ಕಾವು: ನನ್ಯ ತುಡರ್ ಯುವಕ ಮಂಡಲದಿಂದ ನೆರೆಹೊರೆ-ಯುವ ಸಂಸತ್ತು ಕಾರ್ಯಾಗಾರ

Puttur_Advt_NewsUnder_1
Puttur_Advt_NewsUnder_1

DSC04247

ಚಿತ್ರ: ಸುನೀಲ್.ಎನ್ ಕಾವು

ಸಂಘಟನೆಯ ಸಮಾಜಮುಖಿ ಕೆಲಸಕ್ಕೆ ಪ್ರೋತ್ಸಾಹ ಮುಖ್ಯ-ಡಾ| ವರದರಾಜ ಚಂದ್ರಗಿರಿ

ಪುತ್ತೂರು : ಕೌಶಲ್ಯ ಅಭಿವೃದ್ಧಿ, ಉದ್ಯಮ ಶೀಲತೆ, ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರೂ ಯುವ ಕೇಂದ್ರ ಮಂಗಳೂರು, ತಾಲೂಕು ಯುವಜನ ಒಕ್ಕೂಟ ಪುತ್ತೂರು, ಗ್ರಾಮ ಪಂಚಾಯತ್ ಅರಿಯಡ್ಕ, ಎನ್.ಎಸ್.ಎಸ್ ಘಟಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇವರ ಸಹಯೋಗದೊಂದಿಗೆ ಕಾವು ನನ್ಯ ತುಡರ್ ಯುವಕ ಮಂಡಲದ ಆತಿಥ್ಯದಲ್ಲಿ ನೆರೆಹೊರೆ-ಯುವ ಸಂಸತ್ತು ಕಾರ್ಯಾಗಾರವು ಜ.24ರಂದು ನನ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ| ವರದರಾಜ ಚಂದ್ರಗಿರಿಯವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಯುವ ಪ್ರಧಾನವಾದ ನಮ್ಮ ದೇಶದಲ್ಲಿ ಯುವಕರಿಗೆ ದೇಶದ ಚಿತ್ರಣವನ್ನು ಬದಲಾಯಿಸುವ ಶಕ್ತಿಯಿದೆ, ಆದರೆ ಯುವಕರಿಗೆ ತಮ್ಮ ಸಾಮರ್ಥ್ಯದ ಬಗ್ಗೆ ಅರಿವಿಲ್ಲ, ಹಾಗಾಗಿ ಯುವಕರ ಸಮಾಜಮುಖಿ ಕಾರ್ಯಗಳಿಗೆ ಪ್ರೋತ್ಸಾಹ ಮುಖ್ಯ, ಯುವಕರು ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಕಾರ್ಯ ಮಾಡಿದಾಗ ಯಶಸ್ಸು ಸಾಧ್ಯವಾಗುತ್ತದೆ. ಯುವ ಜನಾಂಗ ಕ್ರೌರ್ಯವನ್ನು ಬಿಟ್ಟು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಸಮಾಜದ ನೋವಿಗೆ ಸಹಾಯ ಮಾಡುವ, ಸ್ಪಂದಿಸುವ ಕೆಲಸದಲ್ಲಿ ನಿರತರಾಗಬೇಕು. ಭಾರತ ಆಧ್ಯಾತ್ಮಿಕ ಶಕ್ತಿಯ ಮೂಲಕ ಜಗತ್ತಿನಲ್ಲಿಯೇ ಶಕ್ತಿಶಾಲಿಯಾಗಿ ಬೆಳೆಯುತ್ತಿದೆ, ಆ ನಿಟ್ಟಿನಲ್ಲಿ ಯುವ ಜನತೆಯನ್ನು ಪ್ರೋತ್ಸಾಹಿಸುವ ನನ್ಯ ತುಡರ್ ಯುವಕ ಮಂಡಲದ ಕಾರ್ಯ ಸಮಾಜಕ್ಕೆ ಪೂರಕವಾಗಿದೆ, ಸಮಾಜಮುಖಿ ಕಾರ್ಯಗಳೊಂದಿಗೆ ನಿಮ್ಮ ಸಂಘಟನೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.

ನನ್ಯ ತುಡರ್ ಯುವಕ ಮಂಡಲದ ಗೌರವಾಧ್ಯಕ್ಷ ಶೇಷಪ್ಪ ಗೌಡ ಪರನೀರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ, ಯುವ ಜನತೆಗೆ ಸರಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡುವುದಕ್ಕಾಗಿ ಮತ್ತು ನಾಯಕತ್ವ ಬೆಳವಣಿಗೆಯ ತರಬೇತಿ ನೀಡುವ ಉದ್ದೇಶದಿಂದ ನೆಹರೂ ಯುವ ಕೇಂದ್ರದ ಸಹಯೋಗದೊಂದಿಗೆ ಒಂದು ದಿನದ ಯುವ ಸಂಸತ್ತು ಕಾರ್ಯಾಗಾರವನ್ನು ಆಯೋಜಿಸಲಾಗಿದೆ, ಯುವ ಜನತೆ ಇದರ ಸದುಪಯೋಗವನ್ನು ಪಡೆದುಕೊಂಡು ಸಮಾಜದಲ್ಲಿ ಸತ್ಪ್ರಜೆಗಳಾಗಿ ಬಾಳುವಂತೆ ಹೇಳಿದರು.

