ಸಂಟ್ಯಾರ್‌ನಲ್ಲಿ ಏಕದಿನ ಮತ ಪ್ರವಚನ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1

santyar 1

ಒಳ್ಳೆಯ ವಿಚಾರಗಳನ್ನು ಮೈಗೂಡಿಸಿಕೊಂಡು ಬದುಕು ಸಾಗಿಸಿ-ಖಾಸಿಮಿ
ಚಿತ್ರ: ಯೂಸುಫ್ ರೆಂಜಲಾಡಿ
ಪುತ್ತೂರು: ಹುಟ್ಟಿದ ಮನುಷ್ಯರೆಲ್ಲರೂ ಒಂದು ದಿನ ಈ ಲೋಕವನ್ನು ತ್ಯಜಿಸಬೇಕಾಗಿದೆ, ಹಾಗಾಗಿ ಬದುಕಿರುವಷ್ಟು ಕಾಲ ಒಳ್ಳೆಯ ವಿಚಾರಗಳನ್ನು ಮೈಗೂಡಿಸಿಕೊಂಡು ಬದುಕು ಸಾಗಿಸುವುದು ಅಗತ್ಯವಾಗಿದೆ ಎಂದು ಖ್ಯಾತ ವಾಗ್ಮಿ ಹಾಫಿಲ್ ಇ.ಪಿ ಅಬೂಬಕ್ಕರ್ ಖಾಸಿಮಿ ಕೊಲ್ಲಂ ಹೇಳಿದರು. ಅವರು ಬದ್ರಿಯಾ ಜುಮಾ ಮಸೀದಿ ಸಂಟ್ಯಾರು ಇದರ ಆಶ್ರಯದಲ್ಲಿ ಜ.23ರಂದು ನಡೆದ ಮತಪ್ರಭಾಷಣ ಕಾರ್ಯಕ್ರಮದಲ್ಲಿ ‘ಆರುಂ ಅರಿಯಾತ ಯಾತ್ರ’ ಎಂಬ ವಿಷಯದಲ್ಲಿ ಮಾತನಾಡಿದರು.
ಐಹಿಕವಾದ ಬದುಕನ್ನು ಆಡಂಬರಗೊಳಿಸಿ ಆಸ್ತಿ, ಅಂತಸ್ತು ಕ್ರೋಢೀಕರಿಸುವ ಮೊದಲು ಮರಣ ನಮ್ಮ ಬೆನ್ನ ಹಿಂದಿದೆ ಎಂಬುವುದನ್ನು ಮರೆಯಬಾರದು ಎಂದು ಹೇಳಿದ ಅವರು ಪಾರತ್ರಿಕ ಜೀವನದ ಬಗ್ಗೆ ಸದಾ ಚಿಂತಿಸುತ್ತಿರಬೇಕು ಎಂದು ಹೇಳಿದರು. ಪ್ರವಾದಿ (ಸ.ಅ)ರವರು ನಮಗೆ ಆದರ್ಶವಾಗಿದ್ದು ಅವರೇ ನಮಗೆ ಮಾದರಿಯಾಗಿದ್ದಾರೆ, ಆದರೆ ಇಂದು ಸಿನಿಮಾ ನಟ ನಟಿಯರನ್ನು ಅನುಸರಿಸುವವರಿದ್ದಾರೆ ಇದು ವಿಷಾಧಕರ ಸಂಗತಿಯಾಗಿದೆ ಎಂದು ಅವರು ಹೇಳಿದರು. ಇಂದು ಧಾರ್ಮಿಕ ವಿಚಾರಗಳನ್ನು ಎಲ್ಲೆಡೆಗಳಲ್ಲಿ ಕೇಳುತ್ತಿದ್ದೇವೆ, ಮೊಬೈಲ್‌ಗಳ ಮೂಲಕ ಹಾಗೂ ವಾಹನಗಳಲ್ಲಿ ಸಂಚರಿಸುತ್ತಿರುವಾಗಲೂ ಆಲಿಸುತ್ತೇವೆ ಆದರೆ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಮಾತ್ರ ಎಡವುತ್ತಿದ್ದೇವೆ ಎಂದ ಅವರು ಒಳಿತನ್ನು ಸದಾ ನಮ್ಮ ಜೀವನದಲ್ಲಿ ಅಳವಡಿಸಿಕೊಲ್ಳಬೇಕೆಂದು ಹೇಳಿದರು. ಇತ್ತೀಚಿನ ವರ್ಷಗಳಲ್ಲಿ ಅಪಘಾತಗಳು, ರೋಗಗಳು ಅಧಿಕವಾಗುತ್ತಿದ್ದು ಅವುಗಳಿಂದ ರಕ್ಷಣೆ ಪಡೆಯುವುದಕ್ಕಾಗಿ ಸಾಧ್ಯವಾದಷ್ಟು ದಾನ ಧರ್ಮಗಳನ್ನು ನೀಡಬೇಕಾಗಿದೆ ಎಂದ ಅವರು