ಕುಮ್ಕಿ ಜಮೀನು ಮಂಜೂರಾತಿ ಕೋರಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲು ನಿರ್ಧಾರ-  ಭಾ.ಕಿ.ಸಂ. ಕಾರ್ಯಾಲಯದಲ್ಲಿ ತಾಲೂಕಿನ ಕುಮ್ಕಿದಾರರ ಸಭೆ

kumki

ಚಿತ್ರ:ಶಶಿಧರ ಜಿ.ಎಸ್.

*ಕುಮ್ಕಿ ಜಮೀನು ರೈತರ ಹಕ್ಕು, ಪುತ್ತೂರಿನಲ್ಲಿ 1.52ಲಕ್ಷ ಎಕ್ರೆ ಕುಮ್ಕಿ ಇದೆ, ಕುಮ್ಕಿ  ಭೂಮಿಯಲ್ಲಿ ಕೃಷಿ ಇದ್ದರೆ ತಪ್ಪಲ್ಲಎಂಜಿ ಸತ್ಯನಾರಾಯಣ

*ಜನಪ್ರತಿನಿಧಿಗಳು ರೈತರ ರಕ್ಷಣೆಗೆ ಬರಬೇಕುಸುಬ್ರಾಯ ಬಿ.ಎಸ್.

*ಸರಕಾರಕ್ಕೆ ಮನವಿಗೆ ನಿರ್ಧಾರ

*ಕರುಡು ಅಧಿಸೂಚನೆ ಜಾರಿಗೆ ಒತ್ತಾಯ

ಪುತ್ತೂರು: ಕುಮ್ಕಿ ಸವಲತ್ತನ್ನು ಕದೀಂದಾರ ರೈತರಿಗೇ ಮಂಜೂರುಗೊಳಿಸುವಂತೆ ಕೋರಿ ಹೈಕೋರ್ಟ್‌ನಲ್ಲಿ ಹೊಸ ರಿಟ್ ಅರ್ಜಿ ಸಲ್ಲಿಸಿ ನ್ಯಾಯಾಂಗ ಹೋರಾಟ ನಡೆಸಲು ಜ.೨೫ರಂದು ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ಸಂಘದ ಕಾರ್ಯಾಲಯದಲ್ಲಿ ನಡೆದ ತಾಲೂಕಿನ ಕುಮ್ಕಿದಾರರ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಪೋಳ್ಯದ ಕೆ.ಶ್ಯಾಮ್ ಭಟ್‌ರವರು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿ ೨೦೧೬ರ ಜ.೪ರಂದು ನೀಡಿದ ತೀರ್ಪಿನಲ್ಲಿ, ಸಾರ್ವಜನಿಕ/ಸರಕಾರಿ ಉದ್ಧೇಶಕ್ಕೆ ಅಗತ್ಯ ಬಿದ್ದರೆ ಜಿಲ್ಲಾಧಿಕಾರಿಯವರು ಕುಮ್ಕಿ ಜಮೀನನ್ನು ವಿರಹಿತಪಡಿಸಬಹುದು ಎಂದು ಹೈಕೋರ್ಟ್‌ನ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದ ಹಿನ್ನೆಲೆಯಲ್ಲಿ ಈ ಸಭೆ ನಡೆಸಲಾಯಿತು.

