Breaking News

ಮರೀಲ್‌ನಲ್ಲಿ ವಾರ್ಡ್‌ನ ರಸ್ತೆ ಸೂಚಕ ಫಲಕಗಳ ಉದ್ಘಾಟನೆ ರಾಜ್ಯದಲ್ಲೇ ಗುರುತಿಸಿಕೊಂಡಿರುವ ಮಾದರಿ ವಾರ್ಡ್-ಮಹಮ್ಮದ್ ಆಲಿ

Puttur_Advt_NewsUnder_1
Puttur_Advt_NewsUnder_1

marilಪುತ್ತೂರು: ಕೇವಲ ಚರ್ಚ್, ಮಸೀದಿ ಮತ್ತು ದೇವಸ್ಥಾನಗಳ ಅಭಿವೃದ್ಧಿ ಮಾತ್ರ ಪುಣ್ಯದ ಕೆಲಸವೆಂದು ನಂಬಿರುವ ಜನರು ಊರಿನ ಅಭಿವೃದ್ಧಿ ಕೂಡ ಪುಣ್ಯದ ಕೆಲಸವೆಂದು ತಿಳಿಯಬೇಕು. ಆ ನಿಟ್ಟಿನಲ್ಲಿ ಜನೋಪಯೋಗಿ ಕೆಲಸ-ಕಾರ್ಯಗಳ ಮುಖಾಂತರ ಮಾದರಿ ವಾರ್ಡ್ ಎಂದು ಗುರುತಿಸಿಕೊಂಡಿರುವ ಮರೀಲ್ ಪರಿಸರವು ರಾಜ್ಯದಲ್ಲೇ ಮಾದರಿ ವಾರ್ಡ್ ಎಂದು ಗುರುತಿಸಿಕೊಂಡಿದೆ ಎಂದು ನಗರಸಭಾ ವಿಪಕ್ಷ ನಾಯಕ ಎಚ್.ಮಹಮ್ಮದ್ ಆಲಿರವರು ಹೇಳಿದರು.

ಅವರು ಜ.೨೪ರಂದು ಬೆದ್ರಾಳದ ನಂದಿಕೇಶ್ವರ ಭಜನಾ ಮಂದಿರದ ಬಳಿ ನಡೆದ ನಮ್ಮ ವಾರ್ಡ್ ಜನ ಸೇವಾ ಸಮಿತಿ, ಸಂತ ಫಿಲೋಮಿನಾ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗ, ನೆಕ್ಕರೆ ಕಲಿಯುಗ ಸೇವಾ ಸಮಿತಿ, ನಗರಸಭೆ ಪುತ್ತೂರು, ಹಾಗೂ ಮರೀಲ್‌ನ ಸ್ಥಳೀಯ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಮರೀಲು ವ್ಯಾಪ್ತಿಯ ವಾರ್ಡ್‌ನ ರಸ್ತೆ ಸೂಚಕ ಫಲಕಗಳನ್ನು  ಉದ್ಘಾಟಿಸಿ ಮಾತನಾಡಿದರು. ರಸ್ತೆ ಸುರಕ್ಷತೆಗಾಗಿ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಸ್ಥಳೀಯರ ಸಹಕಾರದಿಂದ ಮರೀಲ್ ಯೂತ್ ಕೌನ್ಸಿಲ್‌ನ ಸದಸ್ಯರು  ರೂ. ೧.೨ಲಕ್ಷ ವೆಚ್ಚದಲ್ಲಿ ಅಲ್ಲಲ್ಲಿ ರಸ್ತೆ ಸೂಚನಾ ಫಲಕಗಳನ್ನು  ಅಳವಡಿಸಿರುವುದು ಶ್ಲಾಘನೀಯ ವಿಚಾರವಾಗಿದ್ದು ಈ ಯುವಕರ ಹಿಂದೆ ಧರ್ಮಗುರು ಅಸ್ಸಿಸಿರವರ ಮಾರ್ಗದರ್ಶನ, ಸಹಕಾರವಿರುವುದನ್ನು ಶ್ಲಾಘಿಸಿದರು. ಸರಕಾರಿ ಅನುದಾನದಲ್ಲಿ  ನಡೆಯುವ ಪ್ರತಿಯೊಂದು ಕಾರ್ಯಕ್ಕೆ ಸ್ಥಳೀಯರ ಸಹಕಾರ ಖಂಡಿತಾ ಬೇಕಾಗಿದೆ ಎಂದ ಆಲಿರವರು ಹಿಂದೆ ಲೋಕೋಪಯೋಗಿ ಇಲಾಖೆಯವರು ಸ್ಪಷ್ಟವಾದ ನಾಮಫಲಕವನ್ನು ಹಾಕದೆ ಜನರಿಗೆ ಗೊಂದಲವನ್ನು ಸೃಷ್ಟಿಸಿದಾಗ ಜನರೇ ನಾಮಫಲಕಕ್ಕೆ ಮಸಿಯನ್ನು ಬಳಿದಿದ್ದರು. ಆದರೆ ಮಾದರಿ ವಾರ್ಡ್ ಗುರುತಿಸಿಕೊಂಡಿರುವ ಇಲ್ಲಿ ಜನರಿಗೆ ಗೊಂದಲವಾಗದ ರೀತಿಯಲ್ಲಿ ನಾಮಫಲಕ ಅಳವಡಿಸಿದ್ದಾರೆ ಎಂದರು.

