ನೆಟ್ಟಣ: ರೈಲು ನಿಲ್ದಾಣಕ್ಕೆ ಉನ್ನತ ರೈಲ್ವೆ ಅಧಿಕಾರಿಗಳ ಭೇಟಿ. ಮೂಲ ಸೌಕರ್ಯ ಕುರಿತು ಪರಿಶೀಲನೆ

Puttur_Advt_NewsUnder_1
Puttur_Advt_NewsUnder_1

nettanaಪಾರ್ಕಿಂಗ್ ಅವ್ಯವಸ್ಥೆ ಚಾಲಕರಿಂದ ಅಧಿಕಾರಿಗಳಿಗೆ ದೂರು-ಶೀಘ್ರ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ, ಹೊಂದಾಣಿಕೆಯಿಂದ ಇರುವಂತೆ ಚಾಲಕರಿಗೆ ಅಧಿಕಾರಿಗಳ ಸೂಚನೆ
ಚಿತ್ರ: ಆಕಾಶ್ ನೆಟ್ಟಣ
ಕಡಬ: ದಕ್ಷಿಣ ನೈರುತ್ಯ ವಲಯ ರೈಲ್ವೆ ಜನರಲ್ ಮೆನೇಜರ್ ಪ್ರದೀಪ್‌ಕುಮಾರ್ ಸಕ್ಷನಾ  ಅವರು ನೆಟ್ಟಣ ಸುಬ್ರಹ್ಮಣ್ಯ  ರೋಡ್ ರೈಲ್ವೆ ಕ್ರಾಸಿಂಗ್ ರೈಲ್ವೆ ನಿಲ್ದಾಣಕ್ಕೆ ಜ.23 ರಂದು ಭೇಟಿ ನೀಡಿದರು. ರೈಲು ಯಾನದ ಮೂಲಕ ಮಂಗಳೂರಿಗೆ ತೆರಳಿದ್ದ  ಅವರು ದಾರಿ ಮಧ್ಯೆ ನೆಟ್ಟಣ ರೈಲ್ವೆ ನಿಲ್ದಾಣದಲ್ಲಿ ಸ್ವಲ್ಪ ಹೊತ್ತು ಅಲ್ಲಿಯ ಸ್ಥಿತಿಗತಿಗಳ ಬಗ್ಗೆ ಪರಿಶೀಲಿಸಿದರು.
ಭೇಟಿ ಸಂದರ್ಭ ಅವರ ಜತೆಗಿದ್ದ ಮೈಸೂರು ರೈಲ್ವೆ ವಿಭಾಗ ವ್ಯವಸ್ಥಾಪಕ ಅಶೋಕಲಾಲ್  ಪತ್ರಕರ್ತರ ಜತೆ ಮಾತನಾಡಿ, ಮಂಗಳೂರು -ಬೆಂಗಳೂರು ನಡುವೆ ಹೆಚ್ಚುವರಿ ರೈಲ್ವೆ ಓಡಾಟ ವಿಚಾರವಾಗಿ ಸಾರ್ವಜನಿಕ ಹಿತಾಶಕ್ತಿ ಅರ್ಜಿ ನ್ಯಾಯಾಲಯದ ಹಂತದಲ್ಲಿದೆ ಎಂದು ಹೇಳಿ ಈ ಬಗ್ಗೆ  ಹೆಚ್ಚು ಮಾತನಾಡಲು ನಿರಾಕರಿಸಿದರು. ರೈಲ್ವೆ ನಿಲ್ದಾಣದ ಕುಂದುಕೊರತೆಗಳ ಬಗ್ಗೆ  ಮಲೆನಾಡು ಹಿತಾರಕ್ಷಣಾ ವೇದಿಕೆ ಬಿಳಿನೆಲೆ ಗ್ರಾಮ ಸಮಿತಿಯು  ರೈಲ್ವೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿತು. ಇದಕ್ಕೆ ಉತ್ತರಿಸಿದ  ರೈಲ್ವೆಯ ಮೈಸೂರು ವಿಭಾಗೀಯ ವಾಣಿಜ್ಯ ಪ್ರಬಂಧಕ ಡಿ.ಸಿ ಹಾಲಪ್ಪ ನೆಟ್ಟಣ-ಸುಬ್ರಹ್ಮಣ್ಯ ರಸ್ತೆಗೆ ಕಾಂಕ್ರೀಟಿಕರಣ ಕೆಲಸ ನಡೆಸಲು ಟೆಂಡರ್ ಪ್ರಕ್ರೀಯೆ ಮುಗಿದು ಕಾಮಗಾರಿ ಪ್ರಗತಿಯಲ್ಲಿದೆ. ನಿಲ್ದಾಣದಲ್ಲಿ ಕಸ ಸಂಗ್ರಹ ತೊಟ್ಟಿಗಳನ್ನು ಪ್ಲಾಟ್ ಪಾರಂನಲ್ಲಿ ಈಗಾಗಲೇ ಪೂರೈಸಲಾಗಿದೆ. ಶೌಚಾಲಯಗಳ ನಿರ್ವಹಣೆ ಗುತ್ತಿಗೆದಾರರಿಂದ ದಿನನಿತ್ಯದ ಪಾಳಿಯಲ್ಲಿ ನಿರ್ವಹಿಸಲಾಗುತ್ತಿದೆ. ಹೆಚ್ಚುವರಿ ಕಸದ ತೊಟ್ಟಿಯ ಅವಶ್ಯಕತೆ ಇದ್ದಲ್ಲಿ ಬೇಡಿಕೆಗಳಿಗೆ ಅನುಗುಣವಾಗಿ ಒದಗಿಸಲಾಗುವುದು ಎಂದರು. ಪ್ರಯಾಣಿಕರ ಅನುಕೂಲ ಮತ್ತು ಹಿತದೃಷ್ಟಿಯಿಂದ ಸುಬ್ರಹ್ಮಣ್ಯ ರೈಲ್ವೆ ಸ್ಟೇಶನ್‌ನ ಪ್ಲಾಟ್ ಫಾರಂ ಸಂಖ್ಯೆ 1 ರಲ್ಲಿ ಪಾವತಿಸಿ ಉಪಯೋಗಿಸುವಂತಹ ಶೌಚಾಲಯದ ನಿರ್ವಹಣೆಗಾಗಿ ಗುತ್ತಿಗೆಯನ್ನು ನೀಡಲಾಗಿದೆ. ಪಾವತಿಸಿ ಬಳಸುವ ಪ್ಲಾಟ್ ಪಾರಂ ಶೌಚಾಲಯದ ಹೊರತಾಗಿ ಪ್ರಯಾಣಿಕರ ವಿಶ್ರಾಂತಿ ಗ್ರಹದ ಶೌಚಾಲಯವನ್ನು ಒದಗಿಸಲಾಗಿದೆ ಎಂದು ಹೇಳಿದರು. ಮಂಗಳೂರು-ಕಬಕ-ಪುತ್ತೂರು ನಡುವೆ ಬೆಳಗ್ಗೆ ಮತ್ತು ಸಂಜೆ ಓಡಾಡುವ ಪುತ್ತೂರಿನಲ್ಲಿ ತಂಗುವ ಪ್ಯಾಸೆಂಜರ್ ರೈಲನ್ನು ಸುಬ್ರಹ್ಮಣ್ಯ ಕ್ರಾಸಿಂಗ್ ರೋಡ್ ನಿಲ್ದಾಣ ತನಕ ವಿಸ್ತರಿಸುವಂತೆ ಸಮಿತಿಯು ಅಧಿಕಾರಿಗಳನ್ನು ಒತ್ತಾಯಿಸಿತು.
ಪಾರ್ಕಿಂಗ್ ಅವ್ಯವಸ್ಥೆ ಚಾಲಕರಿಂದ ಅಧಿಕಾರಿಗಳಿಗೆ ದೂರು
ರೈಲ್ವೆ ನಿಲ್ದಾಣದಲ್ಲಿ ಪಾರ್ಕಿಂಗ್ ಅವ್ಯವಸ್ಥೆ ಹಾಗೂ ಪ್ರಯಾಣಿಕರನ್ನು  ನಿಲ್ದಾಣಕ್ಕೆ ಕರೆತರುವ ಸಂದರ್ಭ ಖಾಸಗಿ ವಾಹನಗಳಿಗೆ  ಸಾರಿಗೆ ಬಸ್ ಅಡ್ಡ ನಿಲ್ಲಿಸಿ ತೊಂದರೆ ನೀಡುತ್ತಿರುವ ಬಗ್ಗೆ ಮತ್ತು ಅಲ್ಲಿಯ ಭದ್ರತಾ ಸಿಬಂದಿಯವರು ಚಾಲಕರನ್ನು ರೈಲ್ವೇ ನಿಲ್ದಾಣದಿಂದ ದೂರ ಓಡಿಸುತ್ತಿದ್ದಾರೆ, ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂದು  ಚಾಲಕ ಮಾಲಕರು ಅಧಿಕಾರಿಗಳ ಗಮನಕ್ಕೆ ತಂದರು. ಈ ಬಗ್ಗೆ ಮಾತನಾಡಿದ ಅಧಿಕಾರಿಗಳು ಶೀಘ್ರದಲ್ಲಿ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಆಗುತ್ತದೆ, ಅಲ್ಲಿಯವರೆಗೆ ಹೊಂದಾಣಿಕೆಯಿಂದ ಇರುವಂತೆ ಸೂಚಿಸಿದರು. ಈ ಸಂದರ್ಭ ಮಲೆನಾಡು ಹಿತಾರಕ್ಷಣಾ ವೇದಿಕೆ ಅಧ್ಯಕ್ಷ ಜೋಸೆಪ್ ಪಿ ಚೆರಿಯನ್, ಸಮಿತಿಯವರಾದ  ಬಾಲಕೃಷ್ಣ ಗೌಡ ವಾಲ್ತಾಜೆ, ತಾ.ಪಂ ಸದಸ್ಯೆ ಸರೋಜಿನಿ ಜಯಪ್ರಕಾಶ್, ರಘುಚಂದ್ರನ್, ಟೂರಿಸ್ಟ್ ಟ್ಯಾಕ್ಷಿಮೆನ್ ಸಂಘದ ಕಡಬ ವಲಯ ಕಾರ್‍ಯದರ್ಶಿ ಗಿರೀಶ್ ಕಳಿಗೆ, ಪುರುಷೋತ್ತಮ,ಚಾಲಕ ಮಾಲಕರಾದ ಯತೀಶ್, ಆಸಿಫ್, ಲತೀಪ್, ಅಲಿಯಾರ್, ನಾಗೇಶ್, ಸೇಖರ್, ತೀರ್ಥೇಶ್, ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.