Breaking News

ಶಾಂತಿ ಸೌಹಾರ್ಧತೆಯನ್ನು ಇಸ್ಲಾಂ ಗೌರವಿಸುತ್ತದೆ – ಡಾ ಕೆ.ಎಂ. ಶಾಹ್ ಮುಸ್ಲಿಯಾರ್.

Puttur_Advt_NewsUnder_1
Puttur_Advt_NewsUnder_1

IMG-20160125-WA0006ಪುತ್ತೂರು : ಶಾಂತಿ ಸೌಹಾರ್ಧತೆಯನ್ನು ಇಸ್ಲಾಂ ಗೌರವಿಸುತ್ತದೆ, ಅಕ್ರಮ ಅನಾಚಾರಗಳನ್ನು ವಿರೋಧಿಸುತ್ತದೆ, ನೂತನವಾದಿಗಳ ಪೊಳ್ಳುವಾದವನ್ನು ಕೂಡಾ ಸುನ್ನತ್ ಜಮಾತ್ ವಿರೋಧಿಸುತ್ತದೆ. ಎಂದು ಗಂಡಿಬಾಗಿಲು ಖುತುಬಿಯ್ಯಾ ಜಮಾ ಮಸೀದಿ, ಹಿಮಾಯತುಲ್ ಇಸ್ಲಾಂ ಕಮಿಟಿ ಖುತುಬಿಯ್ಯತ್ ನೇರ್ಚೆಯ 42ನೇ ವಾರ್ಷಿಕೋತ್ಸವದ ಸಮಾರೋಪ ಕಾರ್ಯಕ್ರಮದ ಉದ್ಘಾಟಣಾ ಹಾಗೂ ದುವಾ ನೆರವೇರಿಸಿ ಬಳಿಕ ಮಾತನಾಡಿದ ಡಾ ಕೆ.ಎಂ. ಶಾಹ್ ಮುಸ್ಲಿಯಾರ್ ಅವರು ಅಭಿಪ್ರಾಯ ವ್ಯಕ್ತ ಪಡಿಸಿದರು.ಪ್ರಾಸಾವಿಕವಾಗಿ ಮಾತನಾಡಿದ ಸಯ್ಯದ್ ಅನಸ್ ತಂಙಳ್ ಅಲ್ ಅಝ್‌ಹರಿ, ಖತೀಬರು, ಗಂಡಿಬಾಗಿಲು, ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣಗಾರರಾಗಿ  ಹಾಫಿಳ್ ನಿಝಾಮುದ್ದೀನ್ ಅಝ್‌ಹರಿ ಅಲ್‌ಖಾಸಿಮಿ, ಕೇರಳ ಇಸ್ಲಾಮಿನಲ್ಲಿ ಮಹಿಳೆಯರು ಎಂಬ ವಿಚಾರದ ಬಗ್ಗೆ ಮಾತನಾಡಿದರು ಕಾರ್ಯಕ್ರಮದಲ್ಲಿ ಅಸಯ್ಯದ್ ಮಹಮ್ಮದ್ ಜುನೈದ್ ಜಿಫ್ರೀ ತಂಙಳ್, ಮುದರ್ರಿಸ್ ಬಿ.ಜೆ.ಎಂ. ಆತೂರು, ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ  ಬಿ.ಯಂ ಹನೀಫ್ ಫೈಝಿ, ಖತೀಬರು, ಯಂ.ಜೆ.ಯಂ ಆತೂರು, ಇಬ್ರಾಹೀಂ ಮುಸ್ಲಯಾರ್, ಸದರ್ ಮುಅಲ್ಲಿಂ ಆತೂರು ಬೈಲು,  ಹಮೀದ್ ಮುಸ್ಲಿಯಾರ್, ಸದರ್ ಮುಅಲ್ಲಿಂ ನೀರಾಜೆ,  ಯು.ಎ ಹಮೀದ್ ಮುಸ್ಲಿಯಾರ್, ಮುಅಲ್ಲಿಂ, ಗಂಡಿಬಾಗಿಲು,  ಪಿ. ಯಾಕುಬ್ ಪಾಲ್ತಾಜೆ, ಅಧ್ಯಕ್ಷರು, ಜುಮಾ ಮಸೀದಿ ಗಂಡಿಬಾಗಿಲು,  ಯನ್. ಪೊಡಿಕುಂಞ್ಞ ನಿರಾಜೆ ಅಧ್ಯಕ್ಷರು ನೂರುಲ್ ಹುದಾ ಮದ್ರಸ,  ಅಬ್ಬಾಸ್ ಭೂಮಿಕ, ಅಧ್ಯಕ್ಷರು, ಜುಮಾ ಮಸೀದಿ ಹಳೇನೇರಂಕಿ, ಹಾಜಿ ಅಬ್ದುಲ್ ರಹ್ಮಾನ್ ಕೊಳ್ಳೆಜಾಲ್, ಅಧ್ಯಕ್ಷರು, ಮದ್ರಸ ಮೆನೇಜ್ಮೆಂಟ್ ಉಪ್ಪಿನಂಗಡಿ ರೇಂಜ್,  ಜಿ. ಯೂಸುಫ್ ಹಾಜಿ ಗಂಡಿಬಾಗಿಲು, ಸಲಹ ಸಮಿತಿ,  ಅಬ್ಬಾಸ್ ಹಾಜಿ ಮರುವೇಲು, ಸಲಹ ಸಮಿತಿ. ಕಾರ್ಯಕ್ರಮದ ಸಂಚಾಲಕರಾಗಿ ಯಸ್.ಪಿ ನಿಝಾರ್, ಎಸ್.ಪಿ ಖಲಂಧರ್, ಮುಸ್ತಾಫಾ ಪಂರ್ದಾಜೆ, ಲತೀಫ್ ಗಂಡಿಬಾಗಿಲು, ಹೈದರ್ ಮರ್‌ವೇಲ್, ಉಬೈದ್ ಸಿಟಿ ಬಜಾರ್, ಜಮಾಲ್, ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಜಮಾತ್ ಕಮಿಟಿಯ ಕಾರ್ಯದರ್ಶಿ ಜಿ. ಮಹಮ್ಮದ್ ರಫೀಕ್ ಸ್ವಾಗತಿಸಿ, ಸದರ್ ಮುಅಲ್ಲಿಂ,  ಜಿ.ಪಿ ಇಸ್ಮಾಯಿಲ್ ದಾರಿಮಿ ವಂದಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.