Breaking News

ಪಂಜದ ಜಯಾನಂದ್ ಕೊಲೆ ಪ್ರಕರಣ ಆರೋಪಿಗಳ ಜಾಮೀನು ಅರ್ಜಿ ಎರಡನೇ ಬಾರಿ ವಜಾ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸುಳ್ಯ ಪಂಜ ಕೂತ್ಕುಂಜ ಗ್ರಾಮದ ಕಕ್ಯಾನ ಕಲ್ಕದ ಜಯಾನಂದ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿರುವ ಐವರು ಆರೋಪಿಗಳ ಪೈಕಿ ಇಬ್ಬರ ಜಾಮೀನು ಅರ್ಜಿಯನ್ನು ನ್ಯಾಯಾಲಯ ಎರಡನೇ ಬಾರಿಗೆ ವಜಾಗೊಳಿಸಿದೆ.

ಕಳೆದ ಜುಲೈ 14ರಂದು ನಾಪತ್ತೆಯಾಗಿದ್ದ ಜಯಾನಂದ ಅವರ ಶವ ಜು.29ರಂದು ಪೆರುವಾಜೆ ಗ್ರಾಮದ ಒಡ್ಯ ಕಾಡಿನಲ್ಲಿ ಪತ್ತೆಯಾಗಿತ್ತು.ಕಾಣಿಯೂರು ಮೂಲದ ಜಯಾನಂದರವರ ಪತ್ನಿ ಲಲಿತಾ ಮತ್ತು ಧನಂಜಯ ಪಂಜ ಎಂಬಾತನ ನಡುವಿನ ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ಜಯಾನಂದ ಅವರನ್ನು ಅಪಹರಿಸಿ ಕೊಲೆಗೈದಿರುವುದನ್ನು ಪತ್ತೆಮಾಡಿದ್ದ ಪೊಲೀಸರು ಲಲಿತಾ, ಧನಂಜಯ, ಚಂದ್ರಕಾಂತ್ ಕರುಂಬು ನೆಕ್ಕಿಲು, ಕಾಣಿಯೂರು ಕಾಮಣದ ದಿನೇಶ್ ಮಜಲಡ್ಕ ಹಾಗೂ ಕಾಪೆಜಾಲು ಕೆಳಗಿನಕೇರಿ ಚಿಂತನ್ ಎಂಬವರನ್ನು ಬಂಧಿಸಿದ್ದರು.ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳ ಪೈಕಿ ಧನಂಜಯ ಮತ್ತು ಚಿಂತನ್ ಜಾಮೀನು ಕೋರಿ ಜಿಲ್ಲಾ ಐದನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.ಸರಕಾರಿ ಅಭಿಯೋಜಕ ಉದಯ್ ಕುಮಾರ್‌ರವರ ವಾದವನ್ನು ಪುರಸ್ಕರಿಸಿದ್ದ ನ್ಯಾಯಾಲಯ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು.ನಂತರದ ಬೆಳವಣಿಗೆಯಲ್ಲಿ, ಆರೋಪಿಗಳಾದ ಚಂದ್ರಕಾಂತ್ ಮತ್ತು ಚಿಂತನ್ ಅವರು ಜಾಮೀನಿನಲ್ಲಿ ಬಿಡುಗಡೆ ಕೋರಿ ಮತ್ತೆ ಪುತ್ತೂರಿನ ಐದನೇ ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು ಜಾಮೀನು ಅರ್ಜಿಯನ್ನು ವಜಾಗೊಳಿಸಿ ಜ.೨೩ರಂದು ಆದೇಶಿಸಿದ್ದಾರೆ.

ಧನಂಜಯರ ಜಾಮೀನು ಹೈಕೋರ್ಟ್‌ನಲ್ಲಿ ವಜಾ:

ಜಿಲ್ಲಾ ನ್ಯಾಯಾಲಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದ ಬಳಿಕ ಆರೋಪಿ ಧನಂಜಯ ರಾಜ್ಯ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು ಹೈಕೋರ್ಟ್ ಕೂಡಾ ಅರ್ಜಿಯನ್ನು ವಜಾಗೊಳಿಸಿದೆ.ಇದೀಗ ಮತ್ತೆ ಆತ ಜಿಲ್ಲಾ ಐದನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು ಇದರ ವಿಚಾರಣೆ ಜ.೨೭ಕ್ಕೆ ಮುಂದುವರಿಯಲಿದೆ.

ಸ್ಪಷ್ಟನೆ: ಪ್ರಕರಣದ ಆರೋಪಿಗಳಾದ ಚಂದ್ರಕಾಂತ್ ಮತ್ತು ಚಿಂತನ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿ ನ್ಯಾಯಾಲಯ ಆದೇಶಿಸಿತ್ತು ಎಂದು ಜ.೨೫ರ ಪತ್ರಿಕೆಯಲ್ಲಿ ತಪ್ಪಾಗಿ ವರದಿ ಪ್ರಕಟವಾಗಿದ್ದು ಪ್ರಮಾದಕ್ಕೆ ವಿಷಾದಿಸುತ್ತೇವೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.