ಮುಖ್ಯ ಅತಿಥಿಯಾಗಿದ್ದ ನನ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ತಾರಾ ಎಸ್., ಮಾಡ್ನೂರು ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಸುರೇಂದ್ರ ಬೋರ್ಕರ್ ನನ್ಯ ಶುಭಹಾರೈಸಿದರು.

ಈಶ್ವರಮಂಗಲ ವಿಜಯಾ ಬ್ಯಾಂಕ್‌ನ ರಾಮದಾಸ ರೈ ಮದ್ಲ, ಅರಿಯಡ್ಕ ಗ್ರಾ.ಪಂನ ಪ್ರಭಾರ ಪಂಚಾಯತ್ ಅಭಿವೃದ್ದಿ ಅಧಿಕಾರಿ ಅಜಿತ್ ಜಿ.ಕೆ, ಪುತ್ತೂರು ಪ್ರಧಾನ ಅಂಚೆಕಛೇರಿಯ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ರಾಜೇಶ್ ಕುಮಾರ್ ರವರು ಕೇಂದ್ರ ಪುರಸ್ಕೃತ ಯೋಜನೆಗಳು ಹಾಗೂ ಅನುಷ್ಠಾನದಲ್ಲಿ ಸಮುದಾಯ ಸಂಘಟನೆಗಳ ಪಾತ್ರಗಳ ಕುರಿತು ಮಾಹಿತಿ ನೀಡಿದರು. ಮಧ್ಯಾಹ್ನದ ಬಳಿಕ ಜೆ.ಸಿ.ಐ ತರಬೇತುದಾರ ರಾಕೇಶ್ ರೈ ಕೆಡೆಂಜಿಯವರು ನಾಯಕತ್ವ ಬೆಳವಣಿಗೆಯ ಬಗ್ಗೆ ತರಬೇತಿ ನೀಡಿದರು.

ಆಶು ನಟನೆ-ಆಶು ಭಾಷಣ ಸ್ಪರ್ಧೆ : ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಆಶು ಭಾಷಣ ಸ್ಪರ್ಧೆಯಲ್ಲಿ ರಂಜನ್-ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು-ಪ್ರಥಮಾ, ಅಶ್ವಿತಾ.ಎಂ-ಸಂತ ಫಿಲೊಮೀನಾ ಕಾಲೇಜು ಪುತ್ತೂರು-ದ್ವಿತೀಯಾ, ಆಶುನಟನೆ ಸ್ಪರ್ಧೆಯಲ್ಲಿ ಚೇತನಾ-ಬೆಟ್ಟಂಪಾಡಿ ಸರಕಾರಿ ಪ್ರಥಮಾ ದರ್ಜೆ ಕಾಲೇಜು-ಪ್ರಥಮಾ, ಪೂರ್ಣಚಂದ್ರ ಅಮ್ಚಿನಡ್ಕ-ದ್ವಿತೀಯಾ ಬಹುಮಾನ ಪಡೆದುಕೊಂಡರು.

ಅನನ್ಯಾ ಕುಂಞಕುಮೇರು ಪ್ರಾರ್ಥಿಸಿದರು. ನನ್ಯ ತುಡರ್ ಯುವಕ ಮಂಡಲದ ಪ್ರಧಾನ ಕಾರ್ಯದರ್ಶಿ ಸುನೀಲ್ ನಿಧಿಮುಂಡ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಸದಸ್ಯ ನವೀನ ನನ್ಯಪಟ್ಟಾಜೆ ವಂದಿಸಿದರು. ಸದಸ್ಯ ದಿವ್ಯಪ್ರಸಾದ್ ಎ.ಎಂ ಕಾರ್ಯಕ್ರಮ ನಿರೂಪಿಸಿದರು. ಯುವಕ ಮಂಡಲದ ಪದಾಧಿಕಾರಿಗಳು, ಸದಸ್ಯರು ಸಹಕರಿಸಿದರು. ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು, ಸ್ಥಳೀಯ ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಸೇರಿ ಒಟ್ಟು 142 ಜನ ಪಾಲ್ಗೊಂಡು ಕಾರ್ಯಾಗಾರದ ಪ್ರಯೋಜನ ಪಡೆದುಕೊಂಡರು.

ಸಂಜೆ ನಡೆದ ಸಮಾರೋಪದಲ್ಲಿ ಯುವಕ ಮಂಡಲದ ಅಧ್ಯಕ್ಷ ಬಾಸ್ಕರ ಬಲ್ಯಾಯ ಅಧ್ಯಕ್ಷತೆ ವಹಿಸಿ ವಂದಿಸಿದರು, ಸ್ಥಾಪಕಾಧ್ಯಕ್ಷ ಸುಬ್ರಾಯ ಬಲ್ಯಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

kavu

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.