ಮಂಗಳೂರುನಲ್ಲಿ “ಸಹಬಾಳ್ವೆ ಸಾಗರ” ಉಪ್ಪಿನಂಗಡಿಯಲ್ಲಿ ಪೂರ್ವಭಾವಿ ಸಭೆ

Puttur_Advt_NewsUnder_1
Puttur_Advt_NewsUnder_1

mangaore2

ಉಪ್ಪಿನಂಗಡಿ: ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಕೇಂದ್ರ ಸಮಿತಿ ವತಿಯಿಂದ ಜ.೩೦ರಂದು ಮಂಗಳೂರುನಲ್ಲಿ ನಡೆಯುವ “ಸಹಬಾಳ್ವೆ ಸಾಗರ” ಕಾರ‍್ಯಕ್ರಮದ ಸಲುವಾಗಿ ಜ. 23ರಂದು ಉಪ್ಪಿನಂಗಡಿಯಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಕಾರ‍್ಯಕ್ರಮದ ಪೋಸ್ಟರ್‌ನ್ನು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕರುಣಾಕರ ಸುವರ್ಣ ಬಿಡುಗಡೆ ಮಾಡಿ ಕಾರ‍್ಯಕ್ರಮ ಯಶಸ್ಸು ಆಗಲಿ ಎಂದು ಹಾರೈಸಿದರು. ಉಪ್ಪಿನಂಗಡಿ ದೀನರ ಕನ್ಯಾ ಮಾತೆ ಚರ್ಚ್ ಧರ್ಮಗುರು ವಿಕ್ಟರ್ ಡಿ’ಸೋಜಾ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂದಿನ ಪ್ರಸಕ್ತ ಕಾಲಘಟ್ಟಕ್ಕೆ ಇಂತಹ ಕಾರ‍್ಯಕ್ರಮಗಳ ಅಗತ್ಯ ಇದೆ, ನಾವುಗಳು ಪರಸ್ಪರ ಸಹಭಾಳ್ವೆ ನಡೆಸುವ ನಿಟ್ಟಿನಲ್ಲಿ ಪಣ ತೊಡಬೇಕಾಗಿದೆ, ಈ ಕಾರ‍್ಯಕ್ರಮಗಳ ಮೂಲಕ ಅದನ್ನು ಸಮಾಜಕ್ಕೆ ತೋರಿಸಿ ಕೋಡಬೇಕಾಗಿದೆ ಎಂದರು.

 ಉಪ್ಪಿನಂಗಡಿ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ ಮಾತನಾಡಿ ಇದು ಅತ್ಯಂತ ಅಗತ್ಯವಾಗಿ ಆಗಲೇ ಬೇಕಾದ ಕಾರ‍್ಯಕ್ರಮ, ಈ ಕಾರ‍್ಯಕ್ರಮದ ಯಶಸ್ಸಿಗೆ ನಾವುಗಳು ಪರಸ್ಪರ ಕೈಜೋಡಿಸಬೇಕಾಗಿದೆ ಎಂದರು.

 ಕರ್ನಾಟಕ ಕೋಮು ಸೌಹಾರ್ದ ಸಮಿತಿಯ ಯು.ಎಚ್. ಉಮರ್ ಪ್ರಾಸ್ತಾವಿಕವಾಗಿ ಮಾತನಾಡಿ ಈ ಕಾರ‍್ಯಕ್ರಮ ವಿವಿಧ ಧರ್ಮ, ಜಾತಿ, ಸಿದ್ಧಾಂತ, ಸಂಸ್ಕೃತಿ, ಭಾಷೆಗಳು ಸಂಗಮಿಸುವ ರಾಷ್ಟ್ರೀಯ ಸಮಾವೇಶ ಇದಾಗಿದ್ದು, ರಾಜ್ಯದ ಎಂಟು ಐತಿಹಾಸಿಕ ಕ್ಷೇತ್ರಗಳಿಂದ ನದಿಗಳ ಹೆಸರಿನಲ್ಲಿ ಜಾಥಾ ಬಂದು ಇಲ್ಲಿ ಸಂಗಮ ಆಗಲಿದೆ ಎಂದ ಅವರು ಎಲ್ಲರ ಸಹಭಾಗಿತ್ವದಿಂದ ಅತೀ ಅಗತ್ಯ ಎಂದರು. ವೇದಿಕೆಯಲ್ಲಿ ಹಿರಿಯ ಪತ್ರಕರ್ತ ರಮೇಶ್ ಪೆರ್ಲ ಉಪಸ್ಥಿತರಿದ್ದರು. ಕಾರ‍್ಯಕ್ರಮದಲ್ಲಿ ವರ್ತಕ ಸಂಘದ ಅಧ್ಯಕ್ಷ ಪ್ರಶಾಂತ್ ಡಿ’ಕೋಸ್ತ, ಕಾರ‍್ಯದರ್ಶಿ ಅಬ್ದುಲ್ ರಹಿಮಾನ್, ಉದ್ಯಮಿಗಳಾದ ಯು. ರಾಮ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.