ಅನುದಾನ ಲಭ್ಯತೆ ನೋಡಿಕೊಂಡು ಕೆಲಸ-ರವಿಕುಮಾರ್: ಲೋಕೋಪಯೋಗಿ ಇಲಾಖೆಯ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ರವಿಕುಮಾರ್‌ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸದ್ರಿ ೨೫೦ಕೀ.ಮೀ ವ್ಯಾಪ್ತಿಯಲ್ಲಿ ರಸ್ತೆ ನಿರ್ವಹಣೆ ನಡೀತೀದೆಯಾದರೂ ಸಂಪೂರ್ಣ ಕಾಮಗಾರಿಗೆ ಸರಕಾರದಿಂದ ಸಿಗುವ ಅನುದಾನ ಬಹಳ ಕಡಿಮೆ. ಸರಕಾರದಿಂದ ಸಿಗುವ ಅನುದಾನದ ಲಭ್ಯತೆ ನೋಡಿಕೊಂಡು ಕೆಲಸ ನಿರ್ವಹಿಸಬೇಕಾಗಿದೆ. ಆದರೂ ಪ್ರಯಾಣಿಕರ ಹಿತದೃಷ್ಟಿಯಿಂದ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಅಲ್ಲಲ್ಲಿ ಬೋರ್ಡ್‌ಗಳನ್ನು ಅಳವಡಿಸಲು ಸರಕಾರ ಅನುದಾನ ನೀಡುತ್ತಿದೆ ಎಂದರಲ್ಲದೆ  ಯಾವುದೇ ಕೆಲಸವನ್ನು ದೂರುವ ಬದಲು  ಸಾರ್ವಜನಿಕರು ಸಹಕಾರ ನೀಡಿದಾಗ ಕೆಲಸವೂ ಯಶಸ್ವಿಯಾಗುವುದು ಎಂದರು.

ಯಶಸ್ವಿ ಕಾರ್ಯಕ್ರಮದ ಮಾಸ್ಟರ್ ಮೈಂಡ್ ಫಾ.ಅಸ್ಸಿಸಿಯಾಗಿದ್ದಾರೆ-ಮುಖೇಶ್: ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ನಗರಸಭಾ ಸದಸ್ಯ ಮುಖೇಶ್ ಕೆಮ್ಮಿಂಜೆರವರು ಮಾತನಾಡಿ, ಗ್ರಾಮೀಣ ಪ್ರದೇಶವಾದ ಮರೀಲ್‌ನಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಮಾದರಿ ವಾರ್ಡ್ ರಚನೆಯಾಗಲು ಧರ್ಮಗುರು ಫಾ. ಫ್ರಾನ್ಸಿಸ್ ಅಸ್ಸಿಸಿರವರ ಮಾಸ್ಟರ್ ಮೈಂಡ್ ಕಾರಣವಾಗಿದೆ ಎಂದ ಅವರು ಪ್ರತಿಯೊಬ್ಬರಲ್ಲಿ ಸ್ವಚ್ಚ ಮನಸ್ಸಿನ ಜೊತೆಗೆ ಸ್ವ-ಇಚ್ಚೆಯಿಂದ ಕೆಲಸ ಮಾಡಿದಾಗ ವಾರ್ಡ್ ಖಂಡಿತಾ ರಾಮರಾಜ್ಯವಾಗುವುದು ಎಂದರು.

