Breaking News

ಮಂಗಳೂರು ಮುಡಿಪು ಬಳಿಯಲ್ಲಿ ಆಕ್ಟೀವಾ ಸ್ಕಿಡ್ ಶಾಂತಿನಗರದ ಯೋಗೀಂದ್ರ ಮೃತ್ಯು-ಕೊಣಾಜೆ ಠಾಣೆಯಲ್ಲಿ ಕೇಸ್ ದಾಖಲು

Puttur_Advt_NewsUnder_1
Puttur_Advt_NewsUnder_1

113ಪುತ್ತೂರು: ಮೂಲತಃ ಕೊಡಗು ಜಿಲ್ಲೆಯ ಸೋಮವಾರಪೇಟೆಯವರಾಗಿದ್ದು ಕೋಡಿಂಬಾಡಿಯ ಶಾಂತಿನಗರದಲ್ಲಿರುವ ತನ್ನ ಅಜ್ಜಿ ಮನೆಯಲ್ಲಿ ವಾಸವಿದ್ದ ಯುವಕನೋರ್ವ ಮಂಗಳೂರಿನ ಮುಡಿಪು ಬಳಿ ನಡೆದ ಅಪಘಾತದಲ್ಲಿ ಮೃತಪಟ್ಟ ಘಟನೆ ನಡೆದಿದೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಕೇಸ್ ದಾಖಲಾಗಿದೆ.

ಘಟನೆಯ ವಿವರ: ಕೊಡಗು ಜಿಲ್ಲೆಯ ಸೋಮವಾರಪೇಟೆ ಸರ್ಕಳ್ಳಿಬಾನೆಯ ನಿವಾಸಿಗಳಾದ ನಾಗರಾಜ ಗೌಡ ಮತ್ತು ರತ್ನಮ್ಮ ದಂಪತಿಯ ಏಕೈಕ ಪುತ್ರರಾಗಿದ್ದು ಕೋಡಿಂಬಾಡಿಯ ಶಾಂತಿನಗರದಲ್ಲಿರುವ ತನ್ನ ಅಜ್ಜಿ ಚೆನ್ನಮ್ಮರವರ ಮನೆಯಲ್ಲಿದ್ದು ಇಲ್ಲಿಯೇ ವಿದ್ಯಾಭ್ಯಾಸ ಪಡೆದಿದ್ದ ಯೋಗೀಂದ್ರ.ಎನ್(೨೦ವ)ರವರು ಮೃತಪಟ್ಟವರು. ನೆಕ್ಕಿಲಾಡಿ ಗ್ರಾಮದ ಶಾಂತಿನಗರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಬೆಳ್ಳಿಪ್ಪಾಡಿ ಗ್ರಾಮದ ಶಾಂತಿನಗರ ಸರಕಾರಿ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ ಹಾಗೂ ಸೋಮವಾರಪೇಟೆಯಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದ ಯೋಗೀಂದ್ರರವರು ಮಂಗಳೂರು ಮುಡಿಪು ಬಳಿಯಲ್ಲಿರುವ ಕೂಲ್‌ಡ್ರಿಂಕ್ಸ್ ಫ್ಯಾಕ್ಟರಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಯೋಗೀಂದ್ರರವರು ಫ್ಯಾಕ್ಟರಿಯ ಮಾಲಕ ಕೆ.ಪಿ. ಅಶ್ರಫ್ ಎಂಬವರ ಜತೆ ಆಕ್ಟೀವಾದಲ್ಲಿ ಹಿಂಬದಿ ಸವಾರನಾಗಿ ಹೋಗುತ್ತಿದ್ದ ವೇಳೆ ಮುಡಿಪಿನಿಂದ ೨ ಕಿಲೋ ಮೀಟರ್ ದೂರದಲ್ಲಿ ಆಕ್ಟೀವಾ ಸ್ಕಿಡ್ ಆಗಿ ಬಿದ್ದು ಯೋಗೀಂದ್ರರವರ ತಲೆಗೆ ಕಲ್ಲು ಬಡಿದಿದ್ದರಿಂದ ಅವರು ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅವರು ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮಂಗಳೂರು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ಮೃತದೇಹವನ್ನು ಸೋಮವಾರಪೇಟೆಗೆ ಕೊಂಡು ಹೋಗಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. `ಆಕ್ಟೀವಾದಲ್ಲಿ ಯೋಗೀಂದ್ರ ಹಾಗೂ ತಾನು ಜತೆಯಾಗಿ ಹೋಗುತ್ತಿದ್ದ ವೇಳೆ ಆಕ್ಟೀವಾ ಸ್ಕಿಡ್ ಆಗಿದ್ದು ಈ ವೇಳೆ ಯೋಗೀಂದ್ರರವರ ತಲೆಗೆ ರಸ್ತೆ ಬದಿಯಲ್ಲಿದ್ದ ಕಲ್ಲು ಬಿಡಿದು ಅವರು ಗಂಭೀರ ಗಾಯಗೊಂಡಿದ್ದರು, ಯೋಗೀಂದ್ರರವರ ಸಂಬಂಧಿಕರಾಗಿದ್ದು ತರಕಾರಿ ವ್ಯಾಪಾರ ನಡೆಸುತ್ತಿರುವ ಶಾಂತಿನಗರದ ಪರಮೇಶ್ವರ ಗೌಡರವರು ತನ್ನ ವ್ಯಾಪಾರ ಮುಗಿಸಿ ಮಂಗಳೂರಿನಿಂದ ಮುಡಿಪು ರಸ್ತೆಯಲ್ಲಿ ಬರುತ್ತಿದ್ದ ವೇಳೆ ಜನ ಗುಂಪು ಸೇರಿರುವುದನ್ನು ಕಂಡು ತನ್ನ ವಾಹನ ನಿಲ್ಲಿಸಿದಾಗ ಅಪಘಾತದಲ್ಲಿ ಗಾಯಗೊಂಡು ಜೀವನ್ಮರಣ ಸ್ಥಿತಿಯಲ್ಲಿರುವುದು ತನ್ನ ಸಂಬಂಧಿಕ ಎಂದು ಗುರುತು ಹಿಡಿದು ಕೂಡಲೇ ಯೋಗೀಂದ್ರರವರನ್ನು ಆಸ್ಪತ್ರೆಗೆ ಕೊಂಡಯೊಯ್ಯುವ ಪ್ರಯತ್ನ ನಡೆಸಿದರಾದರೂ ದಾರಿ ಮಧ್ಯದಲ್ಲಿ ಯೋಗೀಂದ್ರರವರು ಮೃತಪಟ್ಟಿದ್ದಾರೆ’ ಎಂದು ಕಂಪೆನಿಯ ಮಾಲಕ ಅಶ್ರಫ್ ನೀಡಿದ ದೂರಿನಂತೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.