ಜ. 24 : ಕಡಬದಲ್ಲಿ ತಾಜುಲ್ ಉಲಮಾ ಅನುಸ್ಮರಣೆ

Puttur_Advt_NewsUnder_1
Puttur_Advt_NewsUnder_1

ಕಡಬ: ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಕಡಬ ರೇಂಜ್‌ನ ವತಿಯಿಂದ ಜ.24ರಂದು ಕೇಂದ್ರ ಜುಮ್ಮಾ ಮಸೀದಿಯಲ್ಲಿ ತಾಜುಲ್ ಉಲಮಾ ಅನುಸ್ಮರಣೆ ನಡೆಯಲಿದೆ ಎಂದು ಕೇಂದ್ರ ಜುಮ್ಮಾ ಮಸೀದಿಯ ಕಾರ‍್ಯದರ್ಶಿ ಮಹಮ್ಮದ್ ಫೈಝಲ್ ತಿಳಿಸಿದ್ದಾರೆ.

ಸುನ್ನಿ ಸಂಸ್ಥಾನದ ಉಲಮಾರಾಗಿದ್ದು ಜಿಲ್ಲಾ ಖಾಝಿಯಾಗಿ ಸುನ್ನಿ ಸ್ಟುಡೆಂಟ್ ಫೆಡರೇಶನ್‌ನ ನೇತಾರರಾಗಿದ್ದ  ತಾಜುಲ್ ಉಲಮಾ ಅನುಸ್ಮರಣೆಯನ್ನು ಕಡಬ ರೇಂಜ್ ಮೊಹಲ್ಲಿಂಗಳ ಸಹಯೋಗದೊಂದಿಗೆ ಆಚರಿಸುವುದಾಗಿ ತಿಳಿಸಿದ ಅವರು ಸಮಾರಂಭದ ಅಧ್ಯಕ್ಷತೆಯನ್ನು ಕಡಬ ರೇಂಜ್ ಎಸ್‌ಜೆಎಂ ಅಧ್ಯಕ್ಷರಾದ ಕೆ.ಎಂ ಇಲ್ಯಾಸ್ ಮದನಿ ವಹಿಸಲಿದ್ದು, ಕೇಂದ್ರ ಜುಮ್ಮಾ ಮಸೀದಿಯ ಖತೀಬರಾದ ಅಸ್ಸಯ್ಯದ್ ಇಸ್ಮಾಯಿಲ್ ಸಅದಿ ಅಲ್ ಅಹ್‌ದಲ್ ದುಃವಾಶೀರ್ವಚನ ನೀಡಲಿದ್ದಾರೆ. ಕಾರ‍್ಯಕ್ರಮದ ಉದ್ಘಾಟನೆಯನ್ನು ಮರ್ದಾಳ ಜುಮ್ಮಾ ಮಸೀದಿಯ ಖತೀಬರಾದ ಮಲ್ಲಿ ಅಬ್ದುಲ್ ಮಜೀದ್ ಸಖಾಫಿ ನೆರವೇರಿಸಲಿದ್ದು ಮಿತ್ತೂರು ಕೆ.ಜಿ.ಎನ್ ಮುದರಿಸ್ ಶೆರೀಫ್ ಸಅದಿ ಕಿಲ್ಲೂರು ಪ್ರಭಾಷಣಗೈಯಲಿದ್ದಾರೆ. ಸಮಾರಂಭದಲ್ಲಿ ಮರ್ದಾಳ ಕೆ.ಎಸ್ ಅಬ್ದುಲ್ ಹಮೀದ್ ತಂಗಳ್, ಕೇಂದ್ರ ಜುಮ್ಮಾ ಮಸೀದಿಯ ಮಾಜಿ ಅಧ್ಯಕ್ಷ ಹಾಜಿ ಸಯ್ಯದ್ ಮೀರಾ ಸಾಹೇಬ್, ಕೇಂದ್ರ ಜುಮ್ಮಾ ಮಸೀದಿಯ ಅಧ್ಯಕ್ಷ ಮಹಮ್ಮದ್ ಶರೀಫ್ ಅಡ್ಡಗದ್ದೆ, ಮರ್ದಾಳ ಜುಮ್ಮಾ ಮಸೀದಿಯ ಅಧ್ಯಕ್ಷ ಹಾಜಿ ಅಬ್ದುಲ್ ರಹ್‌ಮಾನ್, ಕೋಡಿಂಬಾಳ ಜಮಾಅತ್‌ನ ಅಧ್ಯಕ್ಷ ಅಬ್ದುಲ್ ಹಮೀದ್ ಮಾಸ್ಟರ್, ಕಾರ‍್ಯದರ್ಶಿ ಕಡಬ ಗ್ರಾ.ಪಂ.ಸದಸ್ಯ ಫಝಲ್, ಕಲ್ಲಾಜೆ ಜುಮ್ಮಾ ಮಸೀದಿಯ ಅಧ್ಯಕ್ಷ ಮೊಯಿದೀನ್, ಪಾಲೆತ್ತಡ್ಕ ಟಿಐ ಮದ್ರಸ ಅಧ್ಯಕ್ಷ ಅಬ್ದುಲ್ಲ ಕುಂಞಿ, ಕಾರ‍್ಯದರ್ಶಿ ಮಹಮ್ಮದ್ ಶೆರೀಫ್, ಕೊಡೆಂಕಿರಿ ಎಚ್‌ಐ ಮದ್ರಸ ಅಧ್ಯಕ್ಷ ಅಬೂಬಕ್ಕರ್, ಕಾರ‍್ಯದರ್ಶಿ ಯಾಕೂಬ್, ಕಲ್ಲುಗುಡ್ಡೆ ನೂರುಲ್ ಹುದಾ ಮಸ್ಜಿದ್ ಮದ್ರಸ ಅಧ್ಯಕ್ಷ ಖಾದರ್ ಸಾಹೇಬ್ ಕಲ್ಲುಗುಡ್ಡೆ, ಕಾರ‍್ಯದರ್ಶಿ ತ್ವಾಹೀರ್ ಸಾಹೇಬ್ ಭಾಗವಹಿಸಲಿದ್ದು ಕಡಬ ರೇಂಜ್ ಎಸ್‌ಜೆಎಂ ಕಾರ‍್ಯದರ್ಶಿ ಮುಸ್ತಫಾ ಸಅದಿ ಸ್ವಾಗತಿಸಲಿದ್ದು, ಕೋಡಿಂಬಾಳ ರಹ್‌ಮಾನೀಯ ಜುಮ್ಮಾ ಮಸೀದಿಯ ಖತೀಬರಾದ ಶಿರಾಜುದ್ದೀನ್ ಮದನಿ ಧನ್ಯವಾದ ಸಮರ್ಪಿಸಲಿದ್ದಾರೆ ಎಂದು ಕೇಂದ್ರ ಜುಮ್ಮಾ ಮಸೀದಿಯ ಪ್ರಧಾನ ಕಾರ‍್ಯದರ್ಶಿ ಮಹಮ್ಮದ್ ಫೈಝಲ್ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.