Breaking News

ಉಚಿತ, ರಿಯಾಯಿತಿ ವ್ಯವಸ್ಥೆಯ ಕೆ.ಸಿ.ಸಿ. ಆರೋಗ್ಯ ಕಾರ್ಡು ಶಿಬಿರ

Puttur_Advt_NewsUnder_1
Puttur_Advt_NewsUnder_1

karduಉಪ್ಪಿನಂಗಡಿ: ಮಂಗಳೂರಿನ ಎಲ್ಲಾ ಪ್ರಮುಖ ಆಸ್ಪತ್ರೆಗಳ ಪ್ರತೀ ಭೇಟಿಗೂ ಉಚಿತ, ರಿಯಾಯಿತಿ ದರದಲ್ಲಿ ಚಿಕಿತ್ಸೆ ಲಭಿಸುವ ಕೆ.ಸಿ.ಸಿ. ಆರೋಗ್ಯ ಕಾರ್ಡ್ ಅರ್ಜಿ ನೋಂದಾವಣೆ ಶಿಬಿರ ಜ. 24 ರಂದು ಕೊಲ, ಮರ್ದಾಲ, ಪೆರಾಬೆಯಲ್ಲಿ ಜರಗಿತು.

24 ರಂದು ಕೊಲ ಗ್ರಾಮದ ಸಬಲೂರು ಶಾಲೆ, ವಲಕಡಮ ಶಾಲೆ, ಕೊಲ ಶಾಲೆ, ಗಂಡಿಬಾಗಿಲು ಶಾಲೆ ವಠಾರದಲ್ಲಿ ಮತ್ತು ಮರ್ದಾಳ ಪ್ರಾಥಮಿಕ ಶಾಲೆ ಆವರಣದಲ್ಲಿ ಜರಗಿತು. ಜ. 23ರಂದು ಪೆರಾಬೆಯಲ್ಲಿ ನಡೆಯಿತು.

ಸಂಸ್ಥೆಯ ವ್ಯವಸ್ಥಾಪಕ ಅಬ್ದುಲ್ ರಹಿಮಾನ್ ಮಾಹಿತಿ ನೀಡಿ ಕೆ.ಸಿ.ಸಿ. ಆರೋಗ್ಯ ಕಾರ್ಡು ಹೊಂದಿದವರಿಗೆ ಮಂಗಳೂರು ದೇರಳಕಟ್ಟೆ ಕಣಚೂರು ಆಸ್ಪತ್ರೆ, ಮಂಗಳೂರು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆ, ಮಂಗಳೂರು ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆ, ಮಂಗಳೂರು ಅತ್ತಾವರ ಕೆ.ಎಂ.ಸಿ. ಆಸ್ಪತ್ರೆ, ಜ್ಯೋತಿ ಕೆ.ಎಂ.ಸಿ. ಆಸ್ಪತ್ರೆ, ಸಹರಾ ಆಸ್ಪತ್ರೆ ತೊಕ್ಕೊಟ್ಟು, ಮಂಗಳೂರು ಪಂಪುವೆಲ್ ಓಂಕೊಲಜಿ ಆಸ್ಪತ್ರೆ, ಮಂಗಳೂರು ಹೈಲಾಂಡ್ ಆಸ್ಪತ್ರೆ, ಮಂಗಳೂರು ಸಿಟಿ ಆಸ್ಪತ್ರೆ, ಬಿ.ಸಿ. ರೋಡು ಪರ್ಲಿಯಾ ನರ್ಸಿಂಗ್ ಹೋಂ, ಮಂಗಳೂರು ಎ.ಜೆ. ಆಸ್ಪತ್ರೆ, ಮಂಗಳೂರು ಮುಡಿಪು ಕಾಯಾರ್ ಕೇರ್ ಆಸ್ಪತ್ರೆಗಳಲ್ಲಿ ಉಚಿತ ಮತ್ತು ರಿಯಾಯಿತಿ ದರದಲ್ಲಿ ಚಿಕಿತ್ಸೆ ಲಭಿಸಲಿದೆ ಎಂದರು.

 ಕೊಲ, ಗಂಡಿಬಾಗಿಲು, ವಲಕಡಮ, ಸಬಲೂರು, ಮರ್ದಾಲ, ಪೆರಾಬೆಗಳಲ್ಲಿ ನಡೆದ ಶಿಬಿರವನ್ನು ಸಂಸ್ಥೆಯ ಅಬೂಬಕ್ಕರ್ ಸಿದ್ದಿಕ್, ಅಶ್ರಫ್, ಇಸ್ಮಾಯಿಲ್, ನೌಫಲ್, ಸುಲೈಮಾನ್ ನಡೆಸಿಕೊಟ್ಟರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.