ಉಪ್ಪಿನಂಗಡಿ ಸರಕಾರಿ ಪ.ಪೂ ಕಾಲೇಜಿನಲ್ಲಿ ಸೈಬರ್ ಸೇಪ್ಟಿ ಕಾರ್ಯಾಗಾರ

Puttur_Advt_NewsUnder_1
Puttur_Advt_NewsUnder_1

IMG_5230

ಪುತ್ತೂರು :  ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು, ವಿಜ್ಞಾನ ಕೇಂದ್ರ ಸರಕಾರಿ ಪದವಿ ಪೂರ್ವ ಕಾಲೇಜು ಉಪ್ಪಿನಂಗಡಿ ವತಿಯಿಂದ ಗೂಗಲ್ ವೆಬ್ ರೇಂಜಸ್ ಮಂಗಳೂರು ಇವರ ಸಹಯೋಗದಲ್ಲಿ ಸೈಬರ್ ಸೇಪ್ಟಿ ಕಾರ್ಯಾಗಾರ ನಡೆಯಿತು.

ಇಂಟರ್‌ನೆಟ್ ಬಳಕೆಯಿಂದ ಅಪಾರ ಜ್ಞಾನಗಳಿಸಲು ಸಾಧ್ಯವಿದ್ದರೂ ಇದರ ದುರ್ಬಳಕೆಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಎಲ್ಲರೂ ಎಚ್ಚರ ವಹಿಸಬೇಕೆಂದು ಗೂಗಲ್ ಸಾರ್ವಜನಿಕ ಸಂಪರ್ಕಾಧಿಕಾರಿ ವಿಕ್ರಮ್ ಕುಂಟಾರು ತಿಳಿಸಿದರು.

ಕ್ಷೇತ್ರಶಿಕ್ಷಣಾಧಿಕಾರಿ ಶಶಿಧರ್.ಜಿ.ಯಸ್, ಶಿಕ್ಷಣ ಸಂಯೋಜಕ ಉದಯಶಂಕರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಉಪಪ್ರಾಂಶುಪಾಲ ದಿವಾಕರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನ ಸಂಚಾಲಕ ಶ್ರೀಧರ ಭಟ್ ಸ್ವಾಗತಿಸಿ, ಹಸೀನಾ ಪರ್ವೀನ್ ವಂದಿಸಿದರು. ಸಿಂಧೂ.ವಿ.ಕೆ ಕಾರ್ಯಕ್ರಮ ನಿರ್ವಹಿಸಿದರು. ಉಪ್ಪಿನಂಗಡಿ, ಕಡಬ ವಲಯದ 12 ಪ್ರೌಢಶಾಲೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.