ಕಡಬದಲ್ಲಿ ಹೊನಲು ಬೆಳಕಿನ ಷಟಲ್ ಬ್ಯಾಡ್ಮಿಂಟನ್ ಪಂದ್ಯಾಟ

Puttur_Advt_NewsUnder_1
Puttur_Advt_NewsUnder_1

honalu belakina pandyataಕಡಬ: ಇಲ್ಲಿಯ ಹಳೆಸ್ಟೇಶನ್‌ನಲ್ಲಿ ಫ್ರೆಂಡ್ಸ್ ಷಟಲ್ ಕಾಕ್ ಬ್ಯಾಡ್ಮಿಂಟನ್ ಕ್ಲಬ್ ವತಿಯಿಂದ ಜ.23ರಂದು ಹೊನಲು ಬೆಳಕಿನ ಮುಕ್ತ ಷಟಲ್ ಕಾಕ್ ಬ್ಯಾಡ್ಮಿಂಟನ್ ಪಂದ್ಯಾಟ ನಡೆಯಿತು. ಪಂದ್ಯಾಟವನ್ನು ನಿವೃತ್ತ ಫಾರೆಸ್ಟರ್ ಕ್ಲಬ್‌ನ ಹಿರಿಯರಾದ ಎಲ್ಯಣ್ಣ ಪೂಜಾರಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಶುಭಹಾರೈಸಿದರು. ಕ್ಲಬ್ ಸದಸ್ಯರಾದ ರಾಮ್‌ಗೋಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿ ಪಂದ್ಯಾಟಕ್ಕೆ ಆಗಮಿಸಿದ ಊರಿನ ಪರವೂರಿನ ಎಲ್ಲಾ ಕ್ರೀಡಾಪಟುಗಳು ಹಾಗೂ ವೀಕ್ಷಕರ ಸಹಕಾರವನ್ನು ಸದಾ ಬಯಸುತ್ತಾ ಮುಂದೆಯೂ ತಮ್ಮೆಲ್ಲರ ಸಹಕಾರ ಸದಾ ಇರಲಿ ಎಂದು ಆಶಿಸಿದರು. ಉಮೇಶ್ ನಾಕ್, ಪರಮೇಶ್, ಜನಜಾಗೃತಿ ವೇದಿಕೆ ಅಧ್ಯಕ್ಷ ಗಣೇಶ್ ಕೈಕುರೆ ಉಪಸ್ಥಿತರಿದ್ದರು. ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕಿನಾದ್ಯಂತ ಸುಮಾರು 62 ತಂಡಗಳು ಆಗಮಿಸಿದ್ದವು. ಉಜಿರೆ ಎಸ್.ಡಿ.ಎಂ ತಂಡ ಪ್ರಥಮ ಸ್ಥಾನ ಗಳಿಸಿ ರೂ.2222 ಹಾಗೂ ಶಾಶ್ವತ ಫಲಕ ಪಡೆದುಕೊಂಡರೆ ಸುಳ್ಯ ಮಹೇಶ್ ತಂಡವು ದ್ವಿತೀಯ ಸ್ಥಾನ ಪಡೆದು ರೂ1111 ಮತ್ತು ಶಾಶ್ವತ ಫಲಕ ಪಡೆದುಕೊಂಡರು.
ಕ್ಲಬ್‌ನ ಸದಸ್ಯ ರಮೇಶ್ ನಾಕ್ ಸ್ವಾಗತಿಸಿ, ಶಿಕ್ಷಕ ಗೋವಿಂದ ನಾಕ್ ಕಾರ್‍ಯಕ್ರಮ ನಿರೂಪಿಸಿದರು. ಶೇಖರ್ ಅತ್ರಿ ವಂದಿಸಿದರು. ಗಣೇಶ್ ನಡುವಾಳ್ ಪಂದ್ಯಾಟದ ವೀಕ್ಷಕ ವಿವರಣೆಯನ್ನು ನೀಡಿದರು. ದೈಹಿಕ ಶಿಕ್ಷಕರಾದ ರಾಜೇಶ್, ಸಮದ್ ಮತ್ತು ಅಬ್ದುಲ್ ಖಾದರ್ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.