ಚೆನ್ನಾವರ: ಭಾರತ ಮಾತಾ ಪೂಜನಾ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1

2201 PLD 3ಪಾಲ್ತಾಡಿ  : ತಾಯಿ ಭಾರತಾಂಬೆಯನ್ನು ಪೂಜಿಸುವುದು ಉತ್ತಮ ಕಾರ್ಯ,ವಿಶ್ವದಾದ್ಯಂತ ತನ್ನ ವೈಶಿಷ್ಟ್ಯಗಳಿಂದ ಮೇರು ಸ್ಥಾನ ಪಡೆದಿರುವ ಭಾರತಾಂಬೆಯನ್ನು ಪೂಜಿಸುವುದು ಪ್ರತಿಯೊಬ್ಬನ ಕರ್ತವ್ಯ.ಪಾಶ್ಚಾತ್ಯರು ಆರಂಬಿಸಿರುವ ಅರ್ಥವಿಲ್ಲದ ಆಚರಣೆಗಳನ್ನು ಆಚರಿಸುವ ಬದಲು ದೇಶಪ್ರೇಮ ಮೈಗೂಡಿಸಿಕೊಂಡು ಭಾರತ ಮಾತೆಯನ್ನು ಪೂಜಿಸಬೇಕು ಎಂದು ಸಾಮಾಜಿಕ ಮುಂದಾಳು ಶಂಕರ್ ಭಟ್ ಹೇಳಿದರು..

ಅವರು ಪಾಲ್ತಾಡಿ ಗ್ರಾಮ ವಿಕಾಸ ಪ್ರತಿಷ್ಠಾನದ ಸಹಯೋಗದಲ್ಲಿ ಚೆನ್ನಾವರದಲ್ಲಿ ನಡೆದ ಭಾರತ ಮಾತಾ ಪೂಜನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ವೇದಿಕೆಯಲ್ಲಿ ಭಾರತಿ ಗ್ರಾಮವಿಕಾಸ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಬಿ.ಕೆ.ರಮೇಶ್ ,ಬಾಬು ಗುರುಸ್ವಾಮಿ ಕೌಡಿಚ್ಚಾರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ,ಮಂಜುನಾಥನಗರ ವಿವೇಕಾನಂದ ಯುವಕ ಮಂಡಲದ ಅಧ್ಯಕ್ಷ ಅನ್ನಪೂರ್ಣಪ್ರಸಾದ್ ರೈ ಬೈಲಾಡಿ, ಚೈತನ್ಯ ರೈತಶಕ್ತಿ ಕೇಂದ್ರದ ಅಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ ಮೊದಲಾದವರು ಭಾಗವಹಿಸಿದ್ದರು.

ಕಾರ್ಯಕ್ರಮದ ಆಯೋಜಕ ಪ್ರವೀಣ್ ಕುಮಾರ್ ಸ್ವಾಗತಿಸಿ, ಕವಿತಾ ಪ್ರವೀಣ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.