ಉಪ್ಪಿನಂಗಡಿ-ಸುಬ್ರಹ್ಮಣ್ಯ ರಸ್ತೆಯ ಬಲ್ಯ ಸಮೀಪ ರಸ್ತೆ ಬದಿಯಲ್ಲಿ ದುರ್ವಾಸನೆ ಬೀರುತ್ತಿರುವ ತ್ಯಾಜ್ಯ, ಮೂಗು ಮುಚ್ಚಿಕೊಂಡು ಹೋಗುತ್ತಿರುವ ಸಾರ್ವಜನಿಕರು-ನಿರಂತರ ಮಾಂಸ ತ್ಯಾಜ್ಯ ಎಸೆತ

Puttur_Advt_NewsUnder_1
Puttur_Advt_NewsUnder_1

ಚಿತ್ರ/ವರದಿ: ವಿಜಯಕುಮಾರ್ ಕಡಬ
ಕಡಬ: ಉಪ್ಪಿನಂಗಡಿ ಸುಬ್ರಹ್ಮಣ್ಯ ರಸ್ತೆಯ ಬಲ್ಯ ಸಮೀಪ ರಸ್ತೆ ಬದಿಯಲ್ಲಿ ದುಷ್ಕರ್ಮಿಗಳು ರಾತ್ರಿ ವೇಳೆಯಲ್ಲಿ ಮಾಂಸ ಹಾಗೂ ಇತರ ತ್ಯಾಜ್ಯಗಳನ್ನು ಎಸೆಯುತ್ತಿದ್ದು ಪರಿಣಾಮ ಇಡೀ ಪರಿಸರ ದುರ್ವಾಸನೆ ಬೀರುತ್ತಿದ್ದು ಈ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಈಗಾಗಲೇ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಬಲ್ಯ-ಪದವು ಮಧ್ಯೆ ಬರುವ ಈ ನಿರ್ಜನವಾದ ಸ್ಥಳದಲ್ಲಿ ಕಳೆದ ಕೆಲವು ಸಮಯಗಳಿಂದ ಕಸದ ರಾಶಿಗಳು ಮತ್ತು ಮಾಂಸದ ತ್ಯಾಜ್ಯಗಳನ್ನು ಪ್ಲಾಸ್ಟಿಕ್ ಹಾಗೂ ಗೋಣಿ ಚೀಲದಲ್ಲಿ ತುಂಬಿಸಿ ಎಸೆಯಲಾಗುತ್ತಿದೆ, ಇದನ್ನು ನಾಯಿಗಳು ಎಳೆದುಕೊಂಡು ರಸ್ತೆಯಲ್ಲಿ ತಂದು ಹಾಕುತ್ತದೆ. ಇದರಿಂದ ವಿಪರಿತ ದುರ್ವಾಸನೆ ಬರುತ್ತಿದ್ದು ಪಾದಚಾರಿಗಳಲ್ಲದೆ ವಾಹನಗಳಲ್ಲಿ ಹೋಗುವವವರು ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ರಸ್ತೆಯಲ್ಲಿ ಶಾಲಾ ಮಕ್ಕಳು ಕೂಡ ನಡೆದುಕೊಂಡು ಹೋಗುತ್ತಿದ್ದಾರೆ.
ಈ ಬಗ್ಗೆ ಈಗಾಗಲೇ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಈ ಕೆಲಸ ರಾತ್ರಿ ವೇಳೆಯಲ್ಲಿ ನಡೆಯುತ್ತಿದೆ ಎನ್ನಲಾಗುತ್ತಿದ್ದು. ಈ ತ್ಯಾಜ್ಯದಲ್ಲಿ ಮಾಂಸದ ತ್ಯಾಜ್ಯಗಳು ಅಲ್ಲದೆ ಬಿಯರ್ ಬಾಟಲಿಗಳು, ಇನ್ನಿತರ ತ್ಯಾಜ್ಯಗಳು, ಪ್ಲಾಸ್ಟಿಕ್‌ಗಳು ಒಳಗೊಂಡಿದೆ. ಈ ಬಗ್ಗೆ ಕುಟ್ರುಪಾಡಿ ಗ್ರಾ.ಪಂ. ಹಿಂದಿನ ಗ್ರಾಮ ಸಭೆಯಲ್ಲಿ ವಿಷಯ ಪ್ರಸ್ತಾಪವಾಗಿತ್ತು. ಆದರೆ ಅಂದಿನಿಂದ ಇಂದಿನವರೆಗೆ ತ್ಯಾಜ್ಯ ಎಸೆಯುವುವರು ಮಾತ್ರ ನಿಲ್ಲಿಸಿಲ್ಲ, ಈ ಬಗ್ಗೆ ಪಂಚಾಯತ್ ಆಗಲಿ, ಸಂಬಂಧಟ್ಟವರಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುವುದು ಸಾರ್ವಜನಿಕ ಆರೋಪವಾಗಿದೆ. ಸ್ವಚ್ಚ ಭಾರತದ ಹೆಸರಿನಲ್ಲಿ ಈಗಾಗಲೇ ವಿವಿಧ ಸಂಘಸಂಸ್ಥೆಗಳಿಂದ ಸ್ವಚ್ಚತಾ ಅಭಿಯಾನ ನಡೆಯುತ್ತಿದ್ದರೂ ಇಂತಹ ತ್ಯಾಜ್ಯ ಎಸೆಯುವರ ಮನಸ್ಸು ಕೂಡ ಪರಿವರ್ತನೆಯಾಗಿಲ್ಲ ಎನ್ನುವುದು ವಿಪರ್ಯಾಸ.