ಸದಾ ಸಮಯ ನಮ್ಮ ಮರಣದ ಬಗ್ಗೆ ಚಿಂತಿಸಿದರೆ ಎಂದಿಗೂ ಕೆಡುಕು ಮಾಡಲು ಸಾಧ್ಯವೇ ಇಲ್ಲ ಎಂದು ಹೇಳಿದರು. ಅಲ್ಲಾಹನು ನೀಡಿದ ಆರೋಗ್ಯ, ಸಂಪತ್ತನ್ನು ದೀನೀ ಕಾರ್ಯಗಳಿಗೆ ವಿನಿಯೋಗಿಸಬೇಕು ಹಾಗಾದರೆ ಮಾತ್ರ ಇಹಪರಗಳಲ್ಲಿ ವಿಜಯಗಳಿಸಲು ಸಾಧ್ಯ ಎಂದು ಖಾಸಿಮಿ ಹೇಳಿದರು.
ಪುತ್ತೂರು ಕೇಂದ್ರ ಜುಮಾ ಮಸೀದಿಯ ಮುದರ್ರಿಸ್ ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ದುವಾ ನೆರವೇರಿಸಿ ಉದ್ಘಾಟಿಸಿದರು. ಸಂಟ್ಯಾರ್ ಜುಮಾ ಮಸೀದಿ ಅಧ್ಯಕ್ಷ ಎಚ್.ಪಿ ಜಲೀಲ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉದ್ಯಮಿ ಮಹಮ್ಮದ್ ಹಾಜಿ ಕುಕ್ಕುವಳ್ಳಿ, ಉಪ್ಪಿನಂಗಡಿಯ ಮಾಲಿಕ್‌ದಿನಾರ್ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ, ಉಸ್ಮಾನ್ ಹಾಜಿ ಸಂಪ್ಯ, ಉದ್ಯಮಿ ಮಹಮ್ಮದ್ ಕುಂಞಿ, ಮಾಡಾವು ಫ್ಯಾಮಿಲಿ ಗ್ರೂಪ್‌ನ ಹಮೀದ್, ಉದ್ಯಮಿ ಶಮ್ಮೂನ್ ಪರ್ಲಡ್ಕ, ಮೈದಾನಿಮೂಲೆ ಮಸೀದಿ ಅಧ್ಯಕ್ಷ ಯೂಸುಫ್ ಹಾಜಿ ಕೈಕಾರ, ಸಾರ್ಯ ಜುಮಾ ಮಸೀದಿ ಅಧ್ಯಕ್ಷ ಯೂಸುಫ್ ಗೌಸಿಯ, ಉದ್ಯಮಿ ಇಬ್ರಾಹಿಂ ಅಲೆಕ್ಕಾಡಿ, ಮೌಲಾನಾ ಅಬ್ದುಲ್ ರಝಾಕ್ ಕಬಕ, ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಮುಫತ್ತಿಸ್ ಮುಹಮ್ಮದ್ ಹನೀಫ್ ಮುಸ್ಲಿಯಾರ್, ಪುತ್ತೂರು ಬದ್ರಿಯಾ ಜುಮಾ ಮಸೀದಿ ಖತೀಬ್ ಎಸ್.ಬಿ ಮುಹಮ್ಮದ್ ದಾರಿಮಿ, ಮುಕ್ರಂಪಾಡಿ ಮಸೀದಿ ಖತೀಬ್ ಹಸನ್ ಬಾಖವಿ, ಪರ್ಪುಂಜ ಮಸೀದಿ ಖತೀಬ್ ಶರೀಫ್ ದಾರಿಮಿ, ಅಜ್ಜಿಕಟ್ಟೆ ಮಸೀದಿ ಖತೀಬ್ ಉಮ್ಮರ್ ಫೈಝಿ, ಬದ್ರಿಯಾ ಗಲ್ಫ್ ಫ್ರೆಂಡ್ಸ್ ಸಂಟ್ಯಾರ್ ಇದರ ಕಾರ್ಯದರ್ಶಿ ಜಾಬಿರ್ ಉಪಸ್ಥಿತರಿದ್ದರು. ಸ್ಥಳೀಯ ಖತೀಬ್ ಅಶ್ರಫ್ ದಾರಿಮಿ ಸ್ವಾಗತಿಸಿದರು. ನೌಫಲ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

santyar2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.