Breaking News

ಗೋಳಿತೊಟ್ಟು: ಕೊಲೆಯತ್ನ ಪ್ರಕರಣ – ಮೂವರು ಆರೋಪಿಗಳಿಗೆ ಹೈಕೋರ್ಟ್ ಜಾಮೀನು

Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಎರಡು ತಿಂಗಳ ಹಿಂದೆ ಗೋಳಿತೊಟ್ಟು ಸಮೀಪ ನಡೆದಿದ್ದ ಹಲ್ಲೆ, ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದ ಮೂವರು ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿ ಹೈಕೋರ್ಟ್ ಆದೇಶಿಸಿದೆ.

ನ.13ರಂದು ಮಡಿಕೇರಿಯಲ್ಲಿ ಟಿಪ್ಪು ಸುಲ್ತಾನ್ ಜನ್ಮ ದಿನಾಚರಣೆ ಸಂದರ್ಭ ನಡೆದ ಗಲಭೆ ಹಿನ್ನಲೆಯಲ್ಲಿ ಹಿಂದು ಸಂಘಟನೆಗಳು ಕರೆ ನೀಡಿದ್ದ ಬಂದ್ ಸಂದರ್ಭದಲ್ಲಿ ಘಟನೆ ನಡೆದಿತ್ತು.ಉಪ್ಪಿನಂಗಡಿ ಮುಸಫ್‌ರವರ ಮಾಲೀಕತ್ವದ ಜಿನಸು ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಗೋಳಿತೊಟ್ಟು ಮರ್ಲಾಪು ಮಹಮ್ಮದ್ ಅಶ್ರಫ್‌ರವರು ಶುಕ್ರವಾರದ ಪ್ರಾರ್ಥನೆಗಾಗಿ ಕೋಲ್ಪೆ ಜುಮಾ ಮಸೀದಿಗೆ ತನ್ನ ಅಣ್ಣನ ಮೋಟಾರ್ ಸೈಕಲ್‌ನಲ್ಲಿ, ಕುಟುಂಬದಲ್ಲಿ ಅಳಿಯನಾಗುವ ಮಹಮ್ಮದ್ ಹಾರೀಸ್ ಎಂಬಾತನನ್ನು ಕುಳ್ಳಿರಿಸಿಕೊಂಡು ಹೋಗಿದ್ದರು.ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಬರುತ್ತಿದ್ದಾಗ ಗೋಳಿತೊಟ್ಟು ಶಾಲೆಯ ಮುಂಭಾಗ ಅನಿಲ ರಸ್ತೆ ಕಡೆಗೆ ತಿರುಗುವಲ್ಲಿ ನಾಲ್ಕು ಮೋಟಾರು ಸೈಕಲ್ಲುಗಳಲ್ಲಿ ಮತ್ತು ಒಮ್ನಿಯಲ್ಲಿ ಬಂದ ತಂಡದಲ್ಲಿದ್ದವರು ಮಹಮ್ಮದ್ ಹಾರೀಸ್ ಅವರಿಗೆ ತಲವಾರ್‌ನಿಂದ ಕಡಿದು ಕೊಲೆಗೆ ಯತ್ನಿಸಿದ್ದರು ಎಂದು ಆರೋಪಿಸಲಾಗಿತ್ತು.ಮಹಮ್ಮದ್ ಅಶ್ರಫ್ ಅವರ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿರುವ ಕಿರಣ್ ಯಾನೆ ಕಿರಣ್ ಶಿಶಿಲ, ಸಂತೋಷ್ ಅರಸಿನಮಕ್ಕಿ ಮತ್ತು ರೂಪೇಶ್ ಶಿಶಿಲ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪುತ್ತೂರು ಐದನೇ ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದ್ದರಿಂದ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.ಇದೀಗ ಹೈಕೋರ್ಟ್ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿ ಆದೇಶಿಸಿದೆ.ಆರೋಪಿಗಳ ಪರ ವಕೀಲ ಅರುಣ್‌ಶ್ಯಾಂ ವಾದಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.