ಜಾತಿಗೆ ಸೀಮಿತವಾಗದೆ ಧರ್ಮಾತೀತವಾದ ಕೆಲಸ-ಫಾ.ಅಸ್ಸಿಸಿ:  ನಮ್ಮ ವಾರ್ಡ್ ಜನಸೇವಾ ಸಮಿತಿಯ ಸಂಚಾಲಕರಾದ ರೆ.ಫಾ.ಫ್ರಾನ್ಸಿಸ್ ಅಸ್ಸಿಸಿ ಡಿ’ಅಲ್ಮೇಡರವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಣ್ಣ ಸಣ್ಣ ಸಂಪನ್ಮೂಲಗಳನ್ನು ಕ್ರೋಢೀಕರಿಸಿ, ಯುವಸಮುದಾಯದ ಮತ್ತು ಸ್ಥಳೀಯರ ಸಹಾಯಹಸ್ತದಿಂದ ಮರೀಲನ್ನು ಮಾದರಿ ವಾರ್ಡ್ ಆಗಿ ನಿರ್ಮಿಸಲು ಮುಂದಾಗಿದ್ದು ಈ ಕಾರ್ಯವು ಕೇವಲ ಜಾತಿಗೆ ಸೀಮಿತವಾಗದೆ ಧರ್ಮಾತೀತವಾಗಿ ಕೆಲಸವನ್ನು ಮಾಡುತ್ತಿದ್ದೇವೆ ಎಂದರು.

ವೇದಿಕೆಯಲ್ಲಿ ಬೆದ್ರಾಳ ನಂದಿಕೇಶ್ವರ ಭಜನಾ ಮಂಡಳಿಯ ಅಧ್ಯಕ್ಷರಾದ ಬಿ.ಶ್ರೀಪಾಲ್ ಜೈನ್, ಸಂಜೀವ ನಾಯಕ್ ನೆಲ್ಲಿಗೇರಿ, ಮರೀಲ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಪ್ರೊ.ಎಡ್ವಿನ್ ಡಿ’ಸೋಜ, ಸಂತ ಫಿಲೋಮಿನಾ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿ ಸಿದ್ದಾಂತ್, ನಮ್ಮ ವಾರ್ಡ್ ಜನಸೇವಾ ಸಮಿತಿಯ ಸಂಯೋಜಕ ಎಡೋಲ್ಫ್ ಫೆರ್ನಾಂಡೀಸ್, ಮರೀಲ್ ಯೂತ್ ಕೌನ್ಸಿಲ್‌ನ ಅಧ್ಯಕ್ಷ ವಿಜಯ್ ಮೊಂತೇರೋ, ಕಲಿಯುಗ ಸೇವಾ ಸಮಿತಿಯ ಸದಸ್ಯ ಸಂಪತ್ ಕುಮಾರ್ ಉಪಸ್ಥಿತರಿದ್ದರು.

ಮರೀಲ್ ಯೂತ್ ಕೌನ್ಸಿಲ್ ಸದಸ್ಯರು ಪ್ರಾರ್ಥಿಸಿದರು. ನಗರಸಭಾ ನಾಮನಿರ್ದೇಶಿತ ಸದಸ್ಯ ಕೇಶವ ಪೂಜಾರಿ ಬೆದ್ರಾಳ ವಂದಿಸಿ, ಅನಿಲ್ ಪಾಸ್ ಕಾರ್ಯಕ್ರಮ ನಿರೂಪಿಸಿದರು.

