಯಲಿದೆ. ಹಸಿರುವಾಣಿ ಹೊರೆಕಾಣಿಕೆಯ ವೈಭವದ ಶೋಭಾಯಾತ್ರೆಯು ಕುಡ್ಪಲ್ತಡ್ಕ ಭಜನಾ ಮಂದಿರದಿಂದ ೨ ಗಂಟೆಗೆ ಹೊರಟು ಕಣಿಯೂರು, ಕನ್ಯಾನ, ಒಡಿಯೂರು ಕ್ಷೇತ್ರ, ಮಿತ್ತನಡ್ಕ ಶ್ರೀ ಮಲರಾಯ ದೈವಸ್ಥಾನಕ್ಕೆ ತಲುಪಿ, ಬಳಿಕ ವಗೆನಾಡು ದೇಗುಲಕ್ಕೆ ತಲುಪುತ್ತದೆ ಎಂದು ಬ್ರಹ್ಮಕಲಶೋತ್ಸವ ಪ್ರಕಟನೆ ತಿಳಿಸಿದೆ.22vtl2 vagenadu487522vtl2 vagenadu4875

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.