ರಾಮಕುಂಜ: ವಾರ್ಷಿಕ ಜಾತ್ರೆ-ಮಹಾರಥೋತ್ಸವ

Puttur_Advt_NewsUnder_1
Puttur_Advt_NewsUnder_1

ramakunja

ಪುತ್ತೂರು: ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಜ.24ರಂದು ರಾತ್ರಿ ಮಹಾರಥೋತ್ಸವ ನಡೆಯಿತು.

ಜ.೨೧ರಂದು ಧ್ವಜಾರೋಹಣದೊಂದಿಗೆ ಜಾತ್ರೋತ್ಸವ ಆರಂಭಗೊಂಡಿತು. ಬಳಿಕ ಬಲಿ ಹೊರಟು ಉತ್ಸವ, ಕಾಜರುಕ್ಕು ಬದಿಯ ಕಟ್ಟೆಗಳಲ್ಲಿ ಕಟ್ಟೆಪೂಜೆ ನಡೆಯಿತು. ಜ.22ರಂದು ಬೆಳಿಗ್ಗೆ ಶಾಲಾ ಮಕ್ಕಳಿಂದ ಹಸಿರುವಾಣಿ  ಸಮರ್ಪಣೆ, ರಾತ್ರಿ ದೇವರ ಬಲಿ ಹೊರಟು ಉತ್ಸವ, ಕೆರೆಕರೆ, ಇರ್ಕಿಮಠ, ಕುಕ್ಕೇರಿಕಟ್ಟೆ, ಸಂಪ್ಯಾಡಿ, ಶಾರದಾನಗರ, ಕೆದಿಲಗಳಲ್ಲಿ ಕಟ್ಟೆಪೂಜೆ ನಡೆಯಿತು. ಜ.೨೩ರಂದು ಬೆಳಿಗ್ಗೆ ನಂದಾದೀಪೋತ್ಸವ, ಮಧ್ಯಾಹ್ನ ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಿತು. ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ದೇವರ ಬಲಿ ಹೊರಟು ಉತ್ಸವ, ಇರ್ಕಿಮಠದ ದಂಡತೀರ್ಥದಲ್ಲಿ ಕೆರೆ ಉತ್ಸವ, ದೇವರ ಗುಡ್ಡೆ, ತಾವೂರು ಕಟ್ಟೆಗಳಲ್ಲಿ ಕಟ್ಟೆಪೂಜೆ, ಶ್ರೀರಾಮ ಸಂದರ್ಶನೋತ್ಸವ ನಡೆಯಿತು. ಬಳಿಕ ಶಾಲಾ ಕಾಲೇಜು ಬಳಿಯ ಕಟ್ಟೆಗಳಲ್ಲಿ ಕಟ್ಟೆ ಪೂಜೆ ನಡೆಯಿತು. ದೈವಗಳ ಭಂಡಾರ ಹಿಡಿಯುವುದು, ವಸಂತ ಕಟ್ಟೆಗಳು, ಉತ್ಸವ ನಡೆಯಿತು. ರಾತ್ರಿ ಸಾಂಸ್ಕೃತಿಕ ಕಾರ‍್ಯಕ್ರಮದ ಅಂಗವಾಗಿ ಶ್ರೀ ರಾಮಕುಂಜೇಶ್ವರ ಮಿತ್ರವೃಂದದ ಆಶ್ರಯದಲ್ಲಿ “ಪಿಂಗಾರ ಕಲಾವಿದೆರೆ ಬೆದ್ರ”ಇವರಿಂದ” ಏರೆನ್ ಎಂಚ ನಂಬುನು…? ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು. ಜ.24ರಂದು ಬೆಳಿಗ್ಗೆ ಬಲಿ ಹೊರಟು ಉತ್ಸವ, ಶ್ರೀ ಮಹಾಗಣಪತಿ ದೇವರಿಗೆ 48 ತೆಂಗಿನಕಾಯಿಗಳ ಗಣಪತಿ ಹೋಮ ನಡೆಯಿತು. ರಾತ್ರಿ ಬಲಿ ಹೊರಟು ಮಹಾರಥೋತ್ಸವ ನಡೆಯಿತು. ಬಳಿಕ ಉತ್ಸವಾದಿಗಳು, ಶ್ರೀ ಭೂತಬಲಿ ನಡೆಯಿತು.

ಜ.25ರಂದು ಅವಭೃತ: ಜ.25ರಂದು ಬೆಳಿಗ್ಗೆ ಕವಾಟೋದ್ಘಾಟನೆ, ಅಭಿಷೇಕ ನಡೆಯಲಿದೆ. ಸಂಜೆ ಅವಭೃತ ಸವಾರಿ, ರಾಮಕುಂಜದಿಂದ ಆತೂರು, ಕೆ.ಸಿ.ಫಾರ್ಮ್, ಕೊಲ ಸದಾಶಿವ ದೇವಸ್ಥಾನ, ಹೊಳೆ ಬದಿಯವರೆಗಿನ ಎಲ್ಲಾ ಕಟ್ಟೆಗಳಲ್ಲಿ ಕಟ್ಟೆಪೂಜೆ ನಡೆದು ರಾತ್ರಿ ಧ್ವಜಾವರೋಹಣಗೊಳ್ಳಲಿದೆ. ಜ.೨೬ರಂದು ಬೆಳಿಗ್ಗೆ ನಾಗಾರಾಧನೆ, ರಾತ್ರಿ ಕಲೆಂಬಿತ್ತಾಯ, ಕಲ್ಲುರ್ಟಿ, ಅಂಗಣ ಪಂಜುರ್ಲಿ ದೈವಗಳ ನೇಮ ನಡೆಯಲಿದೆ. ಜ.೨೭ರಂದು ಬೆಳಿಗ್ಗೆ ಶಿರಾಡಿ, ರುದ್ರಚಾಮುಂಡಿ, ಗಿಳಿರಾಮ, ಗುಳಿಗ ದೈವಗಳ ನೇಮ ನಡೆಯಲಿದೆ.

 DDDDDDDD

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.