Breaking News

ವಿಟ್ಲ: ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿಯಿಂದ ಪ್ರತಿಭಟನೆ

Puttur_Advt_NewsUnder_1
Puttur_Advt_NewsUnder_1

25vtl1 prathibatneವಿಟ್ಲ: ವಿಟ್ಲ ಕಸಬಾ ಗ್ರಾಮದಲ್ಲಿ ಪಂಚಾಯಿತಿ ನಿರ್ಣಯದಂತೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಭವನಕ್ಕೆ ಕಾದಿರಿಸಿದ ಸ್ಥಳದಲ್ಲಿ ಭವನ ನಿರ್ಮಿಸುವ ಉದ್ದೇಶದಿಂದ ಪಹಣಿ ಪತ್ರದಲ್ಲಿ ಹೆಸರು ದಾಖಲಿಸಲು ಕಡತವನ್ನು ಕಂದಾಯ ಇಲಾಖೆಯಲ್ಲಿಯೇ ವಿಳಂಬ ಮಾಡಿರುವುದನ್ನು ಖಂಡಿಸಿ ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ನೇತೃತ್ವದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಸಾರ್ವಜನಿಕರು ಜ.24ರಂದು ಕಾದಿರಿಸಿದ ಸ್ಥಳದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿ ಪ್ರತಿಭಟನೆ ನಡೆಸಿದರು.

ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಕೆ ಸೇಸಪ್ಪ ಬೆದ್ರಕಾಡು ಮಾತನಾಡಿ ವಿಟ್ಲ ಕಸಬಾ ಗ್ರಾಮ ಪಂಚಾಯಿತಿ ಅಂಬೇಡ್ಕರ್ ಭವನ ನಿರ್ಮಿಸಲು ನಿರ್ಣಯ ಕೈಗೊಂಡು ಸರ್ವೇ ಕಾರ್ಯ ನಡೆಸಿತ್ತು. ಆದರೆ ಪಹಣಿ ಪತ್ರದಲ್ಲಿ ಹೆಸರು ದಾಖಲಿಸಲು ತಾಲ್ಲೂಕು ಕಚೇರಿಯಲ್ಲಿ ಕಡತವಿದ್ದು, 2012-13 ವರೆಗೂ ಕಡತ ತಾಲ್ಲೂಕು ಕಚೇರಿಯಲ್ಲಿ ಉಳಿದುಕೊಂಡಿದೆ. ಪಹಣಿ ಹೆಸರು ದಾಖಲಿಸಲು ಮೇಲಾಧಿಕಾರಿಗಳಿಗೆ ಕಳುಹಿಸದ ಕಾರಣ ಇದುವರೆಗೂ ಯಾವುದೇ ಕಾರ್ಯ ನಡೆದಿಲ್ಲ. ಕಂದಾಯ ಇಲಾಖೆಯ ನಿರ್ಲಕ್ಷ್ಯದಿಂದ ಇದುವರೆಗೂ ಭವನದ ಯಾವುದೇ ಕಾರ್ಯ ನಡೆದಿಲ್ಲ. ಆದುದರಿಂದ ಈ ಸ್ಥಳದಲ್ಲಿ ಸತ್ತ ಪ್ರಾಣಿಗಳನ್ನು ಹೂಳುವುದು, ಕಸ ತ್ಯಾಜ್ಯಗಳನ್ನು ಹಾಕುವುದರಿಂದ ಈ ಜಾಗ ಅತಿಕ್ರಮಣವಾಗುತ್ತಿದೆ ಎಂದು ದೂರಿದರು.
ತಿಮ್ಮಯ್ಯ ಪಂಡಿತ್ ಅವರು ಸ್ಥಳದಲ್ಲಿ ತೆಂಗಿನಕಾಯಿ ಒಡೆಯುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಿದರು. ಸ್ಥಳದಲ್ಲಿ ಯಾರೂ ಕಸ ತ್ಯಾಜ್ಯಗಳನ್ನು ಹಾಕಬಾರದು ಎಂದು ನಾಮಫಲಕ ಹಾಕಲಾಯಿತು. ಬಳಿಕ ಪ್ರತಿಭಟನಾಕಾರು ಸ್ಥಳದಲ್ಲಿ ಸ್ವಚ್ಛತೆ ಕಾರ್ಯ ನಡೆಸಿ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿದರು. ಮುಂದಿನ ದಿನಗಳಲ್ಲಿ ಕಂದಾಯ ಇಲಾಖೆ ಇದೇ ರೀತಿ ಅಂಬೇಡ್ಕರ್ ಭವನದ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಅದರ ವಿರುದ್ಧ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ವಿಟ್ಲ ಪೊಲೀಸರು ಬಿಗೀ ಬಂದೋ ಬಸ್ತ್ ಏರ್ಪಡಿಸಿದ್ದರು.
ದಲಿತ್ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಯು ವಿಟ್ಲ, ನೆಟ್ಲ ಮುಡ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯ, ಸಿಐಟಿಯು ಮುಖಂಡ ರಾಮಣ್ಣ ವಿಟ್ಲ, ನಳಿಕೆ ಸಂಘದ ಅಧ್ಯಕ್ಷ ರಾಮಣ್ಣ ಪಿಲಿಂಜ, ಪುತ್ತೂರು ತಾಲ್ಲೂಕು ದಲಿತ್ ಸೇವಾ ಸಮಿತಿ ಅಧ್ಯಕ್ಷ ಗಿರಿಧರ್ ನಾಯ್ಕ, ಸುರೇಶ್ ಜಿ, ಮೋಹನ್ ದಾಸ್ ವಿಟ್ಲ, ಕಮಾಲೇಶ್ ಎನ್, ಹರೀಶ್ ಪಡೀಲ್, ವಸಂತ ಸಿಐಟಿಯು, ಕೊರಗಪ್ಪ ಪಂಡಿತ್, ಕೃಷ್ಣಪ್ಪ ಸಾಲ್ಯಾನ್, ಲಿಂಗಪ್ಪ ಹಿರೇಬಂಡಾಡಿ, ಕೇಶವ ಕಬಕ, ಎಂ ಶೀನಾ ಪುತ್ತೂರು, ಯಾಮಿನಿ, ಚಂದ್ರವತಿ ಮಾಣಿಲ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.