Breaking News

ನಿಡ್ಪಳ್ಳಿ: ಸೋಲಾರ್ ವಿದ್ಯುತ್ ಮತ್ತು ನೀರು ಶುದ್ಧೀಕರಣ ಮಾಹಿತಿ ಕಾರ್ಯಕ್ರಮ 

Puttur_Advt_NewsUnder_1
Puttur_Advt_NewsUnder_1
IMG_20160123_121915
ನಿಡ್ಪಳ್ಳಿ: ಮಂಗಳೂರು ವಿದ್ಯುಚ್ಚಕ್ತಿ ಸರಬರಾಜು ಕಂಪೆನಿ ನಿಯಮಿತವು ಗ್ರಾಹಕರಿಗೆ ನಿವ್ವಳ ಮಾಪನ ಆಧಾರದ ಅಡಿಯಲ್ಲಿ ಗ್ರಿಡ್ ಸಂಪರ್ಕ ಹೊಂದಿದ ಸೌರಶಕ್ತಿ ಮೆಲ್ಚಾವಣಿ ಘಟಕಗಳನ್ನು ಅಳವಡಿಸಲು ಅವಕಾಶ ನೀಡಿದ ಬಗ್ಗೆ ಮಾಹಿತಿ ಕಾರ್ಯಕ್ರಮವು ಪುತ್ತೂರು ಮಣಿಲಾ ಕನ್ ಸ್ಡ್ರಕ್ಷನ್ ಹಾಗೂ ಅಗ್ರೊ ಸೇಲ್ಸ್ ನ ಮೂಲಕ ಮಹಾದೆವ ಶಾಸ್ತ್ರಿಯವರ ನಿಡ್ಪಳ್ಳಿಯಲ್ಲಿರುವ ಕೃಷಿ ಕ್ಷೇತ್ರದಲ್ಲಿ ಜ.23ರಂದು ನಡೆಯಿತು.
ಸೋಲಾರ್ ವಿದ್ಯುತ್ ಉತ್ಪಾದಿಸುವ ಬಗ್ಗೆ ಹಾಗೂ ಗ್ರೀಡ್ ಅಳವಡಿಸುವ ಬಗ್ಗೆ ಮಹಾದೇವ ಶಾಸ್ತ್ರಿಯವರು ಮಾಹಿತಿ ನೀಡಿದರು.

ಕಲುಷಿತಗೊಂಡ ಬೋರ್ ವೆಲ್ ನ ನೀರನ್ನು ಶುದ್ಧೀಕರಿಸುವ ಫಿಲ್ಟರ್ ಅಳವಡಿಸಿ, ಕುಡಿಯಲು ಉಪಯೋಗಿಸುವ ಬಗ್ಗೆ ಹಾಗೂ ರಾಸಾಯನಿಕ  ರಹಿತ ಪೌಡರ್ ಬಳಸುವ ಬಗ್ಗೆ ಬೆಂಗಳೂರಿನ ಸುರಕ್ಷ ಗ್ರೀನ್ ಟೆಕ್ ಸೆಲ್ಯೂಷನ್ ನ ಜಯರಾಮ ಭಟ್ ಹರ್ತ್ಯಡ್ಕ ರೈತರಿಗೆ ಮಾಹಿತಿ ನೀಡಿದರು. ಜಿಲ್ಲಾ ಸಮೃದ್ಧಿ ಗಿಡ ಗೆಳೆತನ ಸಂಘದ ಸಭೆ ನಡೆಸಿ ಬರಡು ಭೂಮಿಯಲ್ಲಿ ಸಮೃದ್ಧ ಕೃಷಿ ಬೆಳೆಯುವ ಬಗ್ಗೆಯೂ ರೈತರಿಗೆ ಮಾಹಿತಿ ನೀಡಲಾಯಿತು.

IMG_20160123_121940

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.