ಕುಮ್ಕಿ ಜಮೀನು ರೈತರ ಹಕ್ಕು: ಕುಮ್ಕಿ ಜಮೀನು ರೈತರ ಆಸ್ತಿ ಹಕ್ಕು ಎಂದು ಸುಪ್ರೀಂ ಕೋರ್ಟ್ ೧೯೭೬ರಲ್ಲಿ ತೀರ್ಪು ನೀಡಿದೆ. ಕುಮ್ಕಿ ಸವಲತ್ತು ರೈತರ ಕೃಷಿಗೆ ಅಗತ್ಯ. ಅದು ನಮ್ಮ ಹಕ್ಕು. ಅಕ್ರಮ ಸಕ್ರಮದಲ್ಲಿ ಪಕ್ಕಾ ಸರಕಾರಿ ಭೂಮಿಯನ್ನು ಸರಕಾರ ಮಂಜೂರು ಮಾಡಿದೆ. ಹಾಗಿರುವಾಗ ೧೩೦ ವರ್ಷಗಳಿಂದ ಕೃಷಿ ಚಟುವಟಿಕೆಗೆ ಬಳಸಿಕೊಂಡು ಬರುತ್ತಿರುವ ಕುಮ್ಕಿ ಜಮೀನನ್ನು ರೈತರಿಗೆ ನೀಡಲು ಸರಕಾರ ಯಾಕೆ ಹಿಂದೇಟು ಹಾಕುತ್ತಿದೆ ಎಂದು ಕುಮ್ಕಿ ಹೋರಾಟಗಾರರ ಸಂಘದ ಮುಖಂಡ ಎಂ.ಜಿ. ಸತ್ಯನಾರಾಯಣರವರು ಹೇಳಿದರು.

ಕುಮ್ಕಿ ಭೂಮಿಯಲ್ಲಿ ಕೃಷಿ ಇದ್ದರೆ ತಪ್ಪಲ್ಲ: ಕುಮ್ಕಿ ಜಮೀನಿನಲ್ಲಿ ಕೃಷಿ ಮಾಡುವುದು, ಮನೆ ನಿರ್ಮಿಸಿಕೊಳ್ಳುವುದು ತಪ್ಪಲ್ಲ. ಹೈಕೋರ್ಟ್‌ನ ರಿಟ್ ಅಪೀಲು ಸಂಖ್ಯೆ ೨೧೯೨/೯೮ರಲ್ಲಿ ೧೯೯೯ರ ಜ.೧೨ರಂದು ತೀರ್ಪಿನಲ್ಲಿ ವಿಭಾಗೀಯ ಪೀಠ ಕೊಟ್ಟಿರುವ ತೀರ್ಪಿನ ಪ್ರಕಾರ ಕುಮ್ಕಿ ಜಮೀನಿನಲ್ಲಿ ಕೃಷಿ ಮಾಡಿರುವುದು ಅಕ್ರಮ ಅಲ್ಲ.  ಮದ್ರಾಸು ಸರಕಾರದ ಕುಮ್ಕಿ ರೂಲ್ಸ್‌ನ ಪ್ರಕಾರ ಕುಮ್ಕಿ ಜಮೀನಿನಲ್ಲಿ ಕೃಷಿ ಮಾಡುವುದು ಅಕ್ರಮವೆನಿಸುವುದಿಲ್ಲ. ಕುಮ್ಕಿ ಅನುಭೋಗದಾರ ರೈತರಿಗೆ ಕಾನೂನಿನಲ್ಲಿ ಹಲವು ಅವಕಾಶ ಇದೆ ಎಂದು ಎಂ.ಜಿ.ಸತ್ಯನಾರಾಯಣ ಹೇಳಿದರು.

ಸರಕಾರ ಸುಪ್ರೀಂಕೋರ್ಟ್‌ನಲ್ಲಿ ದಾರಿ ತಪ್ಪಿಸಿದೆ: ಕುಮ್ಕಿ ಜಮೀನನ್ನು ರೈತರಿಗೆ ಮಂಜೂರು ಮಾಡುವ ಬಗ್ಗೆ ಸರಕಾರಕ್ಕೆ ಇಚ್ಚಾಶಕ್ತಿಯ ಕೊರತೆ. ಕರಡು ಅಧಿಸೂಚನೆಯನ್ನು ಜಾರಿಗೆ ತಂದಿಲ್ಲ. ಮಂಜೂರು ಮಾಡ್ತೇನೆ ಅಂತ ಹೇಳುತ್ತಾ ಬಂದು, ಸುಪ್ರೀಂಕೋರ್ಟ್‌ನಲ್ಲಿ ರೈತರಿಗೆ ವಿರುದ್ಧವಾಗಿ ಅಫಿದವಿತ್ ಸಲ್ಲಿಸಿದೆ. ಈ ಮೂಲಕ ಸರಕಾರ ಸುಪ್ರೀಂಕೋರ್ಟ್‌ನಲ್ಲಿ ದಾರಿ ತಪ್ಪಿಸಿದೆ ಎಂದು ಕುಮ್ಕಿ ಹೋರಾಟಗಾರರ ಸಂಘದ ಮುಖಂಡ ರಾಮಚಂದ್ರ ನೆಕ್ಕಿಲರವರು ಹೇಳಿದರು.