ರಾಜ್ಯ ರಸ್ತೆ ಅಭಿವೃದ್ಧಿ ಪ್ರೊಜೆಕ್ಟ್‌ನ ದರ್ಬೆಯಿಂದ ಬೆದ್ರಾಳದವರೆಗೆ ರಸ್ತೆ ಅಗಲೀಕರಣ ಮಾಡಲು ಅನುದಾನ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹಾಗೂ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆರವರು ಲೋಕೋಪಯೋಗಿ ಸಚಿವರಿಗೆ ಶಿಫಾರಸ್ಸು ಪತ್ರವನ್ನು ಬರೆದಿದ್ದು ಮುಂದಿನ ನಗರೋತ್ಥಾನ ಯೋಜನೆಯಡಿಯಲ್ಲಿ ಈ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಹಿಂದಿನ ನಗರೋತ್ಥಾನ ಕಾಮಗಾರಿ ಅನುದಾನದಲ್ಲಿ ಮಂಜೂರಾಗಿರುವ ಸಮಸ್ಯೆಯಿಂದ ಅನುಷ್ಟಾನವಾಗದ ರಸ್ತೆಯ ಬದಲಿಗೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈರವರ ಅಧ್ಯಕ್ಷತೆಯಲ್ಲಿ ನಡೆದಂತಹ ಸಭೆಯಲ್ಲಿ ನನ್ನ ಕೋರಿಕೆಯಂತೆ, ಶಾಸಕರ ಶಿಫಾರಸ್ಸಿನಂತೆ ಮೊಟ್ಟೆತ್ತಡ್ಕ-ಪುತ್ರಮೂಲೆ-ಬೆದ್ರಾಳದ ರೈಲ್ವೇ ಬ್ರಿಡ್ಜ್  ಸಂಪರ್ಕ ರಸ್ತೆಗೆ ಈಗಾಗಲೇ ೧.೨೫ ಕೋಟಿ ರೂ, ಸಾಮೆತ್ತಡ್ಕ-ರೋಟರಿಪುರ-ನೆಕ್ಕರೆ ರಸ್ತೆಗೆ ರೂ,೭೫ ಲಕ್ಷ ಮತ್ತು ಮಿಲಿಟರಿ ಹೋಟೆಲ್ ಬದಿಯಿಂದ ಪಾಂಗಾಳಾಯಿಗೆ ಹೋಗುವ ರಸ್ತೆಗೆ ರೂ,೭೫ ಲಕ್ಷ ಮಂಜೂರುಗೊಳಿಸಿದ್ದು  ಸಚಿವ ವಿನಯಕುಮಾರ್ ಸೊರಕೆರವರು ತನ್ನ ನಗರಾಭಿವೃದ್ಧಿ ಇಲಾಖೆಯೊಂದಿಗೆ ಅನುಮತಿ ನೀಡಿದ್ದು ಅಂದಾಜು ಪಟ್ಟಿ ತಯಾರಿಸಿ ಕೂಡಲೇ ಕಾಮಗಾರಿ ನಡೆಸಲಾಗುವುದು. ಬೆದ್ರಾಳ-ಪುತ್ರಮೂಲೆ ರಸ್ತೆ ಅಭಿವೃದ್ಧಿಗೊಂಡಲ್ಲಿ ಬೆದ್ರಾಳ-ಸಾಲ್ಮರ-ಪಡೀಲು-ಉಪ್ಪಿನಂಗಡಿ-ಮಂಗಳೂರಿಗೆ ಬದಲಿ ಬೈಪಾಸ್ ರಸ್ತೆಯು ಸಾರ್ವಜನಿಕರಿಗೆ ಅನೂಕೂಲವಾಗಿ ಪರಿಣಮಿಸುವುದು.

ಹೆಚ್.ಮಹಮ್ಮದ್ ಆಲಿ-ನಗರಸಭೆ ವಿಪಕ್ಷ ನಾಯಕ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.