ಕೋಚಣ್ಣ ರೈ, ಚಿದಾನಂದ ಕಾಮತ್, ಮಧುಕರ್‌ರವರಿಗೆ ಅಣಿಲೆ ವೆಂಕಪ್ಪ ರೈ ಪ್ರಶಸ್ತಿ ಪ್ರದಾನ

Puttur_Advt_NewsUnder_1
Puttur_Advt_NewsUnder_1

anile awrd

ಭವಿಷ್ಯತ್ ಕಾಲದಲ್ಲಿ ಬೆಳಕು ಚೆಲ್ಲುವ ಕೆಲಸ- ಕಟೀಲ್

ಪುತ್ತೂರು: ಸಮಾಜದಲ್ಲಿ ಶ್ರೇಷ್ಠ ಸಾಧನೆ ಮಾಡಿದ ಹಿರಿಯರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುವ ಮೂಲಕ ಭವಿಷ್ಯತ್ ಕಾಲದಲ್ಲಿ ಬೆಳಕು ಚೆಲ್ಲುವ ಕಾರ್ಯ ರಾಯಲ್ ಟ್ರಸ್ಟ್ ಹಾಗೂ ಪಿ.ಬಿ ರೈ ಪ್ರತಿಷ್ಠಾನದ ಮೂಲಕ ನಡೆಯುತ್ತಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಇಲ್ಲಿನ ರೋಟರಿ ಜಿ.ಎಲ್.ಸಭಾಭವನದಲ್ಲಿ ಜ.24ರಂದು ನಡೆದ ರೋಯಲ್ ಟ್ರಸ್ಟ್ ಹಾಗೂ ಕೆಯ್ಯೂರು ನೂಜಿ ಡಾ.ಪಿ.ಬಿ.ರೈ ಪ್ರತಿಷ್ಠಾನದ ವತಿಯಿಂದ ಪ್ರತಿ ವರ್ಷ ಕೊಡಮಾಡುವ ಅಣಿಲೆ ವೆಂಕಪ್ಪ ರೈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಬೆಳಕಿನಿಂದ ಕತ್ತಲಿನೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ ಸಾಗುವಂತ ಎರಡು ವರ್ಗಗಳು ಸಮಾಜದಲ್ಲಿವೆ. ಅದರಲ್ಲಿ ಪಿ.ಬಿ ರೈ ಪ್ರತಿಷ್ಠಾನವು ಹಿರಿಯರನ್ನು ಗುರುತಿಸುವ ಮೂಲಕ ಸಮಾಜವನ್ನು ಕತ್ತಲಿನಿಂದ ಬೆಳಕಿನೆಡೆಗೆ ಸಾಗುವಂತೆ ಮಾಡಿದೆ ಎಂದರು. ದಕ್ಷ ಆಡಳಿತ ಮೂಲಕ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದ ಕೋಚಣ್ಣ ರೈ, ಕತ್ತಲಿನಲ್ಲಿದ್ದ ನೂರಾರು ಬಾಲ ಪ್ರತಿಭೆಗಳಿಗೆ ವೇದಿಕೆ ಒದಗಿಸಿ ಸ್ಪೂರ್ತಿ ನೀಡಿದ ಚಿದಾನಂದ ಕಾಮತ್ ಕಾಸರಗೋಡು ಹಾಗೂ ಯುವ ಜನಾಂಗಕ್ಕೆ ಉದ್ಯಮ ಶೀಲತೆಯ ಬಗ್ಗೆ ಪ್ರೇರಣೆ ನೀಡಿದ ಮಧುಕರ್‌ರವರನ್ನು ಗುರುತಿಸಿ ಗೌರವಿಸಿರುವ ಮೂಲಕ ಶತಮಾನದ ಪೀಳಿಗೆಗೆ ಮಾರ್ಗದರ್ಶನ ನೀಡುವ ಕೆಲಸ ಪ್ರತಿಷ್ಠಾನದಿಂದ ನಡೆದಿದೆ ಎಂದು ಸಂಸದರು ಹೇಳಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ, ಹಿರಿಯ ಸಾಮಾಜಿಕ ಕಾರ್ಯಕರ್ತ ಕೆಯ್ಯೂರು ನಾರಾಯಣ ಭಟ್ ಮಾತನಾಡಿ, ತ್ಯಾಗಕ್ಕೆ ಇರುವಷ್ಟು ಬೆಲೆ ಮನುಷ್ಯ ಜೀವನದಲ್ಲಿ ಬೇರೆ ಯಾವುದಕ್ಕೂ ಇಲ್ಲ. ನಮ್ಮ ಸಮಾಜ ಒಂದು ಕುಟುಂಬದಂತೆ ಭಾವಿಸಿ ಮಾನವ ಧರ್ಮವನ್ನು ಅನುಸರಿಸಿ ಕೊಂಡು ಕೊಳ್ಳುವಿಕೆಯಲ್ಲಿ ನಿಸ್ವಾರ್ಥ ಸೇವೆ ಮಾಡಿದಲ್ಲಿ ಒಂದು ಒಳ್ಳೆಯ ಸಮಾಜ ನಿರ್ಮಾಣವಾಗಲು ಸಾಧ್ಯ. ಇದನ್ನು ಪಿ.