ಪರೀಕ್ಷಾ ಭಯ ಹೋಗಲಾಡಿಸಲು ಜ.23 ರಂದು ಪ್ರಗತಿ  ಸ್ಟಡಿ ಸೆಂಟರ್‌ನಲ್ಲಿ ‘ಪರೀಕ್ಷಾ ಹಬ್ಬ’

Puttur_Advt_NewsUnder_1
Puttur_Advt_NewsUnder_1

pragathiಪುತ್ತೂರು: ಎಸ್‌ಎಸ್‌ಎಲ್‌ಸಿ, ಪಿ.ಯು.ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯವನ್ನು ಹೋಗಲಾಡಿಸುವ ಸಲುವಾಗಿ ಪುತ್ತೂರು ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ  ‘ಪರೀಕ್ಷಾಹಬ್ಬ’ ಕಾರ್ಯಕ್ರಮ ಜ. 23ರಂದು ನಡೆಯಲಿದೆ. ಅಪರಾಹ್ನ  ನಡೆಯುವ ಕಾರ್ಯಕ್ರಮವನ್ನು ಪುತ್ತೂರಿನ ಸಹಾಯಕ ಆಯುಕ್ತ ಡಾ.ರಾಜೇಂದ್ರ ಕೆ.ವಿ. ಅವರು ಉದ್ಘಾಟಿಸಿ ಸಭಾಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಜಿಎಸ್.ಶಶಿದರ್‌ರವರ ಗೌರವ ಉಪಸ್ಥಿತಿಯಲ್ಲಿ ಕಾರ‍್ಯಕ್ರಮ ನೀಡಲಿದ್ದಾರೆ. ‘ಪರೀಕ್ಷಾ ಭಯ’ವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಪರಿವೀಕ್ಷಣಾಧಿಕಾರಿ ರಘುರಾಜ್ ಉಬರಡ್ಕರವರು ಮಾರ್ಗದರ್ಶನ ನೀಡಲಿದ್ದಾರೆ. ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಯಸ್ ಶಶಿಧರ್ ಮತ್ತು ಪುತ್ತೂರು ಬೆಥನಿ  ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಎಮಿರಿಟಾರವರು ಭಾಗವಹಿಸಲಿದ್ದಾರೆ ಎಂದು ಪ್ರಗತಿಸ್ಟಡಿ ಸೆಂಟರ್‌ನ ಸಂಚಾಲಕ ಗೋಕುಲ್‌ನಾಥ್‌ರವರು ತಿಳಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.