ಅನಾಗರಿಕರ ವರ್ತನೆ ಖಂಡನಿಯ-ಜಾರ್ಜ್ ವರ್ಗೀಸ್ ಬಲ್ಯ

ರಸ್ತೆ ಬದಿಯಲ್ಲಿ ಮಾಂಸ ತ್ಯಾಜ್ಯ ಎಸೆಯುವವರು ಮೊದಲು ಅವರ ಮನೆಯ ಅಂಗಳದಲ್ಲಿ ಹಾಕಿಕೊಂಡರೆ ಅದರಿಂದ ಉಂಟಾಗುವ ತೊಂದರೆ ಅರ್ಥವಾಗುತ್ತದೆ. ಸಾರ್ವಜನಿಕ ಸ್ಥಳದಲ್ಲಿ ಕಸ, ತ್ಯಾಜ್ಯ ಎಸೆಯುವುದು ನಾಗರಿಕರ ವರ್ತನೆಯಲ್ಲ, ಇಂತವರನ್ನು ಪತ್ತೆ ಹಚ್ಚಿ ಸರಿಯಾದ ಶಿಕ್ಷೆ ಅವರಿಗೆ ನೀಡಬೇಕು, ಈ ಬಗ್ಗೆ ಪಂಚಾಯತ್ ಕೂಡಲೇ ಕ್ರಮ ಕೈಗೊಳ್ಳಬೇಕು, ಇದಕ್ಕೆ ಸಾರ್ವಜನಿಕರು ಬೇಕಾದರೆ ಸಹಕಾರ ನೀಡುತ್ತೇವೆ ಎಂದು ಸ್ಥಳೀಯ ಜಾರ್ಜ್ ವರ್ಗೀಸ್ ಪ್ರತಿಕ್ರಿಯೆ ನೀಡಿದ್ದಾರೆ.

ತ್ಯಾಜ್ಯ ಎಸೆಯುವವರ ವಿರುದ್ದ ಕಠಿಣ ಕ್ರಮ-ಜಾನಕಿ ಸುಂದರ

ಈ ಬಗ್ಗೆ ಕುಟ್ರುಪಾಡಿ ಗ್ರಾ.ಪಂ. ಅಧ್ಯಕ್ಷೆ ಜಾನಕಿ ಸುಂದರ ರವರು ಪ್ರತಿಕ್ರಿಯೆ ನೀಡಿ, ಮಾಂಸ ತ್ಯಾಜ್ಯದಿಂದಾಗಿ ದುರ್ವಾಸನೆ ಬರುತ್ತಿರುವ ವಿಚಾರ ತಿಳಿದಿದೆ, ರಾತ್ರಿ ವೇಳೆಯಲ್ಲಿ ಮಾಂಸ ತ್ಯಾಜ್ಯಗಳನ್ನು ಎಸೆಯುತ್ತಿರುವವರನ್ನು ಪತ್ತೆ ಹಚ್ಚಲು ಶೀಘ್ರ ಕ್ರಮ ಕೈಗೊಳ್ಳುತ್ತೇವೆ. ಅಲ್ಲದೆ ಮಾಂಸ ತ್ಯಾಜ್ಯ ಹಾಗೂ ಇತರ ತ್ಯಾಜ್ಯಗಳನ್ನು ರಸ್ತೆ ಬದಿಯಲ್ಲಿ ಎಸೆಯುತ್ತಿರುವವರು ಇನ್ನಾದರೂ ನಿಲ್ಲಿಸಬೇಕು, ಇಲ್ಲದಿದ್ದಲ್ಲಿ ಅಂತವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.

mamsa thyajya2

mamsa thyajya1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.