ಜನಪ್ರತಿನಿಧಿಗಳು ಮೌ: ಕುಮ್ಕಿ ಮಂಜೂರಾತಿ ಕರಡು ಅಧಿಸೂಚನೆ ಜಾರಿಗೆ ದ.ಕ. ಜಿಲ್ಲೆಯ ಎಲ್ಲಾ ಶಾಸಕರನ್ನು ಸಂಪರ್ಕಿಸಿ ಮನವಿ ನೀಡಲಾಗಿದೆ. ಯಾರೊಬ್ಬರೂ ರೈತರ ಪರ ಧ್ವನಿ ಎತ್ತುತ್ತಿಲ್ಲ. ರೈತರ ಕುಮ್ಕಿಯನ್ನು ವಶಪಡಿಸಿಕೊಳ್ಳುತ್ತೇನೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ರೈತರಲ್ಲಿ ಆತಂಕ ಇದೆ. ರೈತರು ಅನಿವಾಂiiವಾಗಿ ಕುಮ್ಕಿಯಲ್ಲಿ ಕೃಷಿ ಮಾಡಿದ್ದಾರೆ. ಮನೆ ಕಟ್ಟಿದ್ದಾರೆ. ರೈತರ ರಕ್ಷಣೆಗೆ ಜನಪ್ರತಿನಿಧಿಗಳು ಮುಂದಾಗಬೇಕು ಎಂದು ಭಾಕಿಸಂ ಜಿಲ್ಲಾ ಪ್ರ.ಕಾಯದರ್ಶಿ ಸುಬ್ರಾಯ ಬಿ.ಎಸ್.ಯವರು ಹೇಳಿದರು.

ಪುತ್ತೂರಿನಲ್ಲಿ ೧.೫೨ಲಕ್ಷ ಎಕ್ರೆ ಕುಮ್ಕಿ ಇz: ಪುತ್ತೂರು ತಾಲೂಕಿನಲ್ಲಿ ೧.೫೨ಲಕ್ಷ ಎಕ್ರೆ ಕುಮ್ಕಿ ಇದೆ. ಇದು ಸರಕಾರ ನೀಡಿದ ಮಾಹಿತಿ. ಕದೀಂದಾರರು ತಮ್ಮ ಕುಮ್ಕಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿ ಇಡಿ. ನಾವು ಎಲ್ಲಾ ರೀತಿಯ ಸಂಘಟಿತ ಹೋರಾಟಕ್ಕೆ ಸಿದ್ಧರಾಗಬೇಕು. ನ್ಯಾಯಾಂಗ ಹೋರಾಟಕ್ಕೆ ಸಾಕಷ್ಟು ಖರ್ಚು ಇದೆ. ಕುಮ್ಕಿದಾರರು ತನು-ಮನ-ಧನಗಳಿಂದ ಸಹಕರಿಸಬೇಕು ಎಂದು ಎಂ.ಜಿ. ಸತ್ಯನಾರಾಯಣ ಹೇಳಿದರು.

ವೇದಿಕೆಯಲ್ಲಿ ಭಾಕಿಸಂ ಮುಖಂಡ ಬಿ.ಕೆ. ರಮೇಶ್‌ರವರು ಉಪಸ್ಥಿತರಿದ್ದರು. ಹೈಕೋರ್ಟ್‌ನಲ್ಲಿ ರಿಟ್ ಸಲ್ಲಿಸಲು ಹಣಕಾಸು ನೆರವು ನೀಡಲು  ಸಿದ್ಧ ಎಂದು ಉಪಸ್ಥಿತರಿದ್ದ ಕುಮ್ಕಿದಾರರು ಹೇಳಿದರು. ಎಲ್ಲಾ ಕುಮ್ಕಿದಾರರು ಸಹಕರಿಸಬೇಕು ಎಂದು ಸಭಿಕರು ಹೇಳಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.