Breaking News

ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವರಿಗೆ ನಿರಂಜನ ಪ್ರಶಸ್ತಿ

Puttur_Advt_NewsUnder_1
Puttur_Advt_NewsUnder_1

Yeryaಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ಡಾ.ಶಿವರಾಮ ಕಾರಂತ ಅಧ್ಯಯನ ಕೇಂದ್ರ ಹಾಗೂ ಕನ್ನಡ ಸಂಘದ ಆಶ್ರಯದಲ್ಲಿ ಕೊಡಮಾಡುವ ಪ್ರತಿಷ್ಟಿತ ನಿರಂಜನ ಪ್ರಶಸ್ತಿಗೆ ಪ್ರಸ್ತುತ ವರ್ಷದಲ್ಲಿ ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರಧಾನ ಸಮಾರಂಭ ಫೆ.2ರಂದು ಕಾಲೇಜಿನಲ್ಲಿ ನಡೆಯಲಿದೆ.

ಏರ್ಯ ಲಕ್ಷ್ಮೀನಾರಾಯಣ ಆಳ್ವರು ಬಂಟ್ವಾಳ ತಾಲೂಕಿನ ಮೊಡಂಕಾಪಿನ ಸಾಕೇತ ಮನೆಯವರು. ಅವರು ಹುಟ್ಟಿದ್ದು 19-03-1926 ಏರ್ಯ ಬೀಡು ಮನೆಯಲ್ಲಿ. ತಂದೆ ಮಾವಂತೂರು ಸುಬ್ಬಯ್ಯ ಆಳ್ವ, ತಾಯಿ ಏರ್ಯಬೀಡು ಸೋಮಕ್ಕೆ ಆಳ್ವ. ವೃತ್ತಿ ಕೃಷಿಕ. ಆಸಕ್ತಿ ಓದು ಮತ್ತು ಪ್ರವಾಸ.  ರಾಮಾಶ್ವಮೇಧದ ರಸತರಂಗಗಳು, ಸ್ನೇಹಸೇತು, ಮುಳಿಯ ತಿಮ್ಮಪ್ಪಯ್ಯ, ನಾಗೇಗೌಡರ ಸ್ವಾಗತ ಗೀತೆ, ಪತ್ರಗಳು ಚಿತ್ರಿಸಿದ ಸೇಡಿಯಾಪು, ಮೊದಲ ಮಳೆ, ಸಂಚಯ, ಓರಗೆಗೆ ಒಲವಿನ ಒಸಗೆ  ಇವರ ಪ್ರಕಟಿತ ಪುಸ್ತಕಗಳು. “ಏರ್ಯ” ಅಭಿನಂದನಾ ಗ್ರಂಥ.  ಸಾಮಾಜಿಕ, ಸಾಹಿತ್ಯಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಇವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಜಾನಪದ, ನಾಟಕ, ಪ್ರವಾಸ, ಸಂಘಟನೆ, ಸಿನಿಮಾ ಇವರ ನೆಚ್ಚಿನ ಕ್ಷೇತ್ರಗಳು. 2006ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು, ಮಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಹೀಗೆ ಹಲವು ಸಂಘಸಂಸ್ಥೆಗಳು ನೀಡುವ ಪ್ರಶಸ್ತಿ ಮತ್ತು ಸನ್ಮಾನವನ್ನು ಪಡೆದುಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.