ಬಿ.ಪ್ರತಿಷ್ಠಾನದ ದಂಬೆಕಾನ ಸದಾಶಿವ ರೈಗಳು ಮಾಡಿದ್ದಾರೆ ಎಂದರು. ರೋಯಲ್ ಟ್ರಸ್ಟ್‌ನ ಗೌರವಾಧ್ಯಕ್ಷ ದಂಬೆಕಾನ ಸದಾಶಿವ ರೈ ಅಧ್ಯಕ್ಷತೆ ವಹಿಸಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿದೇಶಕ ಸೀತಾರಾಮ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಶಸ್ತಿ ಪ್ರದಾನ, ಗೌರಾರ್ಪಣೆ
ನಿವೃತ್ತ ತಹಶೀಲ್ದಾರ್ ಕೋಚಣ್ಣ ರೈ ದಂಪತಿ, ರಂಗಕಲಾವಿದ ಚಿದಾನಂದ ಕಾಮತ್ ಕಾಸರಗೋಡು ದಂಪತಿ ಹಾಗೂ ಮಧುಕರ್‌ರವರಿಗೆ ಅಣಿಲೆ ವೆಂಕಪ್ಪ ರೈ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಕೃತಿಕಾ ಆರ್.ಐತಾಳ್, ನೀಮಾ ಎಚ್. ಹಾಗೂ ನಿರೀಕ್ಷಾ ಜೆ.ರೈ ಅವರಿಗೆ ಪುರಸ್ಕಾರ ನೀಡಲಾಯಿತು. ಮದ್ಯವರ್ಜನ ವ್ಯಕ್ತಿ ಕೃಷ್ಣ ಭಂಡಾರಿ ಮಾಡಾವು ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ರೋಯಲ್ ಟ್ರಸ್ಟ್ ಅಧ್ಯಕ್ಷ ಲೋಕೇಶ್ ಹೆಗ್ಡೆ ಸ್ವಾಗತಿಸಿದರು. ಕಾರ್ಯದರ್ಶಿ ಆನಂದ ರೈ ಪ್ರಸ್ತಾವನೆಗೈದರು. ಪದ್ಮಶ್ರೀ ಪ್ರಾರ್ಥಿಸಿದರು. ಹೇಮಲತಾ ಕಜೆಗದ್ದೆ ಕಾರ್ಯಕ್ರಮ ನಿರೂಪಿಸಿ, ಯಶೋಧರ್ ಜೈನ್ ವಂದಿಸಿದರು. ಶ್ರೀಪತಿ ಭಟ್, ವಿಶ್ವನಾಥ ನೈಕ್, ಕಿರಣ್ ಶಂಕರ್ ರೈ, ತಾರಾನಾಥ, ಆನಂದ, ರೇವತಿರಾಜ್, ವಿಶ್ವನಾಥ ಮಿತ್ತೂರು, ಬೇಬಿ ಸದಾನಂದ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಪ್ರಸ್ತುತ ಕಾಲದಲ್ಲಿ ಭವಿಷ್ಯತ್ತಿನ ಕತ್ತಲನ್ನು ಬೆಳಕು ಮಾಡುವ ವ್ಯಕ್ತಿಗಳು ಬೇಕಾಗಿದ್ದು, ಸಮಾಜದ ಹಿರಿಯರಿಗೆ ಪ್ರಶಸ್ತಿ ನೀಡುವ ಮೂಲಕ ಕತ್ತಲನ್ನು ಬೆಳಕು ಮಾಡುವ ಕೆಲಸ ಪಿ.ಬಿ.ರೈ ಪ್ರತಿಷ್ಠಾನದ ವತಿಯಿಂದ ನಡೆದಿರುವುದು ಶ್ಲಾಘನೀಯ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.