ಕೆಯ್ಯೂರು: ಜಯಕರ್ನಾಟಕ ಜಿಲ್ಲಾ ಉಪಾಧ್ಯಕ್ಷ ಭಾಗ್ಯೇಶ್ ರೈಯವರ ನಿವಾಸದಲ್ಲಿ ಸತ್ಯನಾರಾಯಣ ಪೂಜೆ, ಮುತ್ತಪ್ಪ ರೈ ಭಾಗಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಜಯಕರ್ನಾಟಕ ಸಂಘಟನೆಯ ರಾಮನಗರ ಜಿಲ್ಲಾ ಉಪಾಧ್ಯಕ್ಷರಾಗಿರುವ ಭಾಗ್ಯೇಶ್ ರೈಯವರ ಕೆಯ್ಯೂರು ನಿವಾಸದಲ್ಲಿ ಶ್ರೀ ಲಕ್ಷ್ಮೀನಾರಾಯಣ ಹೃದಯ ಹವನ ಮತ್ತು ಶ್ರೀ ಸತ್ಯನಾರಾಯಣ ಪೂಜೆ ಜ.22 ರಂದು ನಡೆಯಿತು. ವೇದಮೂರ್ತಿ ಕೆ.ರವಿರಾಮ ಭಟ್‌ರವರ ನೇತೃತ್ವದಲ್ಲಿ ಬೆಳಿಗ್ಗೆ ಶ್ರೀ ಮಹಾಗಣಪತಿ ಹವನ, ನವಗ್ರಹಶಾಂತಿ, ಲಕ್ಷ್ಮೀನಾರಾಯಣ ಹೃದಯ ಹವನ ನಡೆದು ಬಳಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಎನ್.ಮುತ್ತಪ್ಪ ರೈ ಆಗಮಿಸಿ ಪೂಜಾ ಕಾರ‍್ಯಕ್ರಮದಲ್ಲಿ ಪಾಲ್ಗೊಂಡರು. ಇವರೊಂದಿಗೆ ಪ್ರಜಾ ಟಿವಿಯ ನಿರ್ದೇಶಕ ಗುಣರಂಜನ್ ಶೆಟ್ಟಿ, ಸಂಘಟನೆಯ ರಾಜ್ಯ ಸಲಹೆಗಾರ ಪ್ರವೀಣ್ ಶೆಟ್ಟಿ, ರಾಜ್ಯ ಯುವ ಘಟಕದ ಅಧ್ಯಕ್ಷ ಕೆ.ಎನ್.ಜಗದೀಶ್ ಆಗಮಿಸಿದ್ದರು. ಈ ಸಂದರ್ಭದಲ್ಲಿ ಕೆಯ್ಯೂರು ಗ್ರಾ.ಪಂ ಸದಸ್ಯ ಎ.ಕೆ ಜಯರಾಮ ರೈ, ಶ್ರೀ ದುರ್ಗಾ ಯುವಕ ಮಂಡಲದ ಅಧ್ಯಕ್ಷ ಶರತ್ ಕುಮಾರ್ ಮಾಡಾವು, ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಸತೀಶ್ ರೈ ದೇವಿನಗರ, ವಿಠಲ ರೈ ಕಣಿಯಾರು, ಜಯರಾಮ ರೈ ಕಡಮಾಜೆ, ದಿನೇಶ್ ಕೆ.ಎಸ್, ಭಾಗ್ಯೇಶ್ ರೈಯವರ ತಂದೆ ಎ.ಕೆ ತಿಮ್ಮಪ್ಪ ರೈ, ತಾಯಿ ರತ್ನಾವತಿ ರೈ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.

df378fac-c8d8-4ec3-97f6-c5e14f1ff3ea

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.