ವಗೆನಾಡು ಶ್ರೀ ಸುಬ್ರಾಯದೇವಸ್ಥಾನದಲ್ಲಿ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ 

Puttur_Advt_NewsUnder_1
Puttur_Advt_NewsUnder_1

25vtl3 horekanikeವಿಟ್ಲ: ವಗೆನಾಡು ಶ್ರೀ ಸುಬ್ರಾಯದೇವಸ್ಥಾನದಲ್ಲಿ ನಡೆಯುವ  ಶ್ರೀ ಗಣಪತಿ ಸಹಿತ ಶ್ರೀ ಸುಬ್ರಾಯದೇವರ ಬಿಂಬಗಳ ಪುನರ್ ಪ್ರತಿಷ್ಠೆಯ ಅಂಗವಾಗಿ ಜ.24ರಂದು ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಿತು.

ಮಂಗಳೂರು, ತೊಕ್ಕೊಟ್ಟು, ಮುಡಿಪು, ಬಾಕ್ರಬೈಲು, ಮಂಜೇಶ್ವರ, ಸುಂಕದಕಟ್ಟೆ, ಮಜಿರ್‌ಪಳ್ಳ, ಗುವೆದಪಡ್ಪು, ಇರಾ ಭಾಗಗಳಿಂದ ಆಗಮಿಸುವ ವಾಹನಗಳು ಕುಡ್ಪಲ್ತಡ್ಕ ಭಜನಾ ಮಂದಿದರದ ಬಳಿಯಲ್ಲಿ ಸೇರಿ ಅಲ್ಲಿಂದ ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರಕ್ಕೆ ತೆರಳಿ ಅಲ್ಲಿಂದ ಪುತ್ತೂರು, ಬೊಳಂತೂರು, ವೀರಕಂಭ, ಮಂಚಿ, ವಿಟ್ಲ, ಮಾಣಿ, ಪೆರಾಜೆ, ನೆಟ್ಲಮುಡ್ನೂರು, ಅನಂತಾಡಿ, ಪೆರುವಾಯಿ, ಮಾಣಿಲ, ಪುಣಚ, ಕೇಪು ಭಾಗಗಳಿಂದ ಬಂದ ವಾಹನಗಳು ಕನ್ಯಾನದಲ್ಲಿ ಸೇರಿ ಮುಂದಕ್ಕೆ ಎಲ್ಲಾ ವಾಹನಗಳು ಒಟ್ಟಾಗಿ ಶ್ರೀ ಗುರುದೇವದತ್ತ ಸಂಸ್ಥಾನಮ್ ಒಡಿಯೂರು ಕ್ಷೇತ್ರಕ್ಕೆ ಆಗಮಿಸಿ ಮಿತ್ತನಡ್ಕ ಶ್ರೀ ಮಲರಾಯಿ ದೈವಸ್ಥಾನದಲ್ಲಿ ಒಟ್ಟು ಸೇರಿ ಭವ್ಯ ಶೋಭಯಾತ್ರೆಯ ಮೂಲಕ ಶ್ರೀ ವಗೆನಾಡು ಕ್ಷೇತ್ರ ಹಸಿರುವಾಣಿಯನ್ನು ಕೊಂಡೊಯ್ಯಲಾಯಿತು.
ಸಂಜೆ ಸಾಮೂಹಿಕ ಪ್ರಾರ್ಥನೆ, ಪ್ರಾಸಾದಿಗಳ ಪರಿಗ್ರಹ, ಆಚಾರ್ಯಾದಿ ಋತ್ವಿಗ್ವರಣೆ, ಅಂಕುರಾರೋಹಣ, ವಾಸ್ತು ಹೋಮ, ವಾಸ್ತು ಬಲಿ ಮೊದಲಾದ ವೈದಿಕ ವಿಧಿ ವಿಧಾನಗಳು ನಡೆಯಿತು.
ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕಣಿಯೂರು ಶ್ರೀ ಚಾಮುಂಡೇಶ್ವರೀ ಕ್ಷೇತ್ರದ ಮಹಾಬಲ ಸ್ವಾಮೀಜಿ, ಸಾಧ್ವೀ ಶ್ರೀ ಮಾತಾನಂದಮಯೀ, ಆಡಳಿತ ಮೊಕ್ತೇಸರ ಮುಗುಳಿ ತಿರುಮಲೇಶ್ವರ ಭಟ್, ಪಟ್ಲಗುತ್ತು ಮಹಾಬಲ ಶೆಟ್ಟಿ, ಅಧ್ಯಕ್ಷ ಒ. ಶ್ಯಾಮ ಭಟ್ ಒಡಿಯೂರು, ಕಾರ್ಯಾಧ್ಯಕ್ಷ ಟಿ. ಪ್ರದೀಪ ಶೆಟ್ಟಿಗುಬ್ಯಗುತ್ತು, ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ ಶೆಟ್ಟಿ ಅನೆಯಾಲಗುತ್ತು, ಕೋಶಾಧಿಕಾರಿ ದಿನೇಶ್ ಶೆಟ್ಟಿ ಪಟ್ಲಗುತ್ತು, ಆರ್ಥಿಕ ಸಮಿತಿ ಪ್ರಧಾನ ಪ್ರಸಿದ್ಧ ಭಾಗವತ ಸತೀಶ ಶೆಟ್ಟಿ ಪಟ್ಲಗುತ್ತು, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಪಟ್ಲಗುತ್ತು ಮಹಾಬಲ ಶೆಟ್ಟಿ, ಕಾರ್ಯಾಧ್ಯಕ್ಷ ಟಿ.ತಾರಾನಾಥ ಕೊಟ್ಟಾರಿ, ಪ್ರಧಾನ ಕಾರ್ಯದರ್ಶಿ ವಿಘ್ನೇಶ್ವರ ಭಟ್ ಅನೆಯಾಲಕೋಡಿ, ಕೋಶಾಧಿಕಾರಿ ಬಾಲಕೃಷ್ಣ ಶೆಟ್ಟಿ ಅನೆಯಾಲ ಮಂಟಮೆ, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.