ಸ್ವರಮಾಧುರ್ಯ ಅಭಿನಂದನಾ ಕಾರ್ಯಕ್ರಮ ಪುತ್ತೂರಿನ ಜನತೆಗೆ ಗಾಂಧಿಯನ್ನು ನೋಡಿಲ್ಲ ಅನ್ನುವ ಕೊರತೆಯನ್ನು ನೀಗಿಸಿದವರು ಕೋಚಣ್ಣ ರೈ-ಮಹೇಶ್ ಕಜೆ

Puttur_Advt_NewsUnder_1
Puttur_Advt_NewsUnder_1

swara

ಪುತ್ತೂರು: ಸ್ವರ ಮಾಧುರ್ಯ ಕಲಾ ಮತ್ತು ಸೇವಾ ಟ್ರಸ್ಟ್ ಪುತ್ತೂರು ಬಿರುಮಲೆ ಬೆಟ್ಟ ಅಭಿಮಾನಿ ಬಳಗ, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯ ಬಿರಮಲೆ ಸಂಯುಕ್ತಾಶ್ರಯದಲ್ಲಿ ನಡೆದ ನಿವೃತ್ತ ತಹಶೀಲ್ದಾರ್ ಕೋಚಣ್ಣ ರೈಯವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಜ. 23 ರಂದು ಬಿರುಮಲೆ ವಸತಿ ನಿಲಯದ ವಠಾರದಲ್ಲಿ ವಕೀಲ ಶ್ರೀಗಿರೀಶ್ ಮಳಿರವರು ಉದ್ಘಾಟಿಸಿದರು.

ಸಭಾ ಅಧ್ಯಕ್ಷತೆ ವಹಿಸಿದ ಸಂತ ಫಿಲೋಮಿನಾ ಕಾಲೇಜು ಕ್ಯಾಂಪಸ್ ನಿರ್ದೇಶಕ ರೆ. ಡಾ. ಆಂಟನಿ ಪ್ರಕಾಶ್ ಮೊಂತೆರೋ ಮಾತನಾಡಿದ ಕೋಚಣ್ಣ ರೈ ಅವರು ಸಾಧನೆಗಿಂತ ಜಾಸ್ತಿ ಒಳ್ಳೆಯ ಮನುಷ್ಯರು ಎಂದು ಕರೆಸಿಕೊಂಡಿದ್ದಾರೆ. ಸಮಾಜಕ್ಕಾಗಿ ಬದುಕಿ, ಸಮಾಜಕ್ಕಾಗಿ ಕೆಲಸ ಮಾಡಿದವರು ಅಭಿನಂದನೆಗೆ ಅರ್ಹರು ಎಂದು ನುಡಿದರು.

ಅಭಿನಂದನಾ ಭಾಷಣ ಮಾಡಿದ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ವಕೀಲ ಮಹೇಶ್ ಕಜೆ ಮಾತನಾಡಿ, ಪುತ್ತೂರು ಜನತೆಗೆ ಗಾಂಧಿಯನ್ನು ನೋಡಿಲ್ಲ ಅನ್ನುವ ಕೊರತೆಯನ್ನು ನೀಗಿಸಿದವರು ಸಿ.ಹೆಚ್. ಕೋಚಣ್ಣ ರೈ ಅವರು. ತತ್ವದಲ್ಲೂ, ವ್ಯಕ್ತಿತ್ವದಲ್ಲೂ ಗಾಂಧೀ ಅಂತೆ ಮನೆ ಮಾಡದೆ ಹತ್ತು ಸಾವಿರದಷ್ಟು ಮಂದಿಗೆ ಸರಕಾರದ ಮನೆ ನಿವೇಶನ ನೀಡಿದರು. ಪುತ್ತೂರಿಗೆ ರಾಷ್ಟ್ರೀಯ ಹೆದ್ದಾರಿ ಮಾಡಿ ಕೊಟ್ಟ್ಟ ಕೀರ್ತಿ ಅವರದ್ದಾಗಿದೆ ಎಂದರು. ಬೊಳುವಾರು ಸಾಂಸ್ಕೃತಿಕ ಕಲಾಕೇಂದ್ರದ ಅಧ್ಯಕ್ಷ ಚಿದಾನಂದ ಕಾಮತ್ ಕಾಸರಗೋಡು ಶುಭಹಾರೈಸಿದರು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ, ನಿವೃತ್ತ ತಹಶೀಲ್ದಾರರಾದ ಸಿ.ಹೆಚ್. ಕೋಚಣ್ಣ ರೈ ಮತ್ತು ಅವರ ಪತ್ನಿ ಸುಗುಣ ಕೆ.ರೈ ಅವರನ್ನು ರೆ.ಡಾ. ಆಂಟನಿ ಪ್ರಕಾಶ ಮೊಂತೆರೋ ಹಾಗೂ ವಕೀಲ ಶ್ರೀಗಿರೀಶ್ ಮಳಿ ಗೌರವಿಸಿದರು. ಯಂ. ಸುಬ್ರಾಯ ಅಮ್ಮಣ್ಣಾಯ ಪ್ರಾರ್ಥನೆ ಹಾಡಿದರು.

ಸ್ವರ ಮಾಧುರ್ಯ ಸಂಸ್ಥೆ ನಿರ್ದೇಶಕ ನ್ಯಾಯವಾದಿ ಜನಾರ್ದನ ಬೆಟ್ಟಂಪಾಡಿ ಸ್ವಾಗತಿಸಿ, ಪ್ರೊ. ಎಂ. ದತ್ತಾತ್ರೇಯ ರಾವ್ ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿದರು. ಡಾ. ಗೌರಿ ಪೈ, ಡಾ. ಸತ್ಯವತಿ ಆಳ್ವ, ಡಾ. ಅರುಣ್ ಪ್ರಕಾಶ್, ದಯಾನಂದ ಪಿ., ನವ್ಯಾ ಗಿರೀಶ್ ಮಳಿ, ನಿಲಯ ಮೇಲ್ವಿಚಾರಕ ತಾರನಾಥ ಅತಿಥಿಗಳಿಗೆ ಹೂನೀಡಿ ಸ್ವಾಗತಿಸಿದರು. ನಿತಿನ್ ಪಕಳ ಅತಿಥಿಗಳಿಗೆ ಸ್ಮರಣಿಕೆ ನೀಡಿದರು. ನಿಲಯದ ವಿದ್ಯಾರ್ಥಿ ನವೀನ್ ಕುಮಾರ್ ವಂದಿಸಿದರು. ವಕೀಲ ಜಯಾನಂದ ಕೆ. ಕಾರ್ಯಕ್ರಮ ನಿರೂಪಿಸಿದರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.